ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ಜೋಡಿ ಪ್ರಿಯಾ ಆಚಾರ್- ಸಿದ್ದು ಮೂಲಿಮನಿ

Published : Feb 13, 2023, 04:39 PM IST

ಗಟ್ಟಿಮೇಳ ಪ್ರಿಯಾ ಮತ್ತು ಪಾರು ಸಿದ್ದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋ ಹಂಚಿಕೊಂಡಿದ್ದಾರೆ.

PREV
18
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ಜೋಡಿ ಪ್ರಿಯಾ ಆಚಾರ್- ಸಿದ್ದು ಮೂಲಿಮನಿ

ಕನ್ನಡ ಕಿರುತೆರೆ ಸೆಲೆಬ್ರಿಟಿ ಲವ್ ಬರ್ಡ್ಸ್‌  ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಫೆಬ್ರವರಿ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

28

ಬೆಂಗಳೂರಿನ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಯಾಗಿರುವ ಈ ಜೋಡಿಗೆ ಆಶೀರ್ವಾದ ಮಾಡಲು ಕಿರುತೆರೆ ಮತ್ತು ಬೆಳ್ಳಿ ತೆರೆ ಸೆಲೆಬ್ರಿಟಿಗಳು ಆಗಮಿಸಿದ್ದರು. 

38

ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ನವೆಂಬರ್ ತಿಂಗಳಿನಲ್ಲಿ ಗುರು ಹಿರಿಯರು ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡರು. ನಿನ್ನೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
 

48

ಪ್ರಿಯಾ ಮೂಲತಃ ದಾವಣಗೆರೆಯವರು ಆಗಿರುವ ಕಾರಣ ಫೆ.12 ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡು 14ರಂದು ದಾವಣಗೆರೆ ಹಮ್ಮಿಕೊಂಡಿದ್ದಾರೆ.

58

 ಮೆಹೇಂದಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಡಿಸೈನರ್‌ ವೇರ್‌ ಗ್ರೀನ್ ಡ್ರೆಸ್‌ ಧರಿಸಿ ಪ್ರಿಯಾ ಸ್ನೇಹಿತರ ಜೊತೆ ಮಿಂಚಿದ್ದಾರೆ. 

68

ರೆಸಾರ್ಟ್‌ನಲ್ಲಿ ಎರಡು ಕುಟುಂಬವರು ಸೇರಿಕೊಂಡು ಅರಿಶಿಣ ಶಾಸ್ತ್ರ ಮಾಡಿದ್ದಾರೆ. ಸ್ನೇಹಿತರು ಮತ್ತು ಕುಟುಂಬಸ್ಥರು ಹಳದಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ.

78

 ತಾಳಿ ಕಟ್ಟಿಸಿಕೊಂಡ ನಂತರ ಪ್ರಿಯಾ ಸಿದ್ದು ಅವರಿಗೆ ಮುತ್ತಿಟ್ಟಿರುವ ಫೋಟೋ ಹಾಗೂ ಸಿದ್ದು ಪ್ರಿಯಾ ಅವರಿಗೆ ಮುತ್ತಿಟ್ಟಿರುವ ಫೋಟೋ ಅಪ್ಲೋಡ್ ಮಾಡಿ ಮಿಸ್‌ ಟು ಮಿಸೆಸ್‌ ಎಂದು ಬರೆದುಕೊಂಡಿದ್ದಾರೆ. 

88

ಗೋಲ್ಡ್‌ ಬಣ್ಣ ರೇಶ್ಮೆ ಸೀರಿಯಲ್ಲಿ ಪ್ರಿಯಾ ಮಿಂಚಿದ್ದಾರೆ, ಕ್ರೀಮ್ ಬಣ್ಣದ ರೇಶ್ಮೆ ಪಂಚೆ-ಶೆಲ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿನೂತ ರಮ್ಯಾ ಎನ್ನುವವರು ಮೇಕಪ್ ಮಾಡಿದ್ದಾರೆ. 

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories