ಕನ್ನಡತಿ ಧಾರವಾಹಿಯಲ್ಲಿ ಸಾನ್ಯಾ ಪಾತ್ರ ಬದಲಾಗಿದೆ. ರಮೋಲಾ ಬದಲಾಗಿ ಧಾರವಾಹಿಯಲ್ಲಿ ಹೊಸಬರ ಎಂಟ್ರಿಯಾಗಿದೆ. ಕ್ಯೂಟ್ ವಿಲನ್ ಆಗಿ ಮಿಂಚಿದ್ದ ರಾಮೋಲಾ ಅಭಿನಯದಿಂದ ಕನ್ನಡಿಗರ ಮನ ಗೆದ್ದಿದ್ದರು
25
ರೌಡಿಗೇ ಅವಾಜ್ ಹಾಕೋ ಸಾನ್ಯಾ ವಿಲನ್ ಆಗಿದ್ರೂ ಒಂಥರಾ ಕ್ಯೂಟ್ ಆಗಿ ಆಡಿಯನ್ಸ್‌ಗಳನ್ನು ರೀಚ್ ಆಗಿದ್ದಾರೆ. ಕ್ಷಣಕ್ಕೊಮ್ಮೆ ಬದಲಾಗೋ ಮೂಡ್, ಬ್ಯುಸಿನೆಸ್ ವಿಮೆನ್ ಅಂತ ತೋರಿಸ್ಕೊಳ್ಳೋ ಆಸೆ ಎಲ್ಲವನ್ನೂ ಮುದ್ದಾಗಿ ಅಭಿನಯಿಸ್ತಾರೆ ಈಕೆ
35
ಆದರೆ ರಾಮೋಲಾ ಧಾರವಾಹಿಯಿಂದ ಎಕ್ಸಿಟ್ ಆಗಿರೋದು ಕನ್ನಡತಿ ಅಭಿಮಾನಿಗಳಿಗೆ ಬೇಸರವಾಗಿದೆ. ವಿಲನ್ ಆಗಿ ಬೇರೆ ಎಲ್ಲ ಧಾರವಾಹಿಗಳ ವಿಲನ್‌ಗಳಿಗಿಂತ ಡಿಫರೆಂಟಾಗಿ ನಟಿಸುತ್ತಿದ್ದ ರಾಮೊಲ ಪ್ರೇಕ್ಷಕರ ಫೇವರೇಟ್ ಆಗಿದ್ದರು
45
ಸೋಷಿಯಲ್ ಮೀಡಿಯಾ ತುಂಬಾ ಧಾರವಾಹಿ ಅಭಿಮಾನಿಗಳು ಸಾನ್ಯಾರನ್ನು ಮರಳುವಂತೆ ಒತ್ತಾಯಿಸುತ್ತಿದ್ದಾರೆ. ಪ್ಲೀಸ್ ಸಾನ್ಯಾ ಪಾತ್ರವನ್ನು ಬದಲಾಯಿಸಬೇಡಿ ಎಂದು ಕೇಳುತ್ತಿದ್ದಾರೆ ಎಂದಿದ್ದಾರೆ.