ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಇತ್ತೀಚೆಗೆ ಬಿಗ್ ಬಾಸ್ ಮಾಜಿ ವಿನ್ನರ್, ನಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್‌ನಿಂದ 3 ಲಕ್ಷ ಫಾಲೋವರ್ಸ್ ಕಳೆದುಕೊಂಡಿದ್ದಾರೆ.
ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶಾದ್ಯಂತ ನಡೆದ ನೀಟ್ ಪಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ಅಂತ್ಯಗೊಂಡಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಪರಿಸ್ಥಿತಿ ತಣ್ಣಗಾಗಿದೆ. ಪ್ರತಿಭಟನೆ ವೇಳೆ ಪೊಲೀಸರ ಲಾಠಿ ಚಾರ್ಜ್ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಈ ಬೆಳವಣಿಗೆ ಕುರಿತು, ವಿದ್ಯಾರ್ಥಿಗಳ ಭವಿಷ್ಯ ಹಾಗೂ ಜೀವನ ಕುರಿತು ಕಳಕಳಿ ವ್ಯಕ್ತಪಡಿಸಿ ಬಿಗ್ ಬಾಸ್ ಮಾಜಿ ವಿನ್ನರ್, ನಟಿ ಪರ್ಲೆ ಮೇನಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಫಾಲೋವರ್ಸ್ ಕಳೆದುಕೊಂಡಿದ್ದಾರೆ.
26
ಪರ್ಲೆ ಮೇನಿ ಹೇಳಿದ್ದೇನು?
ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪರ್ಲೆ ಮೇನಿ ತೀವ್ರ ಕಳಕಳಿ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳ ಬೇಡಿಕೆ ಅತ್ಯಂತ ಗಂಭೀರವಾಗಿದೆ. ಆದರೆ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳಿಗೆ ಗಾಯಗಳು ಆಗದಿರಲಿ, ಎಲ್ಲರೂ ಸುರಕ್ಷಿತವಾಗಿರಬೇಕು. ಜೀವಕ್ಕೆ ಅಪಾಯವಿದೆ ಎಂದೆನಿಸುತ್ತಿದ್ದರೆ ಮನೆಗೆ ಹಿಂದಿರುಗಿ. ಜೀವಕ್ಕಿಂತ ಮಿಗಿಲಾದ ಹೋರಾಟವಿಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು, ಉತ್ತಮ ಶಿಕ್ಷಣ ಸಿಗಬೇಕು. ಆದರೆ ಪ್ರತಿಭಟನೆಯ ಮೂಲಕ ಉದ್ದೇಶದ ಹಾದಿ ತಪ್ಪದಿರಲಿ, ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿ ಎಂದು ಪರ್ಲೆ ಮೇನಿ ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದರು.
36
ಕಮೆಂಟ್ ಸೆಕ್ಷನ್ ಆಫ್ ಮಾಡಿದ ಪೆರ್ಲೆ ಮೇನಿ
ಬಿಗ್ ಬಾಸ್ ಮಾಜಿ ವಿನ್ನರ್ ಪೋಸ್ಟ್‌ಗೆ ಹಲವರು ಕೆರಳಿದ್ದಾರೆ. ನೀವು ಬಾಯಿಗೆ ಚಿನ್ನದ ಸ್ಪೂನ್ ಇಟ್ಟುಕೊಂಡು ಬಂದಿದ್ದೀರಿ. ನಾವು ನಮ್ಮ ಹಕ್ಕು, ಉತ್ತಮ ಜೀವನಕ್ಕಾಗಿ ಹೋರಾಡುತ್ತಿದ್ದೇವೆ. ವಾಕ್ ಸ್ವಾತಂತ್ರ್ಯ ಎಂದು ಹೇಳುವ ನೀವು ಕಮೆಂಟ್ ಸೆಕ್ಷನ್ ಆಫ್ ಮಾಡಿ ಓಡಿ ಹೋಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಹಲವರು ಸಂಘಿ, ಬಿಜೆಪಿ ಬಕೆಟ್ ಎಂದೆಲ್ಲಾ ಸೋಶಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದರು.
ಟೀಕೆಗಗಳು ತೀವ್ರಗೊಳ್ಳುತ್ತಿದ್ದಂತೆ ಪರ್ಲೆ ಮೇನಿ ನೆಗಟೀವ್ ಕಮೆಂಟ್ ಮಾಡಿದವರ ವಿರುದ್ದ ಕಿಡಿ ಕಾರಿದ್ದರು. ನಾನು ಶಾಂತಿ ಹಾಗೂ ಅಂಹಿಸೆ ಬಯಸಿದ್ದೆ. ಆದರೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಪೈಕಿ ಸೋತ ನಿರ್ಮಾಪಕರೊಬ್ಬರು 4 ಪುಟಗಳ ನನ್ನ ಪೋಸ್ಟ್‌ಗೆ 10 ಪುಟಗಳ ಮಸಾಲೆ ಸ್ಕ್ರಿಪ್ಟ್ ಮಾಡಿ ಹರಿಬಿಟ್ಟಿದ್ದಾರೆ. ನನ್ನ ನೆಚ್ಚಿನ ಬಣ್ಣ ಕೇಸರಿ, ಭಾರತದ ಧ್ವಜದ ಬಣ್ಣ ಕೇಸರಿ ಎಂದು ಮೇನಿ ತಿರುಗೇಟು ನೀಡಿದ್ದರು.
56
3 ಲಕ್ಷ ಫಾಲೋವರ್ಸ್ ಕಡಿತ
ಪರ್ಲ್ ಮೇನಿ ಪೋಸ್ಟ್ ಮಾಡಿದ ಬಳಿಕ ಹಲವರು ಈಕೆ ಬಿಜೆಪಿ ಪರ, ಸಂಘಿ ಎಂದು ಬಿಂಬಿಸಿದ್ದಾರೆ. ಇಷ್ಟೇ ಅಲ್ಲ ಹಲವರು ಅನ್‌ಫಾಲೋ ಮಾಡಿದ್ದಾರೆ. 2.7 ಮಿಲಿಯನ್ ಫಾಲೋವರ್ಸ್‌ನಿಂದ ಒಂದು ಪೋಸ್ಟ್‌ನಿಂದ 2.4 ಮಿಲಿಯನ್ ಫಾಲೋವರ್ಸ್‌ಗೆ ಕುಸಿದಿದ್ದಾರೆ. ಕೇವಲ 48 ಗಂಟೆಗಳಲ್ಲಿ 3 ಲಕ್ಷ ಫಾಲೋವರ್ಸ್ ಕಳೆದುಕೊಂಡಿದ್ದಾರೆ. ಈಗಲೂ ನಟಿ ವಿರುದ್ಧ ಹಲವು ತಾಣಗಳಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಲಾಗುತ್ತಿದೆ.
66
ಪರ ವಿರೋಧ ಜಟಾಪಟಿ
ಈ ಪೋಸ್ಟ್ ಕುರಿತು ಪರ ವಿರೋಧಗಳು ಹೆಚ್ಚಾಗುತ್ತಿದೆ. ಈ ಪೈಕಿ ನಿರ್ಮಾಪಕರೊಬ್ಬರು ಎಂದು ಪರ್ಲೆ ಮೇನಿ ಹೆಸರು ಹೇಳದೆ ಮಾಡಿದ ಪ್ರತಿಕ್ರಿಯೆಗೆ ಹಿರಿಯ ಮಲಯಾಳಂ ನಿರ್ದೇಶಕ ಸಿಬಿ ಮಲಯಿಲ್ ಪುತ್ರ ಜೋಯ ಮಯಿಲ್ ಪ್ರತಿಕ್ರಿಯಿಸಿದ್ದಾರೆ.ನನ್ನ ತಂದೆ ವಿರುದ್ದ ಕಮೆಂಟ್ ಮಾಡಿದ್ದೀರಿ. ವೈಯುಕ್ತಿಕ ದಾಳಿ ಮಾಡುತ್ತಿದ್ದೀರಿ ಎಂದು ಹರಿಹಾಯ್ದಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.