ಅಮ್ಮ ಇನ್ನೆಲ್ಲಿ ಹೋಗ್ತಾರೆ, ಆ ಭಾಗ್ಯಾಗೆ ಬೆಂಡೆತ್ತೋಕೆ ಹೋಗ್ತಿದ್ದಾಳೆ, ಈ ಥರ ಸುಳ್ಳು ಹೇಳಿ, ನಾಚಿಕೆ ಆಗುವಂತಹ ಕೆಲಸ ಮಾಡಿದ್ರೆ, ಸುಮ್ನೆ ಬಿಡ್ತಾರ ನನ್ನ ಅಮ್ಮ. ಭಾಗ್ಯಗೆ ಇದೆ ಮಾರಿ ಹಬ್ಬ. ನಮ್ಮಮ್ಮ ಯಾವಾಗ್ಲೂ ಹೇಳ್ತಿದ್ರು ಮನೆ ಸೊಸೆ ಹೊರಗೆ ಕೆಲಸ ಮಾಡ್ಬಾರ್ದು ಅಂತ , ಅಂತಾದ್ರಲ್ಲಿ ಅವಳು ಇಂತದ್ದೆಲ್ಲಾ ಕೆಲಸ ಮಾಡಿದ್ರೆ ಬೇಜಾರಾಗಲ್ವಾ, ಅಮ್ಮನಿಗೆ ಮೊದಲೇ ಸುಳ್ಳು ಹೇಳೋರನ್ನ ಕಂಡ್ರೆ ಆಗಲ್ಲ, ಅಂತಾದ್ರಲ್ಲಿ ಭಾಗ್ಯ ಸುಳ್ಳು ಹೇಳಿದ್ರೆ ಸುಮ್ನೆ ಬಿಡ್ತಾರ ಖಂಡಿತಾ ಇಲ್ಲ ಅಂತಿದ್ದಾನೆ ತಾಂಡವ್.