ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಜೋಡಿಹಕ್ಕಿ ಸುಂದರಿ ಚೈತ್ರ ರಾವ್…. ಇವರೇ ನಾಯಕಿ ಆಗ್ಬೇಕಿತ್ತು ಎಂದ ಫ್ಯಾನ್ಸ್

First Published | Mar 22, 2024, 5:10 PM IST

ಒಂದು ಕಾಲದಲ್ಲಿ ಜೋಡಿ ಹಕ್ಕಿ ಧಾರಾವಾಹಿಯಲ್ಲಿ ಜಾನಕಿ ಟೀಚರ್ ಆಗಿ ಜನಪ್ರಿಯತೆ ಗಳಿಸಿದ ನಟಿ ಚೈತ್ರಾ ರಾವ್ ಇದೀಗ ಶ್ರಾವಣಿ ಸುಬ್ರಹ್ಮಣ್ಯದಲ್ಲಿ ನೆಗೆಟೀವ್ ಶೇಡಿನಲ್ಲಿ ಕಾಣಿಸಿಕೊಂಡಿದ್ದಾರೆ. 
 

ಝೀ ಕನ್ನಡದಲ್ಲಿ ಇತ್ತೀಚೆಗೆ ಆರಂಭವಾದ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಹೊಸ ಹೊಸ ಪಾತ್ರಗಳ ಪರಿಚಯವಾಗುತ್ತಿದೆ. ಇದರ ನಡುವೆ ಮೋಕ್ಷ ಎನ್ನುವ ಪಾತ್ರದ ಮೂಲಕ ಚೈತ್ರಾ ರಾವ್ (Chaitra Rao) ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದಾರೆ. 
 

ಹಿಂದೆ ಜೋಡಿ ಹಕ್ಕಿ ಎನ್ನುವ ಜನಪ್ರಿಯ ಧಾರಾವಾಹಿ ಪ್ರಸಾರವಾಗುತ್ತಿದ್ದು, ಸೀರಿಯಲ್ ನಲ್ಲಿ ನಾಯಕಿ ಜಾನಕಿ ಟೀಚರ್ (Janaki Teacher)  ಆಗಿ ನಟಿಸಿದ್ದ ಚೈತ್ರಾ ರಾವ್, ಇದೀಗ ಶ್ರಾವಣಿ ಸುಬ್ರಹ್ಮಣ್ಯದಲ್ಲಿ ನೆಗೆಟೀವ್ ಶೇಡ್ ನಲ್ಲಿ ನಟಿಸುತ್ತಿದ್ದಾರೆ. 
 

Tap to resize

ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಯ ಕ್ರಿಮಿನಲ್ ಅತ್ತೆ ವಿಜಯಳ ಮಗಳು ಮೋಕ್ಷ ಪಾತ್ರದಲ್ಲಿ ಚೈತ್ರಾ ರಾವ್ ನಟಿಸುತ್ತಿದ್ದಾರೆ. ಈಗಾಗಲೇ ಇವರ ಪಾತ್ರ ರಿವೀಲ್ ಆಗಿದ್ದು, ಶ್ರಾವಣಿಯನ್ನು ದ್ವೇಷಿಸುವ ಮೋಕ್ಷಳನ್ನು ನೋಡಲು ಹುಡುಗನ ಕಡೆಯವರು ಬಂದಿದ್ದಾರೆ, ಆದರೆ ಶ್ರಾವಣಿಯ ಎಡವಟ್ಟಿನಿಂದ ಹುಡುಗ ಮನೆಯವರು ಕೋಪಗೊಂದು ಹೋಗುವಂತಾಗಿದೆ. 
 

ಚೈತ್ರಾ ರಾವ್ ಈ ಧಾರಾವಾಹಿಯಲ್ಲಿ ತುಂಬಾನೆ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಪಾತ್ರವನ್ನು ಸಹ ಜನರು ಇಷ್ಟಪಟ್ಟಿದ್ದಾರೆ. ಆದರೆ ತಮ್ಮ ಫೇವರಿಟ್ ನಟಿಯನ್ನು ಶ್ರಾವಣಿ ಸುಬ್ರಹ್ಮಣ್ಯದಲ್ಲಿ ನಾಯಕಿಯನ್ನಾಗಿ ನೋಡಲು ಜನರು ಇಷ್ಟಪಡುತ್ತಿದ್ದಾರೆ. 
 

ನಮ್ಮ ಮೆಚ್ಚಿನ ಜಾನಕಿ ಟೀಚರ್ ಅನ್ನು ಮತ್ತೆ ಸೀರಿಯಲ್‌ನಲ್ಲಿ (serial) ನೋಡಿ ತುಂಬಾ ಖುಷಿಯಾಗಿದೆ. ಆದರೆ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಹೀರೋಯಿನ್ ಈ ಪಾತ್ರಕ್ಕೆ ಸೂಟ್ ಆಗೋಲ್ಲ. ಬದಲಾಗಿ ಮುದ್ದು ಮುದ್ದಾಗಿರೋ ಚೈತ್ರಾ ರಾವ್ ಅವರೇ ನಾಯಕಿಯಾಗಬೇಕಿತ್ತು ಎಂದು ವೀಕ್ಷಕರು ಹೇಳ್ತಿದ್ದಾರೆ. 
 

ಜೋಡಿ ಹಕ್ಕಿ (Jodi Hakki) ಮೂಲಕ ನಟನೆಗೆ ಎಂಟ್ರಿ ಕೊಟ್ಟ ಚೈತ್ರಾ ರಾವ್ ಬಳಿಕ ಮಾಯಾಬಜಾರ್ ಸಿನಿಮಾ ಮೂಲಕ ಹಿರಿತೆರೆಗೆ ಎಂಟ್ರಿಕೊಟ್ಟರು. ಆ ಸಿನಿಮಾದಲ್ಲಿ ವಶಿಷ್ಠ ಸಿಂಹನಿಗೆ ಜೋಡಿಯಾಗಿ ನಟಿಸಿದ್ದರು. ಬಳಿಕ ಟಾಮ್ ಆಂಡ್ ಜೆರ್ರಿ ಸಿನಿಮಾ ಮೂಲಕ ಜನರನ್ನು ರಂಜಿಸಿದ್ದರು. 
 

ಎರಡು ಸಿನಿಮಾದ ಬಳಿಕ ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ವಿಶೇಷ ಪಾತ್ರದ ಮೂಲಕ ಮತ್ತೆ ಕಿರುತೆರೆಯಲ್ಲಿ ನಟಿಸಿದ್ದರು.ಇದೀಗ ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಮತ್ತೆ ರಂಜಿಸೋಕೆ ಬಂದಿದ್ದಾರೆ. ಇವರ ಪಾತ್ರ ಹೇಗಿರಲಿದೆ ಅನ್ನೋದನ್ನು ಕಾದು ನೋಡಬೇಕು. 
 

Latest Videos

click me!