PHOTOS: ಕನ್ನಡದ ಖ್ಯಾತ ನಟಿಯ ಸ್ವಂತ ಮನೆಯಲ್ಲೇ ನಡೆಯೋ Karna Serial ನಿಧಿ, ನಿತ್ಯಾ ಮನೆಯ ಶೂಟಿಂಗ್!‌ ಅಂತಿಂಥ ಮನೆಯಲ್ಲ!

Published : Aug 14, 2025, 10:45 PM IST

ಜನಪ್ರಿಯ ಕರ್ಣ ಧಾರಾವಾಹಿಯು ಕಳೆದ ಮೂರು ಧಾರಾವಾಹಿಗಳಿಂದ ಟಿಆರ್‌ಪಿಯಲ್ಲಿ ನಂ 1 ಸ್ಥಾನದಲ್ಲಿದೆ. ಈ ಧಾರಾವಾಹಿಯಲ್ಲಿ ನಿಧಿ, ನಿತ್ಯಾ ಮನೆಯು ಜನರ ಗಮನ ಸೆಳೆದಿದೆ. ಈ ಮನೆಯ ಶೂಟಿಂಗ್‌ ನಡೆಯುವುದು ಎಲ್ಲಿ? ಯಾರು ಈ ಮಾಲೀಕರು?

PREV
116

ಕರ್ಣ ಧಾರಾವಾಹಿಯಲ್ಲಿ ನಿಧಿ ಹಾಗೂ ನಿತ್ಯಾ ಮಿಡಲ್‌ ಕ್ಲಾಸ್‌ ಹುಡುಗಿಯರು. ಈ ಮನೆ ಪಕ್ಕಾ ಹಳ್ಳಿ ಸ್ಟೈಲ್‌ನಲ್ಲಿದೆ. ಬೆಂಗಳೂರಿನಲ್ಲಿ ಈ ಮನೆಯಿರೋದು ಇನ್ನೊಂದು ವಿಶೇಷ. 

216

ತುಂಬ ಸರಳವಾಗಿ, ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸೋ ಈ ಮನೆಯಲ್ಲಿ ನೂರಾರು ವಿಶೇಷತೆಗಳಿವೆ. 

416

ಅಡುಗೆ ಮನೆಗೆ ಗೋಡೆ ಇಲ್ಲ. ಮನೆಯ ಎಂಟ್ರಿ, ದೇವರ ಮನೆ, ಡೈನಿಂಗ್ ಹಾಲ್‌ಹೂ ಕೂಡ ಯಾವುದಕ್ಕೂ ಗೋಡೆಯೇ ಇಲ್ಲ. ಅಡುಗೆ ಮನೆಗೆ ಸ್ವಲ್ಪ ಮಾಡರ್ನ್‌ ಟಚ್‌ ಕೊಡಲಾಗಿದೆ. 

516

ಈ ಮನೆಯಲ್ಲಿ ಸೂರ್ಯನ ಬೆಳಕು ನೇರವಾಗಿ ಬೀಳುವುದು. ಇಲ್ಲಿ ತೊಟ್ಟಿ ಮನೆ ಡಿಸೈನ್‌ ಕೂಡ ಇದೆ. 

616

ಒಮ್ಮೆ ಪಾಂಡಿಚೆರಿಯ ದೇವಸ್ಥಾನದಲ್ಲಿರುವ ಬಾಗಿಲನ್ನು ಮಾರಲು ಇಟ್ಟಿದ್ದರು. ಆ ದೇಗುಲದ ಬಾಗಿಲನ್ನು ಖರೀದಿ ಮಾಡಿ ತಂದು ಇಲ್ಲಿ ಹಾಕಲಾಗಿದೆ.

716

ಈ ದೇವರ ಮನೆ ನಿಜಕ್ಕೂ ವಿಶೇಷ ಎನ್ನಬಹುದು. ದೇವಸ್ಥಾನದ ಥರ ಈ ರೂಮ್‌ ಇದೆ ಎನ್ನಬಹುದು. ಈ ದೇವರ ಮನೆ ಮೇಲೆ ಯಾರೂ ಕೂಡ ನಡೆಯಬಾರದು, ಬೆಡ್‌ರೂಮ್ ಕೂಡ ಮಾಡಿಕೊಳ್ಳಬಾರದು ಅಂತ ದೇವರ ಮನೆಯನ್ನು ಕೋಣೆ ಥರವೇ ಕಟ್ಟಿಸಿಲ್ಲ. ಆದರೆ ಬಾಗಿಲು ಮಾತ್ರ ಇಟ್ಟಿದ್ದಾರೆ.

816

ಪಾಂಡಿಚೆರಿಯಿಂದ ಟೀಕ್‌ವುಡ್ ತಂದು ಕೆಲವು ಬಾಗಿಲುಗಳನ್ನು ಮಾಡಲಾಗಿದೆ. ಕೆಲವೊಮ್ಮೆ ಹಳೆಯ ದೇವಸ್ಥಾನಗಳನ್ನು ಬಿಚ್ಚಲಾಗುವುದು. ಆ ದೇಗುಲದ ಬಾಗಿಲುಗಳು ವೇಸ್ಟ್‌ ಆಗುತ್ತವೆ, ಅಂಥವನ್ನು ಖರೀದಿ ಮಾಡಿ ಈ ಮನೆಗೆ ನೀಟ್‌ ಆಗಿ ಹಾಕಿಕೊಳ್ಳಲಾಗಿದೆ. 

916

ಈ ಮನೆಯಲ್ಲಿರುವ ಬಾಗಿಲುಗಳು, ಕಂಬಗಳು ಪ್ರತಿಯೊಂದಕ್ಕೂ ಒಂದು ಕಥೆಯಿದೆ. ಅಷ್ಟೇ ಅಲ್ಲದೆ ಸುಂದರವಾದ ಉಯ್ಯಾಲೆಯನ್ನು ಕೂಡ ಇದೆ. 

1016

ಅಂದಹಾಗೆ ಇದು ನಟಿ ಪದ್ಮಜಾ ರಾವ್‌ ಅವರ ಮನೆ. ಸದ್ಯ ಅವರು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

1116

ಪದ್ಮಜಾ ರಾವ್‌ ಅವರ ಮನೆಯ ಗೃಹ ಪ್ರವೇಶದ ಟೈಮ್‌ನಲ್ಲಿ ತೆಗೆದ ಫೋಟೋವಿದು. 20 ವರ್ಷಗಳಿಂದ ಮನೆ ಕಟ್ಟಬೇಕು ಎಂದು ಪದ್ಮಜಾ ರಾವ್‌ ಅಂದುಕೊಂಡಿದ್ದರು. ಅದರಂತೆ ಈ ಮನೆ ಕಟ್ಟಿ ಹತ್ತು ವರ್ಷ ಆಗುತ್ತ ಬಂತು. 

1216

ನಟಿ ವೈಶಾಲಿ ಕಾಸರವಳ್ಳಿ ಅವರು ಪದ್ಮಜಾಗೆ ಮನೆ ಕಟ್ಟಲು ಸಾಕಷ್ಟು ಸಲಹೆ ನೀಡಿದ್ದರಂತೆ. ಒಂದು ಕಡೆ ಪದ್ಮಜಾಗೆ ಎತ್ತಿನಗಾಡಿ ಚಕ್ರ ಕಂಡಿತ್ತು. ಅದನ್ನು ತಂದು ಮನೆಯ ಗೇಟ್‌ ಮಾಡಿಕೊಂಡಿದ್ದರು.  

1316

ಮೂಡಲಮನೆ ಧಾರಾವಾಹಿಯ ಮನೆ ರೀತಿ ನಮ್ಮ ಮನೆ ಕಟ್ಟಬೇಕು ಎಂದು ಪದ್ಮಜಾ ರಾವ್‌ ಅಂದುಕೊಂಡಿದ್ದರು. ಅಷ್ಟೇ ಅಲ್ಲದೆ ವಾಡೆಗಳ ಸ್ಫೂರ್ತಿ ಪಡೆದು ಈ ಮನೆ ಕಟ್ಟಲಾಗಿದೆ. 40*60 ಸೈಟ್ ಇರುವ ಈ ಮನೆಯಲ್ಲಿ ಪುಟ್ಟ ಗಾರ್ಡನ್ ಇದೆ. 

1416

ಈ ಮನೆಯಲ್ಲಿ ಎಲ್ಲಿ ನೋಡಿದರೂ ಮರದ ಪೀಠೋಪಕರಣಗಳು ಎದ್ದು ಕಾಣುತ್ತವೆ. ಬೆಂಗಳೂರಿನಲ್ಲಿ ಹಳ್ಳಿ ಮನೆ ಸ್ಟೈಲ್‌ನಲ್ಲಿ ಮನೆ ಮಾಡೋದು ತುಂಬ ಅಪರೂಪ, ಕಾಣೋದು ವಿರಳ. ಪಾಂಡಿಚೆರಿಯಿಂದ 8 ಕಂಬಗಳು, 2 ಬಾಗಿಲುಗಳು, ಹಳೇ ಕಾಲದ ಮಂಚ, ಖುರ್ಚಿಗಳನ್ನು ಖರೀದಿಸಿದ್ದರು. ಆಗ ಕೆಲ ಮರದ ಸ್ಟ್ಯಾಂಡ್‌ಗಳನ್ನು ಫ್ರೀ ಆಗಿ ಸಿಕ್ಕಿತ್ತು.

1516

ಮಗ ತಬಲಾ ಕಲಿಯುತ್ತಾನೆ ಎಂದು ಪದ್ಮಜಾ ರಾವ್‌ ಅವರು ತಬಲ ತಂದರು. ಆದರೆ ಮಗ ತಬಲವನ್ನು ಕಲಿತಿಲ್ಲ. ಅಂದಹಾಗೆ ಕನ್ನಡದ ಹಿಟ್ಲರ್‌ ಕಲ್ಯಾಣ ಧಾರಾವಾಹಿ ಶೂಟಿಂಗ್‌ ಕೂಡ ಇಲ್ಲೇ ನಡೆದಿತ್ತು. ಸಾಕಷ್ಟು ಸಿನಿಮಾಳ ಶೂಟಿಂಗ್‌ ಇಲ್ಲೇ ಆಗಿದೆ. 

1616

ಅಂದಹಾಗೆ ಈ ಮನೆ ಕಟ್ಟಲು ಪದ್ಮಜಾ ರಾವ್‌ ಸಾಲ ಮಾಡಿದ್ದರು. ಇಲ್ಲಿ ಧಾರಾವಾಹಿ, ಸಿನಿಮಾ ಶೂಟಿಂಗ್‌ ಆಗುತ್ತಿರೋದರಿಂದ ಈ ಮನೆಯ ಸಾಲವನ್ನು ಈ ಮನೆಯೇ ತೀರಿಸಿಕೊಳ್ಳುತ್ತಿದೆ ಎನ್ನುತ್ತಾರೆ ಪದ್ಮಜಾ ರಾವ್.

Read more Photos on
click me!

Recommended Stories