ಇದೀಗ ನಟಿ ಹೊಸದಾಗಿ ಫೋಟೊಗಳನ್ನ ಶೇರ್ ಮಾಡಿದ್ದು, ಕೇಸರಿ, ಕೆಂಪು, ಬಿಳಿ ಬಣ್ಣದ ಮೈಸೂರು ಸಿಲ್ಕ್ ಸೀರೆಯನ್ನುಟ್ಟಿದ್ದು, ಅದರ ಜೊತೆಗೆ ಕೇಸರಿ ಬಣ್ಣದ ಬ್ಲೌಸ್ ಧರಿಸಿದ್ದಾರೆ. ಇದರ ಜೊತೆಗೆ ಕೈತುಂಬಾ ಬಳಿ, ಮೂಗಿನಲ್ಲಿ ನತ್ತು, ಕಿವಿಯಲ್ಲಿ ದೊಡ್ಡದಾದ ಜುಮುಕಿ, ಹಣೆಯಲ್ಲಿ ಮುಂದಾಲಿ ಧರಿಸಿದ್ದು, ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ.