ಜೈದೇವ್‌ನ ಬಣ್ಣ ಬಯಲು ಮಾಡಲು ಹೋಗಿ ಆತನ ಬಳಿಯೇ ಮಧುರಾ ಸಿಕ್ಕಿಬಿದ್ದಿದ್ದಾಳೆ. ಮಧುರಾಳ ನಿಜಬಣ್ಣ ಅರಿತ ಜೈದೇವ್, ಆಕೆಯನ್ನು ಅಪಹರಿಸಿ ತನ್ನ ಮನೆಯಲ್ಲಿಯೇ ಕೂಡಿಹಾಕಿದ್ದಾನೆ. ಇತ್ತ ಮಧುರಾಳ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಮಲ್ಲಿ ಮತ್ತು ಭೂಮಿಕಾ ಆತಂಕಗೊಂಡಿದ್ದಾರೆ.
ಜೈದೇವ್ ಬಣ್ಣ ಬಯಲು ಮಾಡಲು ಹೋಗಿದ್ದ ಮಧುರಾ ಆತನ ಬಲೆಯಲ್ಲಿಯೇ ಸಿಲುಕಿಕೊಂಡಿದ್ದಾಳೆ. ಹೌದು, ಮಧುರಾಳ ಮೊಬೈಲ್ ನೋಡಿದ ಜೈದೇವ್‌ಗೆ, ತನ್ನ ಮನೆಯಲ್ಲಿರೋದು ಪೊಲೀಸ್ ಮತ್ತು ಮಲ್ಲಿ-ಭೂಮಿಕಾ ಪರವಾಗಿ ಕೆಲಸ ಮಾಡ್ತಾಳೆ ಅನ್ನೋದು ಗೊತ್ತಾಗಿತ್ತು. ತನ್ನೆಲ್ಲಾ ವಿಷಯ ಜೈದೇವ್‌ಗೆ ಗೊತ್ತಾಗಿರೋದು ತಿಳಿದ ಮಧುರಾ ಆತನ ಮನೆಯಿಂದ ಹೊರ ಬಂದಿದ್ದಾಳೆ.
25
ಬ್ಲಡಿ ಭೂಮಿಕಾ ಮತ್ತು ರೂರಲ್ ಕೋಟಾ ಮಲ್ಲಿ
ಆಟೋ ಹತ್ತಿ ಹೊರಟ ಮಧುರಾಳನ್ನು ಹಿಂಬಾಲಿಸಿದ ಜೈದೇವ್, ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮಧುರಾಳ ಕೈ ಮತ್ತು ಬಾಯಿ ಕಟ್ಟಿರೋ ಜೈದೇವ್, ನೀನ್ಯಾರು? ಬ್ಲಡಿ ಭೂಮಿಕಾ ಮತ್ತು ರೂರಲ್ ಕೋಟಾ ಮಲ್ಲಿ ನಿನ್ನನ್ನು ಇಲ್ಲಿಗೆ ಕಳಿಸಿರೋ ವಿಷಯವೂ ನನಗೆ ಗೊತ್ತಿದೆ ಎಂದ ಹೇಳಿ ಶಾಕ್ ನೀಡಿದ್ದಾನೆ.
35
ಮಧುರಾಳ ಮೊಬೈಲ್ ಸ್ವಿಚ್ ಆಫ್
ಬಿಡುಗಡೆಯಾಗಿರೋ ಪ್ರೋಮೋದಲ್ಲಿ ಭೂಮಿಕಾ ಮತ್ತು ಮಲ್ಲಿ ಜೊತೆಯಾಗಿ ಮಧುರಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಮಧುರಾಳ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಇಬ್ಬರ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೈದೇವ್ ಏನಾದ್ರೂ ಮಾಡಿದ್ದಾನಾ ಎಂಬ ಅನುಮಾನ ಮಲ್ಲಿ ಮತ್ತು ಭೂಮಿಕಾಗೆ ಬಂದಿದೆ.
ಆಟೋ ಹಿಡಿದುಕೊಂಡ ಹೊರಟ ಮಧುರಾ, ಪೊಲೀಸ್ ಅಧಿಕಾರಿಯಾಗಿದ್ರೂ ಕೊಂಚವೂ ತಲೆ ಓಡಿಸಿ ಕೆಲಸ ಮಾಡದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅದೇ ಆಟೋ ತೆಗೆದುಕೊಂಡು ನೇರವಾಗಿ ಸಮೀಪದ ಪೊಲೀಸ್ ಠಾಣೆಗೆ ತೆರಳಬಹುದಿತ್ತು ಅಥವಾ ಆಟೋ ಚಾಲಕನಿಂದ ಮೊಬೈಲ್ ಪಡೆದು ವಿಷಯ ತಲುಪಿಸಬಹುದಿತ್ತು ಎಂದು ಸಲಹೆಗಳನ್ನು ನೀಡಿದ್ದಾರೆ.
55
ಆಡಿಯೋ ರೆಕಾರ್ಡ್
ಜೈದೇವ್ ಮಾತುಗಳಿರೋ ರೆಕಾರ್ಡ್‌ರನ್ನು ಜೀವನಿಗೆ ತಲುಪಿಸೋವಲ್ಲಿ ಮಧುರಾ ಸಕ್ಸಸ್ ಆಗಿದ್ದಾಳೆ. ಇದೇ ಜೀವನಿಂದ ಸಹಾಯ ಪಡೆದು ಮಧುರಾ ಸೇಫ್ ಆಗಬಹುದಿತ್ತು. ಆದ್ರೆ ಇಲ್ಲಿಯೂ ಮಧುರಾ ಮತ್ತೆ ಎಡವಿದ್ದಾಳೆ. ಜೈದೇವ್ ಬಲೆಯಲ್ಲಿ ಮಧುರಾ ಸಿಲುಕಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.