ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು (Comedy Kiladigalu) ರಿಯಾಲಿ ಶೋ ಮೂಲಕ ಜನಪ್ರಿಯತೆ ಪಡೆದ ಕಲಾವಿದ ಹಿತೇಶ್ (Hitesh).
27
ಶೋನಲ್ಲಿ ಮೊದಲ ದಿನವೇ ಸೈಕಲ್ (Cycle) ಹಾರನ್ ರೀತಿ ಸೌಂಡ್ ಮಾಡಿದ್ದಕ್ಕೆ ಇಡೀ ಸೀಸನ್‌ನಲ್ಲಿ ಅವರನ್ನು 'ಪ್ಯಾಕು ಪ್ಯಾಕು' (Pyaku Pyaku) ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತು.
37
ಕಾಮಿಡಿ ರಿಯಾಲಿಟಿ ಶೋ ನಂತರ ಕೆಲವೊಂದು ಸಿನಿಮಾಗಳಲ್ಲಿ (Films) ನಟಿಸಿದ ಹಿತೇಶ್ ಸಾಕಷ್ಟು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ವೀಕ್ಷಕರನ್ನು ಮನೋರಂಜಿಸಿದ್ದಾರೆ.
47
ಕೆಲವು ದಿನಗಳ ಹಿಂದೆ ಸ್ವಾತಿ (Swathi) ಎಂಬುವವರ ಜೊತೆ ಹಿತೇಶ್ ಅದ್ಧೂರಿಯಾಗಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಕಾಮಿಡಿ ಕಿಲಾಡಿ ನಯನಾ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
57
ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಹಿತೇಶ್ ಮತ್ತು ಸ್ವಾತಿ 10 ವರ್ಷಗಳಿಂದ ಪ್ರೀತಿಸುತ್ತಿದ್ದರು (Love). ಈಗ ತಮ್ಮ ಪ್ರೀತಿ ವಿಚಾರ ಹೇಳಿಕೊಂಡು, ಕುಟುಂಬದಿಂದ ಮದುವೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ.
67
ಡೇಟಿಂಗ್, ಲವಿಂಗ್ ನಂತರ ಮದುವೆ (Marriage) ಮುಂದಾಗಿರುವ ಈ ಜೋಡಿ 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.
77
'ಮುತ್ತು ರತ್ನದ' ಮನೆಗೆ 'ಸ್ವಾತಿಮುತ್ತು' ಬರುವ ನಿಶ್ಚಯವಾಯಿತು. ಇನ್ನು ಮನೆ 'ನಿತ್ಯ ಸುಖ ಹಿತ'. ನಿಶ್ಚಿತಾರ್ಥದ ಶುಭಾಶಯಗಳು ಪ್ಯಾಕು ಪ್ಯಾಕು ಹಿತೇಶ್ ಮತ್ತು ಸ್ವಾತಿ ಎಂದು ನಯನಾ (Comedy Kiladigalu Nayana) ಬರೆದಿಕೊಂಡಿದ್ದಾರೆ.