Kannadathi Serial: ಕನ್ನಡತಿಯ ಟೀಚರ್ ರಂಜನಿಯ ಡಿಫರೆಂಟ್ ಸೀರೆ ಲುಕ್ಸ್ ಇವು

First Published | Jan 16, 2022, 11:23 AM IST
  • Kannadathi Serial: ಧಾರವಾಹಿಯಲ್ಲಿ ಕನ್ನಡ ಟೀಚರ್ ಉಡೋ ಚಂದದ ಸೀರೆಗಳು
  • ರಂಜನಿ ಸೀರೆ ಕಲೆಕ್ಷನ್ ಹೇಗಿದೆ ? ಇಲ್ಲಿವೆ ನೋಡಿ ಕೆಲವು ಲುಕ್

ಕಿರುತೆರೆಯ ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ರಂಜನಿ ರಾಘವನ್ ಸೀರೆಯಲ್ಲಿ ಕಾಣಿಸಿಕೊಳ್ಳೋದೇ ಹೆಚ್ಚು. ಕನ್ನಡ ಟೀಚರ್ ಪಾತ್ರ ಮಾಡುವ ರಂಜನಿ ಸಹಜವಾಗಿಯೇ ಸೀರೆಯಲ್ಲಿಯೇ ಇರುತ್ತಾರೆ.

ಸೀರಿಯಲ್ ಕೆಲವು ಸೀನ್‌ಗಳಲ್ಲಿ ಮಾತ್ರ ನಟಿ ಕುರ್ತಾ, ಚೂಡಿದಾರ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ವಿಶೇಷ ಎಂದರೆ ನಟಿ ಹಿಂದಿನ ಪುಟ್ಟ ಗೌರಿ ಮದುವೆ ಧಾರವಾಹಿಯಲ್ಲಿಯೂ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಿದ್ದರು.

Tap to resize

ಇದೀಗ ಟೀಚರ್ ಪಾತ್ರ ಮಾಡುವುದರಿಂದ ದಿನಕ್ಕೊಂದು ಚಂದದ ಸೀರೆಯಲ್ಲಿ ಮಿಂಚುತ್ತಾರೆ ರಂಜನಿ. ಭುವಿ ಪಾತ್ರ ಉಡುವ ಸೀರೆಗಳನ್ನು ನೋಡೋದಕ್ಕೆಂದೇ ಧಾರವಾಹಿ ನೋಡುವವರು ಇಲ್ಲದಿಲ್ಲ.

ಅಷ್ಟಾಗಿ ಕನ್ನಡತಿ ಮತ್ತು ಸೀರೆಯ ಸಂಬಂಧವಿದೆ. ಅಚ್ಚುಕಟ್ಟಾಗಿ ಸೀರೆ ಉಡುವ ರಂಜನಿ ಲುಕ್ ಹೆಂಗಳೆಯರಿಗೆ ಫೇವರೇಟ್. ಸಿಂಪಲ್ ಸೀರೆ, ಅವುಗಳ ಬಣ್ಣ, ಉಡುವ ರೀತಿ ಎಲ್ಲರಿಗೂ ಅಚ್ಚುಮೆಚ್ಚು. ಅಂತ ಸುಂದರ ಸೀರೆಗಳ ಲುಕ್ ಇವು

ಕನ್ನಡತಿಯಲ್ಲಿ ಭುವಿ ಪಾತ್ರವನ್ನು ಮಾಡುವ ರಂಜನಿ ರಾಘವನ್ ನಿಜ ಜೀವನದಲ್ಲಿ ಕತೆಗಾರ್ತಿಯೂ ಹೌದು. ಅದ್ಭತ ನಟಿ ಎಂಬುದಂತೂ ಕನ್ನಡಿಗರಿಗೆ ಗೊತ್ತೇ ಇರುವ ವಿಚಾರ

ರಂಜನಿ ರಾಘವನ್ ಅವರು ಪುಟ್ಟಗೌರಿ ಧಾರವಾಹಿಯ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದರು. ಈಗ ಮತ್ತೆ ಕನ್ನಡತಿಯ ಮೂಲಕ ಧಾರವಾಹಿ ಪ್ರಿಯರ ಮನಸು ಗೆದ್ದಿದ್ದಾರೆ.

ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡುವ ಭುವಿ ಎಂಬ ಪಾತ್ರದಲ್ಲಿ ರಂಜನಿ ಕಾಣಿಸಿಕೊಂಡಿದ್ದು ನಟಿ ಸಹಜ ನಟನೆಯಿಂದ ಮತ್ತಷ್ಟು ಅಭಿಮಾನಿಗಳನ್ನು ಗೆದ್ದಿದ್ದಾರೆ

‘ಕನ್ನಡತಿ’ ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಟಿ ರಂಜನಿ ರಾಘವನ್‌ ಅವರ ‘ಕತೆ ಡಬ್ಬಿ’ ಕಥಾ ಸಂಕಲನ ಇಂದು ಬಿಡುಗಡೆಯಾದಾಗ ಅವರ ಅಭಿಮಾನಿಗಳು ಖುಷಿಯಾಗಿದ್ದರು. ಬಹುರೂಪಿ ಪ್ರಕಾಶನ ಇದನ್ನು ಪ್ರಕಟಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಂಜನಿ, ಕನ್ನಡ ಕಥಾ ಜಗತ್ತಿಗೆ ಹೊಸ ಓದುಗರನ್ನು ಕರೆತರಬೇಕು ಅನ್ನುವ ಉದ್ದೇಶ ನನ್ನದು. ಮೊದಲ ಸಂಕಲನ ಬಿಡುಗಡೆಯಾಗುತ್ತಿರುವ ಕಾರಣ ಭಯ, ಎಕ್ಸೈಟ್‌ಮೆಂಟ್‌, ಖುಷಿ ಎಲ್ಲವೂ ಇದೆ. ನಟನೆಯ ಕಾರಣ ನನಗೊಂದು ಅಭಿಮಾನಿ ಬಳಗವಿದೆ ಎಂದಿದ್ದರು ನಟಿ.

ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಬಿಡುವ ಮಾಡಿಕೊಂಡು ನಟಿ ಅಭಿಮಾನಿಗಳಿಗಾಗಿ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

Latest Videos

click me!