ಅಮೃತಧಾರೆ ಸೀರಿಯಲ್‌ನಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ, ಕುಡಿದು ಗಲಾಟೆ ಮಾಡುತ್ತಿದ್ದ ಮಾಜಿ ಗಂಡ ಜೈದೇವ್‌ಗೆ ಲಾಠಿ ರುಚಿ ತೋರಿಸಿದ್ದಾಳೆ. ಮತ್ತೊಂದೆಡೆ, ಗೌತಮ್ ತನ್ನ ಪತ್ನಿ ಭೂಮಿಕಾಳ ಆಸೆಗಳನ್ನು ಈಡೇರಿಸುತ್ತಿದ್ದರೆ, ಜೀವ ದಿಯಾಳನ್ನು ಹುಡುಕುತ್ತಿದ್ದಾನೆ.
ಅಮೃತಧಾರೆ ಸೀರಿಯಲ್‌ನ ಐಪಿಎಸ್ ಮಲ್ಲಿ, ಕುಡಿದು ಕಿರಿಕ್ ಮಾಡುತ್ತಿದ್ದ ಮಾಜಿ ಗಂಡ, ಕೆಡಿ ಜೈದೇವ್‌ಗೆ ಬಿಸಿ ಬಿಸಿ ಕಜ್ಜಾಯ ನೀಡಿದ್ದಾಳೆ. ಸದ್ಯ ಪೊಲೀಸ್ ಸ್ಟೇಶನ್ ಡ್ಯೂಟಿಯಲ್ಲಿರುವ ಮಲ್ಲಿ ತಾನೆಷ್ಟು ಖಡಕ್ ಎಂಬುದನ್ನು ತೋರಿಸುತ್ತಿದ್ದಾಳೆ. ಇಂದು ಬಿಡುಗಡೆಯಾಗಿರುವ ಪ್ರೋಮೋ ನೋಡಿ ಮಲ್ಲಿ ಫ್ಯಾನ್ಸ್ ಖುಷಿಯಾಗಿದ್ದಾರೆ.
25
ರೂರಲ್ ಖೋಟಾ ಮಲ್ಲಿ ಅಲ್ಲಿ ಕಣೋ!
ಪ್ರತಿ ಬಾರಿಯೂ ರೂರಲ್ ಖೋಟಾ ಮಲ್ಲಿ ಎಂದು ಅಣುಕಿಸುತ್ತಿದ್ದ ಜೈದೇವ್, ಮೊದಲ ಬಾರಿಗೆ ಮಾಜಿ ಪತ್ನಿಯ ಹೊಸ್ ಲುಕ್‌ಗೆ ಥಂಡಾ ಹೊಡೆದಿದ್ದಾನೆ. ಮಧ್ಯರಾತ್ರಿ ಕುಡಿದು ಕಾರ್ ಚಲಾಯಿಸುತ್ತಿದ್ದ ಜೈದೇವ್‌ನನ್ನು ಹಿಡಿಯಲಾಗಿತ್ತು. ಬಾಲ ಇಲ್ಲದ ಮಂಗನಂತಿರೋ ಜೈದೇವ್, ಪೊಲೀಸ್ ಜೀಪ್ ಮೇಲೆಯೇ ಹತ್ತಿ ಕಿರಿಕ್ ಮಾಡಿದ್ದಾನೆ.
35
ಜೈದೇವ್‌ಗೆ ಲಾಠಿ ಏಟು
ಪೊಲೀಸ್ ಜೀಪ್ ಮೇಲೆಯೇ ಕುಳಿತು ನ್ಯಾಯ ಬೇಕೆಂದು ಕೂಗುತ್ತಿದ್ದ ಜೈದೇವ್‌ಗೆ ಮಲ್ಲಿ ಲಾಠಿ ಏಟು ನೀಡಿದ್ದಾಳೆ. ನಂತರ ಆತನನ್ನು ಸ್ಟೇಶನ್‌ಗೆ ಶಿಫ್ಟ್ ಮಾಡಲಾಗಿದೆ. ಇಷ್ಟಾದ್ರೂ ಜೈದೇವ್ ಸೊಕ್ಕು ಮಾತ್ರ ಕಡಿಮೆಯಾಗಿಲ್ಲ. ನಿನ್ನನ್ನು ನೋಡಿಕೊಳ್ಳುವೆ ಎಂಬ ಸನ್ನೆ ಮಾಡಿ ಜೈದೇವ್ ಅಲ್ಲಿಂದ ತೆರಳಿದ್ದಾನೆ.
ಮತ್ತೊಂದೆಡೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಮಡದಿ ಭೂಮಿಕಾಳ ಆಸೆಯನ್ನು ಈಡೇರಿಸಲು ಗೌತಮ್ ಮುಂದಾಗಿದ್ದಾನೆ. ಪತ್ನಿ ಭೂಮಿಕಾ ಜೊತೆ ಮಾರುಕಟ್ಟೆಗೆ ಬಂದಿರುವ ಗೌತಮ್, ಚೌಕಾಸಿ ಮಾಡಿ ತರಕಾರಿ ಖರೀದಿಸುತ್ತಿದ್ದಾನೆ. ಈ ಮುಂಚೆಗ ಹೇಗೆ ಚೌಕಾಸಿ ಮಾಡಬೇಕು ಎಂಬುದನ್ನು ಗೌತಮ್‌ಗೆ ಭೂಮಿಕಾ ಹೇಳಿಕೊಟ್ಟಿದ್ದಾಳೆ.
55
ದಿಯಾಗಾಗಿ ಹುಡುಕಾಟ ಮುಂದುವರಿಸಿದ ಜೀವ
ಮತ್ತೊಂದೆಡೆ ಮೈಯೆಲ್ಲಾ ವಿಷ ತುಂಬಿಕೊಂಡಿರುವ ಶಕುಂತಲಾ ಮನೆಯಲ್ಲಿ ನಡೆಯುತ್ತಿರೋ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ. ಮತ್ತೊಂದೆಡೆ ಜೈದೇವ್ ಬೆನ್ನಹಿಂದೆಯೇ ಬಿದ್ದಿರೋ ಜೀವ, ದಿಯಾ ಎಲ್ಲಿ ಹೋದಳು ಎಂದು ಪತ್ತೆ ಮಾಡುತ್ತಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.