ಸೋಷಿಯಲ್ ಮೀಡಿಯಾ ಕ್ವೀನ್, ಟಿಕ್‌ಟಾಕ್ ಸ್ಟಾರ್, ಡ್ಯಾನ್ಸ್ ಹಾಗೂ ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿರುವ ದಿಶಾ ಮದನ್ ತಮ್ಮ ಮಗಳ ಎರಡನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
26
ಲಕ್ಷ್ಮಿ ನಿವಾಸ ಧಾರಾವಾಹಿ ಮೂಲಕ ಜನರಿಗೆ ಭಾವನಾ ಅಮ್ಮ ಆಗಿ ಹತ್ತಿರವಾಗಿರುವ ದಿಶಾ ಮದನ್ ನಿಜವಾದ ಪುತ್ರಿ ಹೆಸರು ಅವಿರಾ. ಆಕೆಗೆ ಇಂದು 2 ವರ್ಷ ತುಂಬಿ ಮೂರನೇ ವರ್ಷಕ್ಕೆ ಬಿದ್ದಿದೆ.
36
'ನನ್ನ ಪುಟ್ಟ ಕಂದಮ್ಮನಿಗೆ ಇಂದು ಎರಡು ವರ್ಷ ಆಗಿದೆ. ನನ್ನ ಪ್ರೀತಿಯ ಅವಿರಾ ಈ ಸಮಯ ಇಷ್ಟಕ್ಕೆ ನಿಲ್ಲಬೇಕು ನೀನು ದೊಡ್ಡವಳಾಗಿ ಬೆಳೆಯಬಾರದು' ಎಂದು ದಿಶಾ ಬರೆದುಕೊಂಡಿದ್ದಾರೆ.
46
'ದೊಡ್ಡವಳಾಗುತ್ತಿದ್ದಂತೆ ಸ್ಟ್ರಾಂಗ್ ಹುಡುಗಿ ಆಗಬೇಕು. ನೀನು ಅಂದುಕೊಂಡಂತೆ ಬೆಳೆದು ಸಾಧನೆ ಮಾಡಬೇಕು. ನಾವೆಲ್ಲರೂ ನಿನ್ನನ್ನು ತುಂಬಾ ಕಷ್ಟ ಪಡುತ್ತೀವಿ' ಎಂದಿದ್ದಾರೆ ದಿಶಾ.
56
ಸೀರಿಯಲ್‌ನಲ್ಲಿ ಭಾವನಾ ಪುತ್ರಿ ಹೆಸರು ಖುಷಿ. ರಿಯಲ್ ಲೈಫ್ ಪುತ್ರಿ ಹೆಸರು ಅವಿರಾ. ಯಾಕೆ ನಿಮ್ಮ ನಿಜವಾದ ಮಗಳನ್ನು ಸೀರಿಯಲ್‌ನಲ್ಲಿ ನಟಿಸಬಾರದು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
66
ದಿಶಾ ಮದನ್ ಮತ್ತು ಶಶಾಂಕ್ ಹಲವು ವರ್ಷಗಳ ಕಾಲ ಪ್ರೀತಿ ಮದುವೆಯಾದರು. ಈ ಜೋಡಿಗೆ ಮಗ ಮತ್ತು ಮಗಳು ಇದ್ದಾರೆ. ದಿಶಾ ಎಷ್ಟು ಫೇಮಸ್ ಆಗಿದ್ದಾರೋ ಅವರ ಮಕ್ಕಳು ಕೂಡ ಅಷ್ಟೇ ಫೇಮಸ್.