ಮದ್ವೆಯಾಗಿ 6 ತಿಂಗಳು ಅಂತ ರಕ್ತದಲ್ಲಿ ಪತಿ ಚಿತ್ರ ಬಿಡಿಸಿದ 'ಜೊತೆ ಜೊತೆಯಲಿ' ಶಿಲ್ಪಾ; ಹುಚ್ಚಾಟ ಎಂದ ನೆಟ್ಟಿಗರು

Published : Sep 11, 2023, 11:12 AM IST

ಶಿಲ್ಪಾ ಅಯ್ಯರ್ ಪ್ರೀತಿ ಮೆಚ್ಚಿಕೊಂಡವರಿಗಿಂತ ಹುಚ್ಚಾಟ ಎಂದವರೇ ಹೆಚ್ಚು. 6 ತಿಂಗಳ ಮದುವೆ ಆನಿವರ್ಸರಿ ಹೀಗೂ ಆಚರಿಸಿಕೊಳ್ಳಬಹುದಾ?

PREV
17
 ಮದ್ವೆಯಾಗಿ 6 ತಿಂಗಳು ಅಂತ ರಕ್ತದಲ್ಲಿ ಪತಿ ಚಿತ್ರ ಬಿಡಿಸಿದ 'ಜೊತೆ ಜೊತೆಯಲಿ' ಶಿಲ್ಪಾ; ಹುಚ್ಚಾಟ ಎಂದ ನೆಟ್ಟಿಗರು

ಜೀ ಕನ್ನಡ ಜನಪ್ರಿಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬ್ರದರ್-ಇನ್-ಲಾ ಅನ್ಕೊಂಡು ಮಿಂಚುತ್ತಿದ್ದ ಮಾನ್ಸಿ ಉರ್ಫಿ ಶಿಲ್ಪಾ ಐಯ್ಯರ್.

27

ಶಿಲ್ಪಾ ಅಯ್ಯರ್ ಮತ್ತು ಉದ್ಯಮಿ ಸಚಿನ್ ಮಾರ್ಚ್‌ 13ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ 6 ತಿಂಗಳ ಸಂಭ್ರಮದಲ್ಲಿದ್ದಾರೆ.

37

ಮದುವೆಯಾಗಿ 6 ತಿಂಗಳಾಗಿದೆ, ಪತಿಗೆ ಸ್ಪೆಷಲ್ ವಿಶ್ ಮಾಡಬೇಕು ಎಂದು ತಮ್ಮ ರಕ್ತದಲ್ಲಿ ಪತಿ ಭಾವಚಿತ್ರ ಬಿಡಿಸಿ ಗಿಫ್ಟ್‌ ಮಾಡಿದ್ದಾರೆ. 

47

ಸಂಜೀವ್ ಸಂಗಮ್ ಎನ್ನುವ ಆರ್ಟಿಸ್ಟ್‌ನ ಭೇಟಿ ಮಾಡಿದ ಶಿಲ್ಪಾ ತಮ್ಮ ರಕ್ತವನ್ನು ದಾನ ಮಾಡುವ ರೀತಿಯಲ್ಲಿ ಸಿರಿಂಜ್‌ ಫಿಲ್ ಮಾಡಿ ಕೊಟ್ಟಿದ್ದಾರೆ.

57

ಆ ರಕ್ತವನ್ನು ಬಳಸಿ ಸಂಗಮ್ ಎಂಬುವರು ಶಿಲ್ಪಾ ಪತಿ ಸೂಟ್ ಹಾಕಿರುವ ಫೋಟೋವನ್ನು ಬಿಡಿಸಿ ಫ್ರೇಮ್ ಹಾಕಿಕೊಟ್ಟಿದ್ದಾರೆ. ಹೀಗೆ ಮಾಡಿಸಲು ಸುಮಾರು 6,000 -10,000 ರೂಪಾಯಿ ಖರ್ಚು ಮಾಡಿದ್ದಾರೆ.

67

ಶಿಲ್ಪಾ ಬೆಳೆದಿದ್ದೆಲ್ಲಾ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ. ಪಕ್ಕಾ ಸಿಟಿ ಹುಡುಗಿ. ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ. ಕಾಂ ವಿದ್ಯಾಭ್ಯಾಸ ಮುಗಿಸಿದ ವಿದ್ವಾನ್ ಮಾರುತಿ ಪ್ರಸಾದ್ ಬಳಿ ಕರ್ನಾಟಕ ಸಂಗೀತವನ್ನು ಕಲಿತಿದ್ದಾರೆ.

77

ಇಷ್ಟೆಲ್ಲಾ ಟಾಲೆಂಟ್ ಇರುವ ಶಿಲ್ಪಾಗೆ ಸಿನೆಮಾ ಆಫರ್ ಹಾಗೂ ಪರಭಾಷೆಗಳಿಂದಲೂ ಅವಕಾಶಗಳು ಅರಸಿ ಬರುತ್ತಿದೆ.  'ಮೈಲಾಪುರ' ಎಂಬ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories