ಖಂಡಿತಾ ಇಲ್ಲ. ಚೆನ್ನಾಗಿ ಪೌಷ್ಠಿಕ ಆಹಾರ ತಿಂದು ತೂಕ ಕಡಿಮೆ ಮಾಡಿಕೊಳ್ಳಬೇಕು. ಏನೂ ತಿನ್ನದೆ ಸಣ್ಣ ಆಗೋಕೆ ಆಗಲ್ಲ. ಸರಿಯಾಗಿ ನಿದ್ರೆ, ಚೆನ್ನಾಗಿ ನೀರು ಕುಡಿಯಬೇಕು ಹಾಗೂ ವ್ಯಯಾಮ ಮಾಡಬೇಕು.
27
ಗೀತಾ ಭಾರತಿ ಭಟ್ ಯಾವ ಕಾರಣಕ್ಕೆ ತೂಕ ಉಳಿಸಬೇಕು ಎಂದು ಮನಸ್ಸು ಮಾಡಿದ್ದು?
ನಾನೇ ತೂಕ ಇಳಿಸಿಕೊಳ್ಳಲು ನಿರ್ಧಾರ ಮಾಡಿದೆ.
37
ಸಮಯ ಕೂಡಿ ಬಂತು. ಈಗ ಸ್ವಲ್ಪ ಸಮಯ ಸಿಗುತ್ತಿಲ್ಲ. ಖಂಡಿತಾ ಟೈಮ್ ಮಾಡಿಕೊಂಡು ಮತ್ತೆ ವರ್ಕೌಟ್ ಶುರು ಮಾಡುತ್ತೀನಿ. ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯುತ್ತೀನಿ.
47
ಸ್ಕಿನ್ ಕೇರ್ ಏನು?
ನಿಜ ಹೇಳಬೇಕು ಅಂದ್ರೆ ನಾನು ಯಾವ ಸ್ಕಿನ್ ಕೇರ್ ಫಾಲೋ ಮಾಡಲ್ಲ. ಮುಖಕ್ಕೆ ಕ್ರೀಮ್ ಹಚ್ಚಲ್ಲ. ಸಾಮಾನ್ಯವಾಗಿ ಕಡಿಮೆ ಮೇಕಪ್ ಹಾಕ್ತೀನಿ.
57
ನಾವು ಮಂಗಳೂರಿನವರು ಆಗಿರುವ ಕಾರಣ ಅಡುಗೆಯಲ್ಲಿ ತೆಂಗಿನ ಎಣ್ಣಿ ಇರುತ್ತೆ ಅದು ತ್ವಚೆಯನ್ನು ಕಾಪಾಡುತ್ತದೆ. ಅದಾದ ಮೇಲೆ ಚೆನ್ನಾಗಿ ನೀರು ಕುಡಿಯಬೇಕು. ನನ್ನ ಸ್ಕಿನ್ ಮತ್ತು ಕೂದಲು ಚೆನ್ನಾಗಿರಲು ಸೀಕ್ರೆಟ್ ಏನೆಂದರೆ ನೀರು ಮತ್ತು ತೆಂಗಿನ ಎಣ್ಣೆ.
67
ಜನರ ಟೀಕೆಗಳಿಗೆ ಕಣ್ಣಿರು ಹಾಕಿದ್ದೀರಾ, ಈಗ ಹೇಗೆ ರಿಯಾಕ್ಟ್ ಮಾಡ್ತೀರಾ?
ನಟನೆ ಲೋಕಕ್ಕೆ ಬಂದ ಮೇಲೆ ನಾನು ಕಲಿತಿರುವ ಪಾಠ ಏನೆಂದರೆ ಹೊಗಳುವುದನ್ನು ಹೇಗೆ ಒಪ್ಪಿಕೊಳ್ಳುತ್ತೀವಿ ಹಾಗೆ ಟೀಕೆಗಳನ್ನು ಹೇಗೆ ಸ್ವೀಕರಿಸಿ ಬದಲಾಯಿಸಿಕೊಳ್ಳುತ್ತೀವಿ ಅನ್ನೋದು ಮುಖ್ಯವಾಗುತ್ತದೆ.
77
ಡಯಟ್ ಮಾಡುವಾಗಲೂ ನಾನು ಚೀಟ್ ಡೇ ಅಂತ ಫಾಲೋ ಮಾಡುತ್ತೀನಿ ಆಗ ನಮ್ಮ ಮನೆ ಬಳಿ ಇರುವ ಚೈನೀಸ್ ಫುಡ್ ತಿನ್ನುತ್ತಿದ್ದೀನಿ. ಚಂಕ್ ಬಿಟ್ಟು ಏನಾದರೂ ತಿನ್ನಬೇಕು ಅಂದ್ರೆ ಕುಚ್ಚಲಕ್ಕೆ ಗಂಜಿ ಮಾವು ಮಿಡಿ ಉಪ್ಪಿನಕಾಯಿ.