ಪಿಂಕ್‌ ಸೀರೆಯಲ್ಲಿ ಗುಲಾಬಿಯಂತೆ ಅರಳಿದ ನಾಗಿಣಿ: ಮೈಸೂರು ರೇಷ್ಮೆ ಸೀರೆಗಳ ಮೇಲೆ ಕೊನೆಯಿಲ್ಲದ ಪ್ರೀತಿ ಎಂದ ನಮ್ರತಾ!

Published : Sep 17, 2023, 12:30 AM IST

ಟ್ರೆಡಿಷನಲ್‌ ಆಗಿ ಪಿಂಕ್‌ ಸೀರೆಯುಟ್ಟು, ಹಸಿರು ಬಣ್ಣದ ಕುಪ್ಪಸದ ಮ್ಯಾಚಿಂಗ್ ಧರಿಸಿದ್ದಾರೆ. ಮದುಮಗಳಂತೆ ಮೇಕಪ್​ನಲ್ಲೂ ನಮ್ರತಾ ಸುಂದರವಾಗಿ ಕಾಣ್ತಿದ್ದಾರೆ. ಫೋಟೋ ನೋಡಿದ ನಮ್ರತಾ ಗೌಡ ಅಭಿಮಾನಿಗಳು​ ಫುಲ್ ಖುಷ್​ ಆಗಿದ್ದಾರೆ. 

PREV
17
ಪಿಂಕ್‌ ಸೀರೆಯಲ್ಲಿ ಗುಲಾಬಿಯಂತೆ ಅರಳಿದ ನಾಗಿಣಿ: ಮೈಸೂರು ರೇಷ್ಮೆ ಸೀರೆಗಳ ಮೇಲೆ ಕೊನೆಯಿಲ್ಲದ ಪ್ರೀತಿ ಎಂದ ನಮ್ರತಾ!

ನಾಗಿಣಿ-2 ಸಿರೀಯಲ್‌ ಮೂಲಕ ಎಲ್ಲರ ಮನೆಮಾತಾಗಿರುವ ನಮ್ರತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ನಟಿ ಯಾವಾಗಲೂ ವಿಭಿನ್ನ ಪೋಟೋಗಳನ್ನು ಶೇರ್‌ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. 

27

ಇದೀಗ ನಟಿ ಸಖತ್‌ ಟ್ರೆಡಿಷನಲ್‌ ಪೋಟೋಗಳನ್ನು ಶೇರ್‌ ಮಾಡಿದ್ದು, ಸಿಂಪಲ್ ಲುಕ್​ನಲ್ಲೂ ಸಖತ್ ಬ್ಯೂಟಿಫುಲ್​ ಆಗಿ ಕಾಣ್ತಿದ್ದಾರೆ. ಜೊತೆಗೆ ಮೈಸೂರು ರೇಷ್ಮೆ ಸೀರೆಗಳ ಮೇಲೆ ಕೊನೆಯಿಲ್ಲದ ಪ್ರೀತಿ ಎಂದು ಬರೆದುಕೊಂಡಿದ್ದಾರೆ.

37

ಟ್ರೆಡಿಷನಲ್‌ ಆಗಿ ಪಿಂಕ್‌ ಸೀರೆಯುಟ್ಟು, ಹಸಿರು ಬಣ್ಣದ ಕುಪ್ಪಸದ ಮ್ಯಾಚಿಂಗ್ ಧರಿಸಿದ್ದಾರೆ. ಮದುಮಗಳಂತೆ ಮೇಕಪ್​ನಲ್ಲೂ ನಮ್ರತಾ ಸುಂದರವಾಗಿ ಕಾಣ್ತಿದ್ದಾರೆ. ಫೋಟೋ ನೋಡಿದ ನಮ್ರತಾ ಗೌಡ ಅಭಿಮಾನಿಗಳು​ ಫುಲ್ ಖುಷ್​ ಆಗಿದ್ದಾರೆ. ಸೀರೆಯುಟ್ಟ ಇವರ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದೆ.

47

ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟಿಯಿಂದ ಮನೆ ಮಾತಾಗಿದ್ದಾರೆ.

57

ಈ ಹಿಂದೆಯೂ ನಟಿ ನಮ್ರತಾ ಗೌಡ ಸಾಂಪ್ರದಾಯಿಕ ಉಡುಪಿನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಮಾಡ್ರನ್, ಟ್ರಡಿಷನಲ್ ಎರಡೂ ಬಟ್ಟೆಗಳಲ್ಲಿ ಅದ್ಭುತವಾಗಿ ಕಾಣುವ ನಮ್ರತಾ ಗೌಡ, ಈ ಹಿಂದೆ ಬಾಲಿ ಪ್ರವಾಸದಲ್ಲಿದ್ದ ಅವರು ಟೂ ಪೀಸ್‌ನಲ್ಲಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿ ವೈರಲ್ ಆಗಿದ್ದರು. 

67

ಅವರ ಬೋಲ್ಡ್ ಫೋಟೋಗಳಿಗೆ ಹಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಅವರು ತಮ್ಮ ಫೋಟೋಗಳಿಗೆ ಕಾಮೆಂಟ್ ಮಾಡುವುದನ್ನು ನಿರ್ಬಂಧಿಸಿದ್ದರು. ನಮ್ರತಾ ಗೌಡ ಅವರು ಬಾಲ ಕಲಾವಿದೆಯಾಗಿ ಟಿವಿ ಪರದೆಗೆ ಕಾಲಿರಿಸಿದರು. 

77

ಕಲರ್ಸ್ ಕನ್ನಡದ ಪುಟ್ಟ ಗೌರಿ ಮದುವೆ, ಸುಮರ್ಣದಲ್ಲಿ ಬರುತ್ತಿದ್ದ ಕೃಷ್ಣ ರುಕ್ಮಿಣಿಯಂತಹ ಹಲವಾರು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇದಾದ ನಂತರ ಮುಖ್ಯ ಪಾತ್ರ "ಶಿವಾನಿ" ಆಗಿ ಜೀ ಕನ್ನಡದ ನಾಗಿಣಿ 2 ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಂತರ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

Read more Photos on
click me!

Recommended Stories