ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಅರಳಿದ ಯೂಟ್ಯೂಬ್ ಪ್ರತಿಭೆ ಪೂಜಾ ಕೆ ಆರ್ ಮತ್ತು ಸತೀಶ್ ಈರೇಗೌಡ್ರು ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
ಬೈಕ್ ರೈಡ್ ಮತ್ತು ಟ್ರಾವಲ್ ವಿಡಿಯೋ ಮಾಡುವ ಸತೀಶ್ ಈರೇಗೌಡ, ದಿನ ನಿತ್ಯ ಹಾಗೂ ಅಡುಗೆ ರೆಸಿಪಿಗಳ ವಿಡಿಯೋಗಳನ್ನು ಪೂಜಾ ಕೆ ರಾಜ್ ಮಾಡುತ್ತಾರೆ.
ಈ ಜೋಡಿಗೆ 6ನೇ ತರಗತಿ ಓದುತ್ತಿರುವ ಮಗಳಿದ್ದು ಕೆಲವು ತಿಂಗಳ ಹಿಂದೆ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಹೊಸ ಮನೆಯ ಪೂಜೆ ನಡೆದಿದೆ.
ಹೌದು! ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಇರುವ ಪ್ರೆಸ್ಟೇಜ್ ಅಪಾರ್ಟ್ಮೆಂಟ್‌ಗಳಲ್ಲಿ 1BKH ಮನೆಯನ್ನು ಪೂಜಾ ಮತ್ತು ಸತೀಶ್ ಖರೀದಿಸಿದ್ದು, ಸರಳವಾಗಿ ಗೃಹಪ್ರವೇಶ ಮಾಡಿದ್ದಾರೆ.
ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿರುವ ಈ ಜೋಡಿ ಇನ್‌ಸ್ಟಾಗ್ರಾಂನಲ್ಲೂ ಸಾಕಷ್ಟು ಬ್ರ್ಯಾಂಡ್‌ಗಳ ಪ್ರಚಾರ ಮಾಡುತ್ತಾರೆ. ಹೀಗಾಗಿ ಇವರ ಸಂಪಾದನೆ ಸೋಷಿಯಲ್ ಮೀಡಿಯಾದಿಂದಲೇ.
ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಈರೇಗೌಡ್ರು ಬೆಂಗಳೂರಿಗೆ ಬಂದು ಕೆಲವು ವರ್ಷಗಳ ಹಿಂದೆ ಕೆಲಸಕ್ಕೆ ರಿಸೈನ್ ಮಾಡಿ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈಗಾಗಲೆ ಎರಡು ಮೂರು ಕಿರುಚಿತ್ರ ಬಿಡುಗಡೆ ಮಾಡಿದ್ದಾರೆ.