‘ಕರ್ಣ’ನ ಎಂಟ್ರಿಗಾಗಿ ಶೀಘ್ರದಲ್ಲೇ ಅಂತ್ಯ ಕಾಣಲಿದೆಯೇ ಝೀ ವಾಹಿನಿಯ ಈ ಜನಪ್ರಿಯ ಧಾರಾವಾಹಿ?

Published : Mar 13, 2025, 03:19 PM ISTUpdated : Mar 13, 2025, 04:46 PM IST

ಝೀ ಕನ್ನಡದಲ್ಲಿ ಕರ್ಣ ಧಾರಾವಾಹಿಯ ಪ್ರೊಮೋ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿದೆ, ಹೊಸ ಸೀರಿಯಲ್ ಗಾಗಿ ಜನಪ್ರಿಯ ಧಾರಾವಾಹಿಯೊಂದು ಶೀಘ್ರದಲ್ಲೇ ಅಂತ್ಯ ಕಾಣಲಿದೆ ಎನ್ನಲಾಗುತ್ತಿದೆ.   

PREV
15
‘ಕರ್ಣ’ನ ಎಂಟ್ರಿಗಾಗಿ ಶೀಘ್ರದಲ್ಲೇ ಅಂತ್ಯ ಕಾಣಲಿದೆಯೇ ಝೀ ವಾಹಿನಿಯ ಈ ಜನಪ್ರಿಯ ಧಾರಾವಾಹಿ?

ಝೀ ಕನ್ನಡದಲ್ಲಿ ಸದ್ಯದಲ್ಲಿ ಹೊಸ ಧಾರಾವಾಹಿ ಶುರುವಾಗಲಿದೆ. ಈಗಾಗಲೇ ಧಾರಾವಾಹಿಯ ಪ್ರೊಮೋ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಅದು ಯಾವ ಧಾರಾವಾಹಿ ಹಾಗೂ ನಾಯಕ ಯಾರು? ಕಥೆ ಏನು ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿರಬಹುದು ಅಲ್ವಾ?

25

ಹೌದು, ಝೀ ಕನ್ನಡದಲ್ಲಿ ಹೊಸ ಧಾರಾವಾಹಿ ‘ಕರ್ಣ’ ಶೀಘ್ರದಲ್ಲಿ ಶುರುವಾಗಲಿದೆ. ಧಾರಾವಾಹಿಯಲ್ಲಿ ಕರ್ಣನಾಗಿ ಕನ್ನಡತಿ ಸೀರಿಯಲ್ ಖ್ಯಾತಿಯ ಹರ್ಷ ಆಲಿಯಾಸ್ ಕಿರಣ್ ರಾಜ್ ನಟಿಸುತ್ತಿದ್ದಾರೆ. ಪ್ರೊಮೋ ಬಿಡುಗಡೆಯಾಗಿ ಒಂದೇ ದಿನದಲ್ಲಿ 6 ಮಿಲಿಯನ್ ವ್ಯೂವ್ಸ್ ಆಗುವ ಮೂಲಕ ದಾಖಲೆ ಬರೆದಿದೆ. ಕಿರಣ್ ರಾಜ್ (Kiran Raj) ಕನ್ನಡತಿ ಧಾರಾವಾಹಿಯ ಮೂಲಕ ಜನಪ್ರಿಯತೆ ಗಳಿಸಿದ ನಟ. ಇದೀಗ ಮತ್ತೆ ಕರ್ಣ ಧಾರಾವಾಹಿಯ ಮೂಲಕ ತೆರೆ ಮೇಲೆ ಬರಲಿದ್ದಾರೆ.

35

ಈ ಧಾರಾವಾಹಿಯಲ್ಲಿ ಕಿರಣ್ ರಾಜ್ ಗೈನಕಾಲಜಿಸ್ಟ್ ಆಗಿ ನಟಿಸಲಿದ್ದಾರೆ. ಮನೆಗೆ ರಂಗೋಲಿ ಹಾಕೋದರಿಂದ ಹಿಡಿದು, ಮನೆಯ ಅಡುಗೆ ಕೆಲಸ , ಇಸ್ತ್ರಿ ಮಾಡುವ ಕೆಲಸ ಎಲ್ಲವನ್ನೂ ಮಾಡುವ ಹುಡುಗ ಕರ್ಣ. ಆದರೆ ಅಪ್ಪನಿಂದ ತಿರಸ್ಕರಿಸಲ್ಪಟ್ಟ ಹುಡುಗ ಈತ. ಆತ ಆ ಮನೆಯ ಸ್ವಂತ ಮಗನಾಗಿರೋದಿಲ್ಲ. ಹಾಗಾಗಿ ಅಪ್ಪನಿಗೆ ಆತನನ್ನು ಮಗನಾಗಿ ಸ್ವೀಕರಿಸೋದಕ್ಕೆ ಇಷ್ಟಾನೆ ಇರೋದಿಲ್ಲ. ಆದರೆ ಆ ಮನೆಯ ಮಗ ಕರ್ಣ ಮನೆಗಾಗಿ, ಮನೆಯವರಿಗಾಗಿ ಏನು ಬೇಕಾದರೂ ಮಾಡೊದಕ್ಕೆ ಸಿದ್ಧ. ಇದಿಷ್ಟು ಪ್ರೊಮೋದಲ್ಲಿ ಪ್ರಸಾರವಾಗಿದೆ. ಕರ್ಣ ಧಾರಾವಾಹಿ ಶೀಘ್ರದಲ್ಲಿ ರಿಲೀಸ್ ಆಗಲಿದೆ ಅನ್ನೋದಾದ್ರೆ ಝೀ ವಾಹಿನಿಯ ಧಾರಾವಾಹಿಯೊಂದು ಶೀಘ್ರದಲ್ಲಿ ಮುಗಿಯುವ ಸಾಧ್ಯತೆ ಕೂಡ ಇದೆ. 
 

45

ಹೌದು ಹೊಸ ಧಾರಾವಾಹಿ ಬರುತ್ತಿದೆ ಅಂದರೆ ಮೇಲೆ ಒಂದು ಸೀರಿಯಲ್ ಮುಗಿಯಲೇಬೇಕಲ್ವಾ? ಹಾಗಾಗಿ ಜನ ಸೋಶಿಯಲ್ ಮೀಡಿಯಾದಲ್ಲಿ ಅಮೃತಧಾರೆ ಅಥವಾ ಶ್ರೀರಸ್ತು ಶುಭಮಸ್ತು ಧಾರಾವಾಹಿ ಶೀಘ್ರದಲ್ಲೆ ಕೊನೆ ಕಾಣಲಿದೆ ಎನ್ನುತ್ತಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial), ಗೌತಮ್, ಎಲ್ಲಾ ರೀತಿಯ ತೊಡಕುಗಳನ್ನು ದೂರ ಮಾಡಿ, ಕೊನೆಗೆ ಭೂಮಿಕಾ ಕತ್ತಿಗೆ ತಾಳಿ ಕಟ್ಟಿದ್ದಾನೆ, ಅಲ್ಲದೇ ಇದೇ ಸಂದರ್ಭದಲ್ಲಿ ಭೂಮಿಕಾ ಗರ್ಭಿಣಿ ಅನ್ನೊದು ಸಹ ಗೊತ್ತಾಗಿ, ಮನೆಮಂದಿಯ ಸಂತೋಷ ಕೂಡ ಹೆಚ್ಚಾಗಿದೆ. ಇದನ್ನು ನೋಡುತ್ತಿದ್ದರೆ, ಅಮೃತಧಾರೆ ಕೊನೆಯ ಹಂತಕ್ಕೆ ಬಂದು ಮುಟ್ಟಿದೆಯೇ? ಈ ಸೀರಿಯಲ್ ಶೀಘ್ರದಲ್ಲಿ ಕೊನೆಯಾಗಲಿದೆಯೇ ಎನ್ನುವ ಸಂಶಯ ಮೂಡಿದೆ. 
 

55

ಇನ್ನೊಂದು ಕಡೆ ಶ್ರೀರಸ್ತು ಶುಭಮಸ್ತು (Shreerastu Shubhamastu) ಧಾರಾವಾಹಿಯಲ್ಲೂ ಸಹ ತುಳಸಿಗೆ ಮಗುವಾಗಿದ್ದು, ಮನೆಮಂದಿ ಸಂತಸದ ಕಡಲಲ್ಲಿ ತೇಲಾಡುತ್ತಿದ್ದಾರೆ, ಇನ್ನೊಂದೆಡೆ ಶಾರ್ವರಿ ತುಳಸಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ. ಶಾರ್ವರಿಯ ಆಟವು ಬಯಲಾಗೋ ಹಂತದಲ್ಲಿದೆ. ಹಾಗಾಗಿ, ಈ ಧಾರಾವಾಹಿ ಕೂಡ ಮುಗಿಯಬಹುದು ಎನ್ನುವ ಸೂಚನೆ ಕೂಡ ಇದೆ. ಅಥವಾ ಬದಲಾದ ಸಮಯದಲ್ಲಿ ಪ್ರಸಾರವಾಗಲೂ ಬಹುದು. ಒಟ್ಟಲ್ಲಿ ಹೊಸ ಧಾರಾವಾಹಿಗೆ ದಾರಿ ಮಾಡಿ ಕೊಡಲು ಯಾವ ಧಾರಾವಾಹಿ ಕೊನೆಗಾಣಲಿದೆ ಅನ್ನೋದನ್ನು ಕಾದು ನೋಡಬೇಕು. 
 

Read more Photos on
click me!

Recommended Stories