ಮಂತ್ರಾಲಯದಲ್ಲಿ ಪಾರು ಫ್ಯಾಮಿಲಿ; ಪಕ್ಕದಲ್ಲಿರುವ ಹ್ಯಾಂಡ್ಸಮ್ ಹುಡುಗ ಯಾರು?

First Published | Oct 2, 2023, 9:30 AM IST

ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ರಾಯರ ದರ್ಶನ ಮಾಡಿದ ಪಾರು ಫ್ಯಾಮಿಲಿ. ಫೋಟೋ ವೈರಲ್...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಪಾರು ಧಾರಾವಾಹಿಯಲ್ಲಿ ಪಾರು ಪಾತ್ರದಲ್ಲಿ ಮಿಂಚುತ್ತಿರುವ ಮೋಕ್ಷಿತಾ ಪೈ.

ಫ್ಯಾಮಿಲಿ ಜೊತೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದು ದೇಗುಲದ ಎದುರು ನಿಂತುಕೊಂಡು ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ.

Tap to resize

 'ಓಂ ಶ್ರೀ ರಾಐವೇಂದ್ರಾಯ ನಮಃ' ಎಂದು ಮೋಕ್ಷಿತಾ ಬರೆದುಕೊಂಡಿದ್ದಾರೆ. ನಿಮ್ಮ ಪ್ರೀತಿಯಾ ಪಾರು, ಮೋಕ್ಷಿತಾ ಪೈ, ಪಾರು ಜೀ ಕನ್ನಡ ಎಂದು ಹ್ಯಾಷ್‌ಟ್ಯಾಗ್ ಕೊಟ್ಟಿದ್ದಾರೆ.

ರಾಯರು ಆರೋಗ್ಯ ಆಯುಷ್ಯ ನೀಡಲಿ ನಿಮ್ಮ ತಮ್ಮನಿಗೆ ಹೆಚ್ಚಿನ ಆರೋಗ್ಯ ನೀಡಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಇಂದು ನಿಮ್ಮನ್ನು ನೋಡಿದೆ ಎಂದಿದ್ದಾರೆ.

ಇನ್ನು ಪಾರು ಪಕ್ಕದಲ್ಲಿ ನಿಂತಿರುವ ಹುಡುಗರ ಯಾರು ಅನ್ನೋದು ಕೆಲವರ ಪ್ರಶ್ನೆ. ಆತ ಬೇರೆ ಯಾರೂ ಪಾರು ಧಾರಾವಾಹಿಯಲ್ಲಿ ನಟಿಸಿರುವ ಗಗನ್ ದೀಪ್. 

ಗಗನ್ ದೀಪ್ ಮತ್ತು ಮೋಕ್ಷಿತಾ ಅಕ್ಕ-ತಮ್ಮ. ಸದಾ ಒಟ್ಟಿಗಿರುತ್ತಾರೆ. ಯಾವುದೇ ಹಬ್ಬ ಬರಲಿ ಜೊತೆಗೆ ಆಚರಿಸುತ್ತಾರೆ. ಆನ್‌ಸ್ಕ್ರೀನ್ ಮಾತ್ರವಲ್ಲ ಆಫ್‌ಸ್ಕ್ರೀನ್‌ನಲ್ಲೂ ಇವರಿಬ್ಬರು ಅಕ್ಕ-ತಮ್ಮ. 

Latest Videos

click me!