ಎಲ್ಲರನ್ನು ನಗಿಸುವ ಪಾರು ನಿಜ ಜೀವನದಲ್ಲಿ ವಿಶೇಷ ಚೇತನ ತಮ್ಮ; ಫೋಟೋ ವೈರಲ್!

Published : Mar 26, 2024, 11:50 AM IST

ಮುಗ್ಧ ಮನಸ್ಸಿನ ನಾಯಕಿ ಪಾರು ಉರ್ಫ್‌ ಮೋಕ್ಷಿತಾ ಪೈ ಅವರ ನಿಜ ಜೀವನದಲ್ಲಿ ಅರಗಿಸಿಕೊಳ್ಳಲು ಆಗದೇ ನೋವಿದೆ.....

PREV
19
ಎಲ್ಲರನ್ನು ನಗಿಸುವ ಪಾರು ನಿಜ ಜೀವನದಲ್ಲಿ ವಿಶೇಷ ಚೇತನ ತಮ್ಮ; ಫೋಟೋ ವೈರಲ್!

 ಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಮೋಕ್ಷಿತಾ ಪೈ ಈಗ ತೆಲುಗು ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. 

29

ತಮ್ಮ ಮುಗ್ಧ ನಗು ಹಾಗೂ ಅಷ್ಟೇ ಮುಗ್ಧ ಪಾತ್ರಗಳಿಂದ ಧಾರಾವಾಹಿಗೆ ಜೀವ ತುಂಬುತ್ತಿರುವ ಈ ನಟಿಯ ಬಾಳಿನಲ್ಲಿ ಮಾತ್ರ ಅತ್ಯಂತ ನೋವು ತುಂಬಿದೆ.ದರೆ ತೆರೆಯ ಮೇಲೆ ತಮ್ಮ ನಗುವಿನ ಮೂಲಕ ರಂಜಿಸುವ ಪಾರು ಅಲಿಯಾಸ್​ ಮೋಕ್ಷಿತಾ ಪೈ ಅವರ ಜೀವನದಲ್ಲಿಯೂ  ನೋವು ತುಂಬಿದೆ. 

39

ಅಸಲಿಗೆ ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಆತ ಮಾನಸಿಕ ಅಸ್ವಸ್ಥ. 

49

ಆತನ ಆರೈಕೆ ಮಾಡುವ ಜವಾಬ್ದಾರಿ ಮೋಕ್ಷಿತಾ ಅವರ ಮೇಲಿದೆ. ಒಮ್ಮೆ ರಿಯಾಲಿಟಿ ಷೋ ಒಂದಕ್ಕೆ ತಮ್ಮ ತಮ್ಮನನ್ನು ಕರೆದುಕೊಂಡು ಬಂದಿದ್ದ ಪಾರು ಅವರು, ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ.

59

ಈ ಸಹೋದರನಿಗಾಗಿಯೇ ತಮ್ಮ ಕನಸನ್ನೂ ನನಸು ಮಾಡಿಕೊಳ್ಳಲು ಆಗದೇ ನೋವುಂಡವರು ಮೋಕ್ಷಿತಾ. ನಟನಾ ಕ್ಷೇತ್ರಕ್ಕೆ ತಾವು ಕಾಲಿಡುತ್ತೇವೆ ಎಂಬ ಕನಸು ಕಂಡಿರಲಿಲ್ಲ. 

69

ಆದರೆ ಅವರ ಇಂಟರೆರಸ್ಟ್​ ಇದ್ದುದು  ಫ್ಯಾಷನ್ ಡಿಸೈನಿಂಗ್ ಮೇಲೆ. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಈ ಕೋರ್ಸ್​ ಅನ್ನು ಸೇರಿದ್ದರು. 

79

ಆದರೆ ಅದಾಗಲೇ ಅವರ ಅಮ್ಮ  ಗೋದಾವರಿಯವರು, ಬುದ್ಧಿಮಾಂದ್ಯ ಮಕ್ಕಳ ಬಗೆಗಿನ ಉನ್ನತ ಅಧ್ಯಯನಕ್ಕೆ ತೆರಳಿದ್ದರಿಂದ ಮೋಕ್ಷಿತಾ ತಮ್ಮನ ಆರೈಕೆ ಮಾಡುವುದಕ್ಕಾಗಿ  ಫ್ಯಾಷನ್ ಡಿಸೈನಿಂಗ್ ಕೋರ್ಸ್ ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂದಿತ್ತು. 

89

ಅಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋದ ಕಾರಣಕ್ಕೆ, ಹದಿಹರೆಯದಲ್ಲಿಯೇ ತಮ್ಮನ ಸಂಪೂರ್ಣ ಹೊಣೆ ಹೊತ್ತವರು ಮೋಕ್ಷಿತಾ.  ಅಮ್ಮ ವಾಪಸ್​ ಬರುವವರೆಗೂ ಮೋಕ್ಷಿತಾ ಅವರದ್ದೇ ಜವಾಬ್ದಾರಿ. 

99

ತಮ್ಮನ ಪಾಲಿನ ಅಪ್ಪ- ಅಮ್ಮ ಇಬ್ಬರೂ ಇವರೇ ಆದರು. ಈ ತಮ್ಮನಿಗೂ ಅಕ್ಕನೇ ಅಮ್ಮ ಆಗಿಬಿಟ್ಟಿದ್ದು, ತಮ್ಮನ್ನು ಆತ ತುಂಬಾ ಇಷ್ಟಪಡುವ ಬಗ್ಗೆ ಮೋಕ್ಷಿತಾ ಹೇಳುತ್ತಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories