ಮೆರೂನ್ ಡ್ರೆಸ್‌ನಲ್ಲಿ ಮೈ ಬಳುಕಿಸಿದ ವೈಷ್ಣವಿ ಗೌಡ: ನಿಜವಾಗ್ಲೂ ನೀವು ಮಾರ್ಡನ್ ಸೀತಮ್ಮನೇ ಎಂದ ಫ್ಯಾನ್ಸ್!

Published : Nov 11, 2023, 02:30 AM IST

ನಟಿ ವೈಷ್ಣವಿ ಗೌಡ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿದ್ದ ತಾರೆ, ಸದ್ಯ 'ಸೀತಾರಾಮ' ಸೀರಿಯಲ್​ನಲ್ಲಿ ಮಿಂಚುತ್ತಿದ್ದಾರೆ. ಸೀತಾಳ ಪಾತ್ರದಲ್ಲಿ ಅಭಿನಯಿಸುತ್ತಿರುವ ಇವರ ನಟನೆಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. 

PREV
16
ಮೆರೂನ್ ಡ್ರೆಸ್‌ನಲ್ಲಿ ಮೈ ಬಳುಕಿಸಿದ ವೈಷ್ಣವಿ ಗೌಡ: ನಿಜವಾಗ್ಲೂ ನೀವು ಮಾರ್ಡನ್ ಸೀತಮ್ಮನೇ ಎಂದ ಫ್ಯಾನ್ಸ್!

ನಟಿ ವೈಷ್ಣವಿ ಗೌಡ ಅವರು ಇತ್ತೀಚೆಗೆ ಆಕರ್ಷಕವಾದ ಫೊಟೋಗಳನ್ನು ಶೇರ್ ಮಾಡಿದ್ದಾರೆ. ಮೆರೂನ್​ ಬಣ್ಣದ ಮೈಗಂಟುವ ಸ್ಟೈಲಿಶ್​ ಗೌನ್ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟ ವೈಷ್ಣವಿ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ ಎನ್ನುವುದರಲ್ಲಿ ನೋ ಡೌಟ್.

26

ಫ್ಯಾಷನ್​ ಬಗ್ಗೆ ಹೆಚ್ಚು ಕ್ರೇಜ್​ ಇಟ್ಟಿಕೊಂಡಿರುವ ವೈಷ್ಣವಿ ಗೌಡ ಸ್ಟೈಲಿಶ್​ ಗೌನ್​ನಲ್ಲಿ ತಮ್ಮ ಅಂದ ಪ್ರದರ್ಶಿಸಿದ್ದಾರೆ. ಬಗೆ ಬಗೆಯ ಭಂಗಿಯಲ್ಲಿ ನಿಂತು ಕ್ಯಾಮರಾ ಮುಂದೆ ಮೈ ಬಳುಕಿಸಿದ್ದಾರೆ. ನೋಡುಗರ ಕಣ್ಮನ ಸೆಳೆದಿದ್ದಾರೆ.

36

ವೈಷ್ಣವಿ ಫೋಟೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಸೂಪರ್ ಸ್ಮೈಲ್, ಬ್ಯೂಟಿಫುಲ್, ನೀವು ನಿಜವಾಗಲೂ ಸೀತಾರಾಮ ಧಾರಾವಾಹಿಯ ಸೀತನಾ ಹಾಗೂ ಮಾರ್ಡನ್ ಸೀತಮ್ಮ ಅಂತೆಲ್ಲಾ ತರೇಹವಾರಿ ಕಾಮೆಂಟ್ ಮಾಡಿದ್ದಾರೆ.

46

ಜೀ ಕನ್ನಡದ 'ದೇವಿ' ಸೀರಿಯಲ್‍ನಿಂದ ವೈಷ್ಣವಿ ಗೌಡ ಅವರ ಕಿರುತೆರೆ ಪಯಣ ಆರಂಭವಾಯಿತು. ನಂತರ 'ಪುನರ್ ವಿವಾಹ'ದಲ್ಲಿ ನಟಿಸಿ ಜನರ ಮನಸ್ಸು ಗೆದ್ದರು. ನಂತರ ಅಗ್ನಿಸಾಕ್ಷಿಯಲ್ಲಿ ನಟಿಸಿ ಕರುನಾಡ ಮನೆ ಮಗಳಾದರು.

56

ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08 ಸ್ಪರ್ಧಿ ಆಗಿದ್ದರು. ಟಾಪ್ 05 ತನಕ ವೈಷ್ಣವಿ ಅವರು ಬಂದಿದ್ದರು. ಬಿಗ್ ಬಾಸ್ ಮೂಲಕ ಮತ್ತೆ ವೈಷ್ಣವಿ ಜನರಿಗೆ ಇಷ್ಟ ಆಗಿದ್ದರು. ಅವರ ಆನೆ ಮತ್ತು ಇರುವೆ ಜೋಕ್ ಜನ ಇನ್ನೂ ಮರೆತಿಲ್ಲ.

66

ಸೋಷಿಯಲ್​ ಮೀಡಿಯಾದಲ್ಲೂ ಸಖತ್​ ಆಕ್ಟೀವ್​ ಆಗಿರುವ ನಟಿಗೆ ಇನ್​ಸ್ಟಾಗ್ರಾಮ್​ನಲ್ಲಿ 1.3 ಮಿಲಿಯನ್​ ಫಾಲೋವರ್ಸ್​ ಇದ್ದಾರೆ. ಈವರೆಗೆ 1,000 ಕ್ಕೂ ಹೆಚ್ಚು ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಫ್ಯಾಷನ್​ ಬಗ್ಗೆ ಹೆಚ್ಚು ಕ್ರೇಜ್​ ಇಟ್ಟಿಕೊಂಡಿರುವ ಇವರು ಸ್ಟೈಲಿಶ್​ ದಿರಿಸಿನಲ್ಲಿ ಫೋಟೋಶೂಟ್​ ಮಾಡಿಸುತ್ತಾರೆ. 

Read more Photos on
click me!

Recommended Stories