ಅತ್ಯುತ್ತಮ ಸಿರಿಯಲ್ ಗಳಲ್ಲಿ ಒಂದೆನಿಸಿದ ರಾಮಾಚಾರಿ ಸೀರಿಯಲ್ ನಲ್ಲಿ (Ramachari serial) ರಾಮಾಚಾರಿಯ ತಂಗಿ ಶ್ರುತಿ ಪಾತ್ರವೂ ತುಂಬಾನೆ ಪ್ರಾಮುಖ್ಯತೆ ಇರುವ ಪಾತ್ರವಾಗಿದೆ. ಈ ಪಾತ್ರಕ್ಕೆ ಜೀವತುಂಬಿ ಅಪ್ಪಟ ಮುಗ್ಧೆಯಾಗಿ ಅಭಿನಯಿಸುತ್ತಿರುವ ನಟಿ ರಾಧಾ ಭಗವತಿ.
ತಮ್ಮ ಅದ್ಭುತ ನಟನೆಯ ಮೂಲಕ ಅಪ್ಪ ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುವಂತಹ ಮಗಳಾಗಿ, ರಾಮಾಚಾರಿಯ ಮುದ್ದಿನ ತಂಗಿ ಶ್ರುತಿಯಾಗಿ ನಟಿಸುತ್ತಿರುವ ರಾಧಾ (Radha Bhagavathi) ಇದೀಗ ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆ ಇಟ್ಟಿದ್ದಾರೆ.
ಹೌದು ರಾಧಾ ಭಗವತಿ ಇದೀಗ ವಸಂತ ಕಾಲದ ಹೂವುಗಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಮತ್ತೆ ಹಿರಿತೆರೆಯಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ, ಈ ಬೆಡಗಿ. ಈ ಚಿತ್ರವನ್ನು ಸಚಿನ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ.
ರಾಧಾಗೆ ಇದೇನು ಮೊದಲ ಸಿನಿಮಾ ಅಲ್ಲ, ಈಗಾಗಲೇ ಇವರು 90 ದಿನಗಳು ಎನ್ನುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಜನರಿಗೆ ಮೆಚ್ಚುಗೆ ಕೂಡ ಪಡೆದಿತ್ತು ಎನ್ನಲಾಗುತ್ತಿದೆ.
ಸದ್ಯಕ್ಕಂತೂ ರಾಧಾ ಸಾಲು ಸಾಲು ಚಿತ್ರಗಳಲ್ಲಿ ಆಫರ್ ಪಡೆಯುತ್ತಿದ್ದಾರೆ ಎಂದರೆ ತಪ್ಪಲ್ಲ. ಇವರು ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ', 'ವಸಂತ ಕಾಲದ ಹೂಗಳು' ಸಿನಿಮಾ,. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ.
ರಾಧಾ ಕೇವಲ ಅತ್ಯುತ್ತಮ ನಟಿ ಮಾತ್ರ ಅಲ್ಲ, ಇವರು ಸಿಂಗರ್ (singer) ಕೂಡ ಹೌದು, ಜೊತೆಗೆ ಕಂಠದಾನ ಕಲಾವಿದೆ ಕೂಡ ಹೌದು. ರಾಧಾ ಎರಡು ಸಿನಿಮಾಗಳಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರಂತೆ. ಜೊತೆಗೆ ಸೀರಿಯಲ್ ಒಂದಕ್ಕೆ ನಾಯಕಿ ಪಾತ್ರಕ್ಕೆ ಕಂಠದಾನ ಕೂಡ ಮಾಡಿದ್ದಾರೆ.
ಇನ್ನು ನಟನೆ ಅನ್ನೋದು ಇವರಿಗೆ ಹುಟ್ಟಿನಿಂದಲೇ ಬಂದಂತಹ ಕಲೆ. ಯಾಕಂದ್ರೆ ಮನೆಯಲ್ಲಿ ಇವರ ತಾತ ರಂಗಭೂಮಿ ಕಲಾವಿದರು, ಜೊತೆಗೆ ಹರಿಕಥೆ ಕೂಡ ಮಾಡುತ್ತಿದ್ದರು. ಇವರ ತಾಯಿ ಜನಪದ ಗೀತೆ ಗಾಯಕಿ. ಹಾಗಾಗಿ ನಟನೆ ಮತ್ತು ಗಾಯನ ಇವರ ರಕ್ತದಲ್ಲೇ ಇದೆ.
ವಸಂತ ಕಾಲದ ಹೂವುಗಳು ಟೀನೇಜು ಲವ್ ಸ್ಟೋರಿ (teenage love story) ಹೊಂದಿರುವ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರಾಧಾ, ಸುಮಾ ಎನ್ನುವ ಪಿಯುಸಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಕಿರುತೆರೆಯಲ್ಲಿ ಮೆಚ್ಚುಗೆ ಪಡೆದ ಈ ನಟಿ ಹಿರಿತೆರೆಯಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಕಾದು ನೋಡೋಣ.