ಸತ್ಯ ಸೀರಿಯಲ್ ಈ ನಟಿ 2 ರಿಯಾಲಿಟಿ ಶೋ ವಿನ್ನರೂ ಹೌದು, ಹಿನ್ನೆಲೆ ಗಾಯಕಿಯೂ ಹೌದು!

Published : Sep 10, 2023, 03:30 PM IST

ಸತ್ಯ ಸೀರಿಯಲ್ ನಲ್ಲಿ ಸತ್ಯಾಳ ನಾದಿನಿ ರಿತು ಪಾತ್ರದಲ್ಲಿ ಮಿಂಚುತ್ತಿರುವ ನಟಿ ರಕ್ಷಿತಾ ಭಾಸ್ಕರ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳ ಬಗ್ಗೆ ತಿಳಿಯೋ ಕುತೂಹಲ ನಿಮಗಿದ್ದರೆ ಇದನ್ನ ಓದಿ…   

PREV
18
ಸತ್ಯ ಸೀರಿಯಲ್ ಈ ನಟಿ 2 ರಿಯಾಲಿಟಿ ಶೋ ವಿನ್ನರೂ ಹೌದು, ಹಿನ್ನೆಲೆ ಗಾಯಕಿಯೂ ಹೌದು!

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಸತ್ಯ ಸೀರಿಯಲ್ ನಲ್ಲಿ ಅಮೂಲ್ ಬೇಬಿ ಕಾರ್ತಿಕ್ ನ ಚಿಕ್ಕಪ್ಪನ ಮಗಳು, ಅಂದ್ರೆ ತಂಗಿ ರೀತುವಾಗಿ ನಟಿಸುತ್ತಿರುವ ನಟಿಯ ನಿಜವಾದ ಹೆಸರು ರಕ್ಷಿತಾ ಭಾಸ್ಕರ್ (Rakshita Bhaskar). 
 

28

ತೆಳ್ಳಗೆ, ಬೆಳ್ಳಗಿನ ಈ ಹುಡುಗಿ ಬಹುಮುಖ ಪ್ರತಿಭೆ ಅಂದ್ರೆ ತಪ್ಪಾಗಲ್ಲ. ನಟನೆಗೂ ಸೈ, ಕ್ಲಾಸಿಕಲ್ ಡ್ಯಾನ್ಸಿಗೂ (clasical dance) ಸೈ , ಅಷ್ಟೇ ಯಾಕೆ ಹಾಡು ಹೇಳೋದಕ್ಕೂ ಸೈ ಎನ್ನುವ ರಕ್ಷಿತಾ ಅದ್ಭುತ ಗಾಯಕಿ ಅನ್ನೋದನ್ನು ಅವರ ಹಾಡುಗಳನ್ನು ಕೇಳಿದ ಯಾರು ಬೇಕಾದರೂ ಹೇಳಬಹುದು. 
 

38

ಬಾಲ್ಯದಲ್ಲಿಯೇ ಸಂಗೀತ ಮತ್ತು ನೃತ್ಯ ಕಲಿತಿರುವ ರಕ್ಷಿತಾ. 2006 ಮತ್ತು 2007 ರಲ್ಲಿ ಕ್ರಮವಾಗಿ ಕನ್ನಡದ ಎದೆ ತುಂಬಿ ಹಾಡುವೆನು ಮತ್ತು ತೆಲುಗಿನ ಪಾಡಾಲಾನಿ ರಿಯಾಲಿಟಿ ಶೋಗಳಲ್ಲಿ (relaity show) ಭಾಗವಹಿಸಿ, ವಿಜೇತರೂ ಕೂಡ ಆಗಿದ್ದರು. 
 

48

ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ರಕ್ಷಿತಾ, ಹಲವಾರು ಡ್ಯಾನ್ಸ್ ಕಾರ್ಯಕ್ರಮಗಳನ್ನು ಸಹ ನೀಡಿದ್ದಾರೆ. ಅಲ್ಲದೇ ಇವರು ನಟನೆಯನ್ನು ತರಗತಿಗೆ ಹೋಗುವ ಮೂಲಕ ಅಭ್ಯಾಸ ಮಾಡಿದ್ದಾರೆ. ರಕ್ಷಿತಾ ಇಂದಿಗೂ ಸಹ ಬೆನಕ ಥಿಯೇಟರ್ ಎನ್ನುವ ರಂಗತಂಡದಲ್ಲಿ ಸಕ್ರಿಯರಾಗಿದ್ದಾರೆ. 
 

58

ಸತ್ಯ ಸೀರಿಯಲ್ ನಲ್ಲಿ (Satya serial) ಕಾಲೇಜು ಹುಡುಗಿಯಾಗಿ ನಟಿಸುತ್ತಿದ್ದು, ಜೊತೆಗೆ ರಾಕೇಶ್ ನನ್ನು ಮನಸಾರೆ ಪ್ರೀತಿಸುವ ಪ್ರೇಮಿಯಾಗಿ ಕೂಡ ನಟಿಸುತ್ತಿದ್ದಾರೆ. ರಿತು ಮತ್ತು ರಾಕೇಶ್ ಬಾಂಡಿಂಗ್ ಸಹ ಜನರಿಗೆ ಇಷ್ಟವಾಗಿದೆ. ಸತ್ಯ ಸೀರಿಯಲ್ ಗೂ ಮುನ್ನ ರಕ್ಷಿತಾ ಹೂಮಳೆ, ಬೆಟ್ಟದ ಹೂ ಸೀರಿಯಲ್ ನಲ್ಲಿ ನಟಿಸಿದ್ದರು. 
 

68

ರಾಜಾ ರಾಣಿ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಚಂದನ ಅನಂತಕೃಷ್ಣ ಮತ್ತು ರಕ್ಷಿತಾ ಹೂಮಳೆ ಸೀರಿಯಲ್ ನಲ್ಲಿ ಜೊತೆಯಾಗಿ ನಟಿಸಿದ್ದು, ಇಬ್ಬರು ಬೆಸ್ಟ್ ಫ್ರೆಂಡ್ಸ್ ಕೂಡ ಆಗಿದ್ದಾರೆ. ಇಬ್ಬರು ಹೆಚ್ಚಾಗಿ ಜೊತೆಯಾಗಿ ಹಾಡು ಹೇಳುವ, ಡ್ಯಾನ್ಸ್ ಮಾಡುವ ವಿಡೀಯೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ (social media) ಶೇರ್ ಮಾಡುತ್ತಿರುತ್ತಾರೆ. 
 

78

ಹಿನ್ನೆಲೆ ಗಾಯಕಿಯಾಗಿರುವ (palyback singer) ರಕ್ಷಿತಾ ಭಾಸ್ಕರ್ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಇವರು ತಮ್ಮ ಇನ್ಸ್ಟಾ ಪೇಜ್ ನಲ್ಲಿ ತಾವು ಹಾಡಿದ ಹಾಡುಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕೃಷ್ಣಾಷ್ಟಮಿ ದಿನ ಹಾಡಿದ ಕೃಷ್ಣನ ಹಾಡು ಸಖತ್ ವೈರಲ್ ಆಗಿತ್ತು. 
 

88

ಮಾಡರ್ನ್ ಮತ್ತು ಟ್ರೆಡಿಶನಲ್ ಎರಡಕ್ಕೂ ಸೈ ಎನ್ನುವ ಇವರು ಹೆಚ್ಚಾಗಿ ಫೋಟೋಶೂಟ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ತಮ್ಮ ಸತ್ಯ ಟೀಂ ಜೊತೆಗಿನ ರೀಲ್ಸ್, ಕಾಮಿಡಿ, ಟ್ರಿಪ್ ವಿಡಿಯೋಗಳನ್ನು ಸಹ ಅಭಿಮಾನಿಗಳ ಜೊತೆ ಹಂಚುತ್ತಿರುತ್ತಾರೆ. 
 

click me!

Recommended Stories