ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅಮೂಲ್ಯ ಗೌಡ (Amulya Gowda) ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
ಧಾರಾವಾಹಿಯಲ್ಲಿ ಮಾತ್ರ ಅಮೂಲ್ಯ ಹಳ್ಳಿ ಹುಡುಗಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ರಿಯಲ್ ಲೈಫ್‌ನಲ್ಲಿ ತುಂಬಾನೇ ಮಾರ್ಡನ್ (Modren girl) ಹುಡುಗಿ.
ಮೂರು ಕೇಕ್‌ಗಳನ್ನು (Cakes) ಕಟ್ ಮಾಡಿರುವ ಅಮೂಲ್ಯ ನೀಲಿ (Blue) ಬಣ್ಣದ ಚಡ್ಡಿ ಮತ್ತು ಕಪ್ಪು (Black) ಬಣ್ಣ ಟಾಪ್ ಧರಿಸಿದ್ದಾರೆ.
ಆಚರಣೆ ಮಾಡಿರುವ ಸ್ಥಳದ ಬಗ್ಗೆ ಮಾಹಿತಿ ಇಲ್ಲವಾದರೂ, ಫೋಟೋದಲ್ಲಿ ಇಡೀ ಜಾಗವನ್ನು ನೀಲಿ ಮತ್ತು ಬಳಿ ಬಣ್ಣದ ಬಲೂನ್‌ಗಳಿಂದ (Balloons) ಅಲಂಕಾರ ಮಾಡಲಾಗಿದೆ.
ಅಮೂಲ್ಯ ಕ್ಲೋಸ್ ಫ್ರೆಂಡ್ ಒಬ್ಬರು ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅವರು ಕೂಡ ನೀಲಿ ಬಣ್ಣದ ಉಡುಪು ಧರಿಸಿದ್ದರು. ಹೀಗಾಗಿ ಇದು ಬ್ಲೂ ಆ್ಯಂಡ್ ವೈಟ್ ಥೀಮ್ ಪಾರ್ಟಿ ಎನ್ನಬಹುದು.
'ಅರಮನೆ' (Aramane) ಧಾರಾವಾಹಿ ಮೂಲಕ ಧಾರಾವಾಹಿ ಜರ್ನಿ ಆರಂಭಿಸಿ, ಅಮೂಲ್ಯ ಗೌಡ ಜನಪ್ರಿಯತೆ ಪಡೆದುಕೊಂಡಿದ್ದು ಕಮಲಿಯಿಂದ.
ಸ್ವಾತಿ (Swathi) ಮತ್ತು ಪುನರ್ ವಿವಾಹದಲ್ಲಿ (Punar Vivaha) ನಟಿಸಿರುವ ಅಮೂಲ್ಯ ಲುಕ್‌ಗೆ ಹೈಲೈಟ್ ಅವರ ಉದ್ದವಾದ ಕೂದಲು. ನೆಟ್ಟಿಗರು ಇವರಿಂದ ಕೂದಲ ಟಿಪ್ಸ್ ಬೇಕು ಎಂದು ಆಗಾಗ ಕಾಮೆಂಟ್ ಮಾಡುತ್ತಾರೆ.