ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲನ್ನು ಜನ ಇತ್ತೀಚೆಗಂತೂ ತುಂಬಾನೆ ಇಷ್ಟ ಪಟ್ಟು ನೋಡ್ತಿದ್ದಾರೆ. ಕತೆಗೆ ಮಹಾ ತಿರುವು ಸಿಕ್ಕಿದ ಮೇಲೆ ಸೀರಿಯಲ್ ನೋಡುವ ಅಭಿಮಾನಿಗಳಿಗೆ ತುಂಬಾನೆ ಖುಷಿಯಾದಂತಿದೆ.
ಇಲ್ಲಿವರೆಗೆ ಅಮ್ಮ ಹೇಳಿದ್ದೇ ವೇದವಾಕ್ಯ ಎಂದು ಅಮ್ಮನನ್ನು ಕುರುಡಾಗಿ ನಂಬಿಕೊಂಡು ಬರುತ್ತಿದ್ದ ವೈಷ್ಣವ್ ಗೆ ಇದೀಗ ಸತ್ಯದ ಅರಿವಾಗಿದ್ದು, ಅಮ್ಮ ಸ್ವಾರ್ಥಿ ಅನ್ನೋದನ್ನು ಅವನು ಅರ್ಥ ಮಾಡಿಕೊಂಡಿದ್ದಾರೆ. ಕತೆ ಈ ರೀತಿ ತಿರುವು ಪಡೆದಿರೋದಕ್ಕೆ ಸೀರಿಯಲ್ ಪ್ರಿಯರು ಫುಲ್ ಖುಷಿಯಾಗಿದ್ದಾರೆ.
ವೈಷ್ಣವ್ ಯಾವಾಗಲೂ ತಾನು ಹೇಳಿದಂತೆ ಕೇಳಬೇಕೆಂಬ ಮಗನ ಕುರಿತ ಹುಚ್ಚು ವ್ಯಾಮೋಹದಿಂದಾಗಿ ಕಾವೇರಿ ವೈಷ್ಣವ್ ಬರೆದ ಹಾಡನ್ನು ಬದಲಿಸಿ, ಲಕ್ಷ್ಮೀ ಬರೆದ ಹಾಡನ್ನು ಕಳುಹಿಸಿದ್ದು, ಆ ತಪ್ಪನ್ನು ಲಕ್ಷ್ಮೀ ಮೇಲೆ ಹಾಕಿಕೊಂಡಿದ್ದಳು.
ಲಕ್ಷ್ಮೀಯಿಂದಾಲೇ ತಪ್ಪಾಗಿದ್ದು ಎಂದು ಲಕ್ಷ್ಮೀ ಮೇಲೆ ಬೇಸರ ಮಾಡಿಕೊಂಡಿದ್ದ ವೈಷ್ಣವ್ ಗೆ ಸುಪ್ರೀತಾ ಸರಿ ದಾರಿ ತೋರಿಸಿದ್ದಾಳೆ. ಲಕ್ಷ್ಮಿ ಯಿಂದ ಎಂದಿಗೂ ತಪ್ಪಾಗಲು ಸಾಧ್ಯವಿಲ್ಲ ಅನ್ನೋದನ್ನು ವೈಷ್ಣವ್ ಗೆ ಅರ್ಥ ಮಾಡಿಸಿದ್ದಾಳೆ.
ಸೀರಿಯಲ್ ಪ್ರಿಯರಂತೂ ಕಾವೇರಿಯ ನಾಟಕ ನೋಡಿ , ಬಂಡವಾಳ ಬಯಲಾದದ್ದು ನೋಡಿ ಖುಷಿಪಟ್ಟಿದ್ದಾರೆ. ಯಮ್ಮ ತಾಯಿ ಯಾಕೆ ಮದ್ವೆ ಮಾಡದೇ ಕರ್ಮಕೆ , ಕೀರ್ತಿ ಬಂದ್ರೆ ಮಗ ದೂರ ಅಗ್ತಾನೆ ಅಂತ ಲಕ್ಷ್ಮಿ ನ ತಂದೆ ಈವಾಗ ನೋಡುದ್ರೆ ಅವ್ರನ್ನೆ ದೂರ ಮಾಡ್ತಿದ್ಯಲ್ಲಾ ಎಂದು ಬೈಯ್ಕೊಂಡಿದ್ದಾರೆ.
ಇನ್ನು ಕೆಲವರಂತೂ ಈ ಕಾವೇರಿ ಎಷ್ಟು ಸ್ವಾರ್ಥಿನಪಾ, ತಾನು ಮಾಡಿದ ತಪ್ಪನ್ನ ಆ ಪಾಪದ ಹುಡ್ಗಿ ತಲೆಗೆ ಕಟ್ಟಿದ್ದಲ್ಲದೇ ಸ್ವಲ್ಪನು ಪಾಪ ಪ್ರಜ್ಞೆ ಇಲ್ಲದೇ ನಿಂತಿದ್ದಾಳೆ. ಸುಪ್ರೀತಾ ಸರಿಯಾಗಿಯೇ ಮಾಡಿದ್ದಾಳೆ ಹೊಡಿರಿ ಚಪ್ಪಾಳೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಅಭಿಮಾನಿಯಂತೂ ಸುಪ್ರೀತಾ ಪ್ಲ್ಯಾನ್ ಗೆ ಸೋತು ಸುಪ್ರಿತಾ ಮೇಡಮ್ ಏನು ಬೇಕಾದರೂ ಮಾಡಿ. ಆದರೆ ಬಡವರ ಮನೆಯ ಹೆಣ್ಣುಮಗಳು, ಅಪ್ಪ ಅಮ್ಮ ಇರದ ಲಕ್ಷ್ಮೀ ಜೀವನ ಮಾತ್ರ ಹಾಳಾಗಬಾರದು ಹಾಗೇ ಮಾಡಿ. ಮುಂದಿನ ವರ್ಷ ನಿಮ್ಮ ಮಣ್ಣಿನ ಮೂರ್ತಿ ಇಟ್ಟು ಪೂಜೆ ಮಾಡಿ ಹೊಳೆಗೆ ಹಾಕ್ತಿವಿ ಎಂದು ಹೇಳಿದ್ದಾರೆ. ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.