ಗಿಚ್ಚಿ ಗಿಲಿಗಿಲಿ ಜಗಪ್ಪನ ಮದುವೆಯಾಗ್ತಿದ್ದಂತೆ ಫೋಟೋಸ್ ಪೋಸ್ಟ್ ಮಾಡಿದ ಲಾಸ್ಯಾ : ಲವ್‌ ಫೇಲ್‌ ಆಯ್ತಾ ಎಂದ್ರು ಫ್ಯಾನ್ಸ್!

First Published | Nov 19, 2023, 3:59 PM IST

ಬೆಂಗಳೂರು (ನ.19): ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭರ್ಜರಿ ಭ್ಯಾಚುಲರ್ಸ್‌ ರಿಯಾಲಿಟಿ ಶೋನಲ್ಲಿ ಗಿಚ್ಚಿ ಗಿಲಿಗಿಲಿ ನಟ ಜಗಪ್ಪ ಹಾಗೂ ನಟಿ ಲಾಸ್ಯಾ ನಾಗರಾಜ್‌ ಜೋಡಿ ವಿನ್ನರ್‌ ಆಗಿದೆ. ಆದರೆ, ಜಗ್ಗಪ್ಪ ಸುಷ್ಮಾಳ ಜೊತೆಗೆ ಮದುವೆಯಾಗುತ್ತಿದ್ದಂತೆ ಮತ್ತೆ ತಾನು ಹೊಕ್ಕಳಿಗೆ ಹಾಕಿಸಿಕೊಂಡಿದ್ದ ವಂಕಿಯನ್ನು ಪ್ರದರ್ಶನ ಮಾಡಿದ್ದಾಳೆ.

ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋನಲ್ಲಿ ಜಗಪ್ಪನಂತಹ ಮಲ್ಟಿ ಟ್ಯಾಲೆಂಟ್‌ ಹುಡುಗನೇ ಬೇಕು, ನಿನ್ನನ್ನೇ ಮದುವೆಯಾಗ್ತೀನಿ ಎಂದು ಲಾಸ್ಯಾ ವೇದಿಕೆ ಮೇಲೆಯೇ ಹೇಳಿಕೊಂಡಿದ್ದಳು. ಆದರೆ, ಜಗ್ಗಪ್ಪ ಇದನ್ನು ನಯವಾಗಿ ತಿರಸ್ಕರಿಸಿ ನೀನು ಸ್ನೇಹಿತೆ ಎಂದು ಹೇಳಿದ್ದರು.

ಇದೀಗ ಜಗಪ್ಪ ಗಿಚ್ಚಿ ಗಿಲಿ ಗಿಲಿಯ ಸೆಟ್‌ನಲ್ಲಿಯೇ ಲವ್‌ ಮಾಡಿದ ಸುಷ್ಮಿತಾಳನ್ನು ಮದುವೆಯಾಗಿದ್ದಾರೆ. ಇದರ ಬೆನ್ನಲ್ಲಿಯೇ ತಾನು ಹೊಕ್ಕಳಿಗೆ ಹಾಕಿಸಿಕೊಂಡಿದ್ದ ವಂಕಿಯನ್ನು ಪ್ರದರ್ಶನ ಮಾಡಿದ್ದಾಳೆ.

Tap to resize

ನಟಿ ಹಾಗೂ ನಾಟ್ಯ ಕಲಾವಿದೆಯೂ ಆಗಿರುವ ಲಾಸ್ಯಾ ನಾಗರಾಜ್‌ ಅವರು ಬಾಲಿವುಡ್‌ನ ವೆಬ್‌ ಸಿರೀಸ್‌ನಲ್ಲಿಯೂ ನಟಿಸಿದ್ದಾಳೆ. ಇನ್ನು ಮಾಡ್ರನ್‌ ಲೈಫ್‌ ಸ್ಟೈಲ್‌ನಲ್ಲಿ ಜೀವನವನ್ನು ಎಂಜಾಯ್‌ ಮಾಡುತ್ತಿದ್ದಾಳೆ.
 

ಹಲವು ದಿನಗಳ ಹಿಂದೆಯೇ ಹೊಕ್ಕಳಿಗೆ ವಂಕಿಯನ್ನು ಹಾಕಿಸಿಕೊಂಡಿದ್ದ ಲಾಸ್ಯ ನಾಗರಾಜ್‌ ಅವರು, ಭರ್ಜರಿ ಬ್ಯಾಚುಲರ್ಸ್‌ ಶೋ ನಡೆಯುತ್ತಿದ್ದ ವೇಳೆ ಎಲ್ಲಿಯೂ ಪ್ರದರ್ಶನ ಮಾಡಿರಲಿಲ್ಲ.

ಈಗ ಭರ್ಜರಿ ಬ್ಯಾಚುಲರ್ಸ್‌ (Bharjari Bachalors) ಶೋ ಮುಕ್ತಾಯಗೊಂಡು ತನ್ನ ಜೋಡಿ ಜಗಪ್ಪನ ಮದುವೆ ಆಗುತ್ತಿದ್ದಂತೆ ಮತ್ತೆ ಹೊಕ್ಕಳನ್ನು ತೋರಿಸಿದ್ದಾರೆ.

ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿಶೇಷ ಸ್ಪರ್ಧಿಯಾಗಿ ಭಾಗವಹಿಸಿದ್ದ ಲಾಸ್ಯ ನಾಗರಾಜ್‌ ಟೋಪಿವಾಲ ಸೇರಿದಂತೆ ಹಲವು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌  (Bharjari Bachelors) ಶೋ ಭರ್ಜರಿ ಮನರಂಜನೆ ಕೊಟ್ಟಿದೆ. ಗಿಚ್ಚಿಗಿಲಿಗಿಲಿ ಖ್ಯಾತಿಯ ಜಗಪ್ಪ (Gicchi Giligili Jaggappa) ಮತ್ತು ನಟಿ ಲಾಸ್ಯ ನಾಗರಾಜ್ ಜೋಡಿಯ ವಿಡಿಯೋವೊಂದು ವೈರಲ್ ಆಗಿತ್ತು. 

ಪುನೀತ್ ರಾಜ್‌ ಕುಮಾರ್ ಮತ್ತು ದೀಪಾ ಸನ್ನಿಧಿ ಅಭಿನಯದ ಪರಮಾತ್ಮ ಚಿತ್ರದ ಕ್ಲಿಪ್ ಗೆ ಇಬ್ಬರೂ ರೀಲ್ಸ್ ಮಾಡಿದ್ದರು. ಈ ರೀಲ್ಸ್ ನಲ್ಲಿ ಧರಿಸಿರುವ ಮೊಣಕಾಲು ಉದ್ದ ಬಟ್ಟೆಗೆ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಮೊದ್ಲು ಚಡ್ಡಿ ಹಾಕಮ್ಮ ಎಂದೆಲ್ಲ ಹೇಳಿದ್ದರು.

ಓಹ್ ಅಕ್ಕ ಉಸಾರು ಅ ಜಗಪ್ಪ ಸರಿಯಿಲ್ಲ ಬಡ್ಡಿ ಹೈದ ಎಂದು ಕೆಲವರು ಸಲಹೆ ನೀಡಿದ್ದರು. ಇನ್ನು ಕೆಲವರು 'ಜಗಪ್ಪ ಸುಸ್ಸು ಅವರನ್ನು ಮರಿಬೇಡ ಕಣಪ್ಪ' ಎಂದು ತನ್ನ ಗಿಚ್ಚಿಗಿಲಿಗಿಲಿ ಶೋ ಗೆಳತಿ ಸುಷ್ಮಿತಾ ಬಗ್ಗೆ ಹೇಳಿದ್ದಾರೆ. 

ಹಲವು ಡಾನ್ಸ್ ಪ್ರಕಾರವನ್ನು ಕಲಿತಿರುವ ನಟಿ, ಅಜಯ್‌ ರಾವ್‌ ನಾಯಕನಾಗಿ ನಟಿಸಿರುವ ಕೃಷ್ಣ ಟಾಕೀಸ್‌ ಸಿನಿಮಾದ ಐಟಂ ಗೀತೆಗೆ ಕುಣಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

Latest Videos

click me!