ಗಾಯಕಿ ಆಶಾ ಭಟ್ ಕರ್ನಾಟಕದರಲ್ವಾ? ಕನ್ನಡತಿನಾ ಅಂತ ಕೇಳಿದ್ದಕ್ಕೆ… ಹೀಗಂದಿದ್ದು ಯಾಕೆ?

Published : Nov 10, 2023, 05:42 PM IST

ಸರಿಗಮಪ ಮೂಲಕ ಕನ್ನಡಿಗರ ಮನೆಮಾತಾದ ಗಾಯಕಿ ಆಶಾ ಭಟ್. ಬಿಗ್ ಬಾಸ್ ಗೆ ಹೋಗ್ತಾರೆ ಅಂತ ಸುದ್ದಿಯಾಗಿತ್ತು. ಇವರು ಇದೀಗ ಕನ್ನಡತಿನಾ ಅಂತಾ ಕೇಳಿದ್ದಕ್ಕೆ ಕನ್‌ಫ್ಯೂಸ್ ಆಗಿದ್ದಾರೆ. ಚೆನ್ನಾಗಿ ಕನ್ನಡ ಓದಲು, ಬರೆಯಲು ಬರುತ್ತೆ ಅಂತ ಹೇಳಿದರೂ ಮನೆಯಲ್ಲಿ ಮಾತನಾಡೋದು ಹವ್ಯಕ ಕನ್ನಡ ಅಂದಿದ್ದಾರೆ. ಆದರೆ, ಕನ್ನಡತಿ ಅಂತ ಹೇಳಲು ಹಿಂದು ಮುಂದು ನೋಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.    

PREV
18
ಗಾಯಕಿ ಆಶಾ ಭಟ್ ಕರ್ನಾಟಕದರಲ್ವಾ? ಕನ್ನಡತಿನಾ ಅಂತ ಕೇಳಿದ್ದಕ್ಕೆ… ಹೀಗಂದಿದ್ದು ಯಾಕೆ?

ಝೀಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ ಸರಿಗಮಪ. ಸಂಗೀತದ ರಸದೌತಣ ಉಣಿಸುವ ಈ ಕಾರ್ಯಕ್ರಮದ ಮೂಲಕವೇ ಜನಪ್ರಿಯತೆ ಗಳಿಸಿದವರು ಗಾಯಕಿ ಆಶಾ ಭಟ್ (Asha Bhat). 
 

28

ಸರಿಗಮಪ ಸೀಸನ್ 17 (Saregamapa Season 17) ರ ಸ್ಪರ್ಧಿಯಾಗಿ ಭಾಗವಹಿಸಿದ್ದ ಆಶಾ ಭಟ್, ತಮ್ಮ ಮೃದು ಮಾತು, ಅದ್ಭುತ ಗಾಯನ, ನೋಡಲು ಬೊಂಬೆಯಂತಿದ್ದ ಇವರು, ಫೆವರಿಟ್ ಸ್ಪರ್ಧಿಯಾಗಿ ಜಡ್ಜ್ ಗಳ ಜೊತೆಗೆ ಪ್ರೇಕ್ಷಕರ ಮನಸನ್ನು ಸಹ ಗೆದ್ದಿದ್ದರು. 
 

38

ಈ ಬಾರಿ ಬಿಗ್ ಬಾಸ್ (Bigg Boss ) ಆರಂಭವಾಗೋದಕ್ಕೂ ಮುನ್ನ, ಬಿಗ್ ಬಾಸ್ ಗೆ ಯಾರೆಲ್ಲಾ ಹೋಗಬಹುದು ಎನ್ನುವ ಚರ್ಚೆ ಬಲು ಜೋರಾಗಿ ಇರೋವಾಗ ಆಶಾ ಭಟ್ ಹೆಸರು ಸಹ ಕೇಳಿ ಬಂದಿತ್ತು, ಇವರು ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಒಬ್ಬರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಹೋಗಿಲ್ಲ. 
 

48

ಇದೀಗ ಪೋಡೋಕಾಸ್ಟ್ (podcast) ಒಂದರಲ್ಲಿ ಇಂಟರ್ವ್ಯೂವರ್ ಆಶಾ ಭಟ್ ಅವರನ್ನು ನೀವು ಕನ್ನಡಿಗರೇ ಎಂದು ಕೇಳಿದ್ದಕ್ಕೆ ಆಶಾ…ಅಯ್ಯೋ ಎಂದು ಹೇಳುತ್ತಾ? ನಾನು ಇದರ ಬಗ್ಗೆ ತಿಳಿದು ಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಹಾಗಿದ್ರೆ ಇವರು ಕನ್ನಡಿಗರು ಅಲ್ವಾ? ಯಾಕೆ ಆಶಾ ಭಟ್ ಹೀಗೆ ಹೇಳಿದ್ರು… 
 

58

ಆಶಾ ಭಟ್ ತನ್ನ ಬಗ್ಗೆ ತಾನು ಹೇಳುವಂತೆ ಇವರು ಮನೆಯಲ್ಲಿ ಮಾತನಾಡೋ ಭಾಷೆ ಹವ್ಯಕ ಭಾಷೆ. ಇವರ ತಾಯಿ ಕೇರಳದವರು, ತಂದೆ ಬೆಂಗಳೂರಿನವರು. ತಂದೆಯವರ ಮೂಲ ಊರು ಕೇರಳ ಅಂತೆ. ಆದ್ರೆ ಆಶಾ ಹುಟ್ಟಿ ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲಂತೆ. 
 

68

ತಮ್ಮ ಮೂಲ ಊರು ಬೇರೆಯಾಗಿರೋದ್ರಿಂದ ಆಶಾ ತಾನು ಕನ್ನಡತಿ ಹೌದೋ ಅಲ್ವೋ ಅಂತ ಹೇಳೊದಕ್ಕೆ ತಡವರಿಸಿದ್ರು. ಆದರೆ ಇವರೇ ಹೇಳುವಂತೆ ಅವರು ತುಂಬಾನೆ ಚೆನ್ನಾಗಿ ಕನ್ನಡ ಮಾತನಾಡ್ತಾರಂತೆ, ತುಂಬಾನೇ ಚೆನ್ನಾಗಿ ಕನ್ನಡ ಬರೆಯುತ್ತಾರಂತೆ. 
 

78

ಇನ್ನು ಕರಿಯರ್ (career) ಬಗ್ಗೆ ಹೇಳೊದಾದ್ರೆ ಸದ್ಯ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡುತ್ತಿರುವ ಆಶಾ, ಓದಿನ ಜೊತೆಗೆ ತಮ್ಮ ಪ್ಯಾಶನ್ ಕೂಡ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ಆಶಾ ಭಟ್ ಸಂಗೀತ ದಿಗ್ಗಜರೊಂದಿಗೆ ಸ್ಟೇಜ್ ಶೋ ಕೂಡ ನೀಡಿದ್ದಾರೆ. 
 

88

ಇನ್ನೂ ಹಲವು ಆಲ್ಬಂ ಗೀತೆಗಳನ್ನು ಹಾಡಿರುವ ಆಶಾ ಅದ್ಭುತ ಕಂಠದಿಂದ ಒಂದು ಮರಾಠಿ, ಒಂದು ಹಿಂದಿ ಹಾಡು ಜೊತೆಗೆ ತುಳು ಭಾಷೆಯಲ್ಲೂ (tulu film) ಒಂದು ಹಾಡು ಹಾಡಿದ್ದಾರಂತೆ. 
 

click me!

Recommended Stories