'ಅಮೃತಧಾರೆ' ವನಿತಾ ವಾಸು ಕ್ಲೋಸಪ್ ಫೋಟೋ ವೈರಲ್; ಹೇರ್‌ಸ್ಟೈಲ್‌ ಮೇಲೆ ನೆಟ್ಟಿಗರ ಕಣ್ಣು

Published : Oct 23, 2024, 03:56 PM ISTUpdated : Oct 23, 2024, 04:10 PM IST

ತೆರೆ ಮೇಲೆ ಖಡಕ್ ವಿಲನ್....ತೆರೆ ಹಿಂದೆ ಸರಳ ಸುಂದರಿ...ನಟಿ ವನಿತಾ ವಾಸು ಸೆಲ್ಫಿ ಫೋಟೋಗಳು ವೈರಲ್......

PREV
16
 'ಅಮೃತಧಾರೆ' ವನಿತಾ ವಾಸು ಕ್ಲೋಸಪ್ ಫೋಟೋ ವೈರಲ್; ಹೇರ್‌ಸ್ಟೈಲ್‌ ಮೇಲೆ ನೆಟ್ಟಿಗರ ಕಣ್ಣು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ತಾಯಿ/ಅತ್ತೆ ಪಾತ್ರದಲ್ಲಿ ಮಿಂಚುತ್ತಿರುವ ಹಿರಿಯ ನಟಿ ವನಿತಾ ವಾಸು. 

26

ಆಗಂತುಕ, ಗಂಡ ಮನೆ ಮಕ್ಕಳು,ಉತ್ಕರ್ಷ, ನಿಗೂಧ ರಹಸ್ಯ, ಚಪಲ ಚೆನ್ನಿಗರಾಯ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚಿರುವ ವನಿತಾ ವಾಸು ಈಗ ಕಿರುತೆರೆ ಲೋಕದಲ್ಲಿ ಸಖತ್ ಮಿಂಚುತ್ತಿದ್ದಾರೆ.

36

ಸಿರಿವಂತ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವನಿತಾ ವಾಸು ಸದಾ ಮೇಕಪ್ ಧರಿಸಿ ದುಬಾರಿ ರೇಶ್ಮೆ ಸೀರೆಯಲ್ಲಿ ಮಿಂಚುತ್ತಿರುತ್ತಾರೆ. ಆದರೆ ಆಫ್‌ ಸ್ಕ್ರೀನ್ ಅಷ್ಟೇ ಸಿಂಪಲ್ ಆಗಿರುತ್ತಾರೆ.

46

ಸುಮಾರು 29 ಸಾವಿರ ಫಾಲೋವರ್ಸ್‌ನ ಹೊಂದಿರುವ ವನಿತಾ ವಾಸು ಆಗಾಗ ತಮ್ಮ ಸೆಲ್ಫಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಬ್ಯುಟಿಯನ್ನು ಮೆಚ್ಚಿ ಜನರು ಕಾಮೆಂಟ್ ಮಾಡಿದ್ದಾರೆ.

56

ಸುಂದರಿ ಯಾವತ್ತಿದ್ದರೂ ಸುಂದರಿನೇ...ಮೇಂಡ ನೀವು ಮತ್ತೆ ಸಿನಿಮಾದಲ್ಲಿ ನಟಿಸಬೇಕು, ನಿಮ್ಮ ಮಗನನ್ನು ನಾಯಕನಾಗಿ ಲಾಂಚ್ ಮಾಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

66

ಇನ್ನು ಸೀರಿಯಲ್‌ನಲ್ಲಿ ವನಿತಾ ವಾಸು ಮತ್ತು ಭೂಮಿಕಾ ಕಾಂಬಿನೇಷನ್ ಜನರಿಗೆ ಇಷ್ಟವಾಗಿದೆ. ಪಾರ್ಥನ ಪತ್ನಿ ಮನೆಗೆ ಬರುತ್ತಿದ್ದಂತೆ ಅದನ್ನು ಅಡ್ವಾಂಟೇಜ್‌ ಆಗಿಸಿಕೊಂಡು ಗೇಮ್ ಶುರು ಮಾಡಿದ್ದಾರೆ. 

Read more Photos on
click me!

Recommended Stories