ಎರಡನೇ ಮದುವೆಗೆ ರೆಡಿಯಾದ್ರೂ ಲಕ್ಷ್ಮೀ ನಿವಾಸ ನಟಿ ಮಾನಸ …ನಿಶ್ಚಿತಾರ್ಥದ ಫೋಟೊ ವೈರಲ್!

Published : Oct 23, 2024, 11:17 AM ISTUpdated : Oct 23, 2024, 02:47 PM IST

ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಮಾನಸ ಮನೋಹರ್ ನಿಶ್ಚಿತಾರ್ಥದ ಫೋಟೊಗಳು ವೈರಲ್ ಆಗುತ್ತಿವೆ. ನಟಿ ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.   

PREV
17
ಎರಡನೇ ಮದುವೆಗೆ ರೆಡಿಯಾದ್ರೂ ಲಕ್ಷ್ಮೀ ನಿವಾಸ ನಟಿ ಮಾನಸ …ನಿಶ್ಚಿತಾರ್ಥದ ಫೋಟೊ ವೈರಲ್!

ಮಾನಸ ಮನೋಹರ್ (Manasa Manohar) ಅಂದ್ರೆ ಯಾರು ಅಂತ ಸಾಮಾನ್ಯವಾಗಿ ಯಾರಿಗೂ ಗೊತ್ತಿರೋದಕ್ಕೆ ಸಾಧ್ಯ ಇಲ್ಲ. ಆದ್ರೆ ಜೊತೆ ಜೊತೆಯಲಿ ಧಾರಾವಾಹಿಯ ಮೀರಾ ಪಾತ್ರ ಜನಮನ ಗೆದ್ದಿತ್ತು. ಆರ್ಯವರ್ಧನ್ ಕಂಪನಿಯ ಪಿಎ ಆಗಿ, ಕಂಪನಿಯ ಜವಾಬ್ಧಾರಿ ನೋಡಿಕೊಳ್ಳುತ್ತಿದ್ದ ಪ್ರಬುದ್ಧ ಪಾತ್ರವದು. 
 

27

ಮೀರಾ ಪಾತ್ರಕ್ಕೆ ಮಾನಸ ಮನೋಹರ್ ಎಷ್ಟೊಂದು ನ್ಯಾಯ ಒದಗಿಸಿದ್ದರು ಅಂದ್ರೆ, ಅವರ ಗತ್ತು, ಸ್ಟೈಲ್ ನೋಡಿ, ಪಿಎ ಆದವರು ಹೀಗೆಯೇ ಇರಬೇಕು ಎನ್ನುವಷ್ಟು ಅದ್ಭುತವಾಗಿತ್ತು. ಅವರ ಪಾತ್ರದ. ಜೊತೆ ಜೊತೆಯಲಿ (Jothe Jotheyali) ಧಾರಾವಾಹಿಯ ಒಂದು ಮುಖ್ಯವಾದ ಪಾತ್ರ ಕೂಡ ಇದಾಗಿತ್ತು. 
 

37

ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದರೂ ವೀಕ್ಷಕರು ಮಾನಸ ಮನೋಹರ್ ಅವರನ್ನು ಇಂದಿಗೂ ಗುರುತಿಸೋದು ಮೀರಾ ಪಾತ್ರದ ಮೂಲಕ. ಇದೀಗ ಮಾನಸ ಗುಡ್ ನ್ಯೂಸ್ ಒಂದನ್ನು ತಮ್ಮ ಸೋಶಿಯಲ್ ಮೀಡೀಯಾ ಮೂಲಕ ಹಂಚಿಕೊಂಡಿದ್ದಾರೆ. 
 

47

ಹೌದು ನಟಿ ಮಾನಸ ನಿಶ್ಚಿತಾರ್ಥ ಸಮಾರಂಭ ಸದ್ದಿಲ್ಲದೆ ನಡೆದಿತ್ತು, ಎಂಗೇಜ್ ಮೆಂಟ್ ನ ಸುಂದರವಾದ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. If the universe has decided to MANIFEST everything to me then you are my EVERYTHING  ಎಂದು ಬರೆದುಕೊಂಡಿದ್ದಾರೆ. 
 

57

ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಮಾನಸ ಮನೋಹರ್ ಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಮಾನಸ ಮದುವೆಯಾಗುತ್ತಿರುವ ಹುಡುಗನ ಹೆಸರು ಪ್ರೀತಂ ಚಂದ್ರ. ಇವರು ಫುಟ್ ಬಾಲ್ ಪ್ಲೇಯರ್ ಆಗಿದ್ದು, ಫುಟ್ ಬಾಲ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಇನ್ನು ಅಭಿಮಾನಿಗಳು ನಟಿಗೆ ಇದು ನಿಮ್ಮ ಎರಡನೆಯ ಮದುವೆಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಕೂಡ ಅಷ್ಟೇ ಪಾಸಿಟಿವ್ ಆಗಿ ಉತ್ತರಿಸಿದ್ದಾರೆ. 
 

67

ಹೌದು ಇದು ನನ್ನ ಎರಡನೇ ಮದುವೆ (second marriage). ಜೀವನದಲ್ಲಿ ಕೆಲವು ಬಾರಿ ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ಆದರೂ ಎಲ್ಲರ ಒಳಿತಿಗಾಗಿ ಆ ಸಂಬಂಧವನ್ನು ಮುಂದುವರೆಸಬೇಕಾಗುತ್ತೆ. ಆದರೆ ಈಗ ನಾನು ನನ್ನ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ಪ್ರೀತಂ ಮತ್ತು ನಾನು ಮದುವೆಯಾಗುತ್ತಿದ್ದೇವೆ. ಇದು ನನಗೆ ಅಪರಾಧ ಎನಿಸುತ್ತಿಲ್ಲ. ಆದರೆ ಕೃತಜ್ಞತೆ ಮಾತ್ರ ಇದೆ. ಆದ್ದರಿಂದ ಅದನ್ನು ವ್ಯಕ್ತಪಡಿಸುತ್ತಿದ್ದೇನೆ. ಪ್ರತಿಯೊಬ್ಬರ ಪ್ರೀತಿಗೆ ಧನ್ಯವಾದಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಧನ್ಯವಾದಗಳು' . ನಿಮ್ಮನ್ನ ನಾನು ನನ್ನ ಕುಟುಂಬ ಅಂದುಕೊಂಡಿದ್ದೇನೆ. ಹಾಗಾಗಿ ನಿಮ್ಮ ಪ್ರಶ್ನೆಗೆ ನಾನು ಸಂತೋಷದಿಂದ ಉತ್ತರಿಸುತ್ತೇನೆ ಎಂದಿದ್ದಾರೆ. 
 

77

ಮಾನಸ ಮನೋಹರ್ ಈವಾಗಲೂ ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಸಿದ್ದೇಗೌಡ್ರ ಅತ್ತಿಗೆಯಾಗಿ ನಟಿಸುತ್ತಿದ್ದು, ಇದೀಗ ಹೊಸದಾಗಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲಿ ಐಶ್ವರ್ಯ ಸಿಂಧೋಗಿ ನಿರ್ವಹಿಸುತ್ತಿದ್ದ ಶಿವಗಾಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 

click me!

Recommended Stories