ಸಣ್ಣ ಆಗಲೇ ಬೇಡಿ ಅಂದುಬಿಟ್ಟರು; 2 ತಿಂಗಳಲ್ಲಿ ದಪ್ಪಗಾದ 'ಅಮೃತಾಧಾರೆ' ಗೌತಮ್

Published : Mar 23, 2024, 01:00 PM ISTUpdated : Mar 23, 2024, 02:29 PM IST

ಅಬ್ಬಬ್ಬಾ! ಗೌತಮ್ ಪಾತ್ರ ಮಾಡಲು ದಪ್ಪಗಾದ ರಾಜೇಶ್. ಎಲ್ಲರೂ ಸಣ್ಣ ಆಗ ಬೇಕು ಅಂದ್ರೆ ಇಲ್ಲಿ ಫುಲ್ ಡಿಫರೆಂಟ್....

PREV
17
ಸಣ್ಣ ಆಗಲೇ ಬೇಡಿ ಅಂದುಬಿಟ್ಟರು; 2 ತಿಂಗಳಲ್ಲಿ ದಪ್ಪಗಾದ 'ಅಮೃತಾಧಾರೆ' ಗೌತಮ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಧಾರಾವಾಹಿಯಲ್ಲಿ ಗೌತಮ್ ಪಾತ್ರದಲ್ಲಿ ಮಿಂಚುತ್ತಿರುವ ರಾಜೇಶ್‌ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಈ ಪಾತ್ರಕ್ಕೆ ಮಾಡಿಕೊಂಡಿರುವ ತಯಾರಿ ಏನು ಗೊತ್ತಾ? 

27

ಗೌತಮ್ ಪಾತ್ರ ಮಾಡಲು ನಾನು ಮಾನಸಿಕವಾಗಿ ತಯಾರಿ ಮಾಡಿಕೊಳ್ಳಬೇಕಿತ್ತು. ಒಂದಿಷ್ಟು ಸೋಂಬೇರಿತನಕ್ಕೆ ನನ್ನನ್ನು ನಾನು ಒಗ್ಗಿಸಿಕೊಂಡಿದ್ದೆ. ಎಂದು ರಾಜೇಶ್ ಹೇಳಿದ್ದಾರೆ.

37

ಒಂದು ಪ್ರಾಜೆಕ್ಟ್‌ ಶುರುವಾದರೆ ಒಂದಿಷ್ಟು ದಿನಗಳಲ್ಲಿ ಮುಗಿಯುತ್ತದೆ ಅನ್ನೋದು ತಲೆಯಲ್ಲಿ ಇರುತ್ತದೆ ನನ್ನ ಕೆಲಸ ನಾನು ಮಾಡುವ ಕೆಟ್ಟದು ಒಳ್ಳೆಯದು ಜನರಿಗೆ ಬಿಟ್ಟಿದ್ದು ನಾನು ನಟಿಸಿ ಹೊರ ಬರುವುದು ಅಷ್ಟೇ ನನ್ನ ಕೆಲಸ. 

47

ಆದರೆ ಧಾರಾವಾಹಿ ಅಂದ್ರೆ ದಿನ ಬೆಳಗ್ಗೆ ಎದ್ದು ಚಿತ್ರೀಕರಣಕ್ಕೆ ಹೋಗಬೇಕು ಆ ಪಾತ್ರ ಪ್ರತಿ ದಿನ ಹೇಗೆ ಬೆಳೆಯುತ್ತದೆ ಗೊತ್ತಿಲ್ಲ ಅದಕ್ಕೆ ನನ್ನ ಕೊಡುಗೆ ಹೆಚ್ಚಿರಬೇಕು ಎಂದಿದ್ದಾರೆ ರಾಜೇಶ್.

57

ಈ ರೀತಿ ತಯಾರಿ ಬಿಟ್ಟರೆ ನಾನು ತೂಕ ಹೆಚ್ಚಿಸಿಕೊಳ್ಳಬೇಕಿತ್ತು ನೇರವಾಗಿ ನೋಡಿ ನೀವು ಇನ್ನು ದಪ್ಪಗಾಗಬೇಕು ಎಂದು ಹೇಳಿದರು ಹೊರತು ಸಣ್ಣಗಾಗಬೇಕು ಎಂದು ಹೇಳಲಿಲ್ಲ. 

67

ಎರಡು ತಿಂಗಳು ಸಮಯ ಕೊಡಿ ಸಣ್ಣ ಅಗುವೆ ಅಂದ್ರೆ ಬೇಡ ಸರ್ ನೀವು ಇನ್ನು ಸಣ್ಣ ಆಗಬೇಕು ಅಂತಾರೆ. ದಪ್ಪ ಆಗಬೇಕಾ ಎಂದು ಗಾಬರಿ ಅಗಿದೆ...ಆಗ ಇಲ್ಲ ಇಲ್ಲ ಹೀಗೆ ಇರಿ ಆದರೆ ಸಣ್ಣಗಾಗಬೇಡಿ ಅಂದ್ರು

77

ಅಪ್ಪ ಅಮ್ಮ ಹಾರೈಕೆ ದೇವರು ಕೊಟ್ಟಿರುವ ಮುಖ ಪಾತ್ರಕ್ಕೆ ಹೇಗೆ ಬೇಕು ಹಾಗೆ ಇತ್ತು ಸೂಟ್ ಆಂಡ್ ಕೋಟ್ ಹಾಕಿದರೆ ಚೆನ್ನಾಗಿ ಕಾಣಿಸುತ್ತೀನಿ ಅಂತಿತ್ತು ಅಷ್ಟು ಬಿಟ್ಟರೆ ಬೇರೆ ಯಾವ ರೀತಿನೂ ತಯಾರಿ ಮಾಡಿಕೊಳ್ಳುವ ಅಗತ್ಯವಿರಲಿಲ್ಲ' ಎಂದು ರಾಜೇಶ್ ಮಾತನಾಡಿದ್ದಾರೆ.

Read more Photos on
click me!

Recommended Stories