ಸಾಮಾನ್ಯವಾಗಿ ಧಾರಾವಾಹಿಗಳಿಗೆ ಮದುವೆಯಾಗದ ಸುಂದರ ಯುವತಿಯರು ಹಾಗೂ ಯುವಕರನ್ನು ಕರೆತಂದು ನಾಯಕ-ನಾಯಕಿ ಪಾತ್ರಗಳನ್ನು ಕೊಡಲಾಗುತ್ತದೆ. ಇದರಲ್ಲಿ ಪ್ರೇಮಿಗಳು, ಗಂಡ-ಹೆಂಡತಿ ಇತ್ಯಾದಿ ಪಾತ್ರಗಳನ್ನು ಮಾಡುತ್ತಾರೆ. ಆದರೆ, ಇಲ್ಲೊಂದು ಜೋಡಿ ಧಾರಾವಾಹಿಯಲ್ಲಿ ಗಂಡ-ಹೆಂಡತಿಯಾಗಿ ಪಾತ್ರ ಮಾಡಿ ಎಂದರೆ, ನಿಜ ಜೀವನದಲ್ಲಿಯೇ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ನಿರ್ದೇಶಕರು ಈ ಧಾರಾವಾಹಿ ಮುಕ್ತಾಯಗೊಳಿಸಿದ್ದು, ಇದೀಗ ಸ್ವಂತ ಉದ್ಯಮವನ್ನು ಆರಂಭಿಸಿದ್ದಾರೆ..