YouTuber Driving license Suspend: ಕುಡಿದು ಕಾರು ಓಡಿಸಿದ 'ಯೂಟ್ಯೂಬರ್ ಧನ್ಯ' ಲೈಸೆನ್ಸ್ 3 ತಿಂಗಳು ಸಸ್ಪೆಂಡ್!

Published : Aug 07, 2026, 10:22 PM IST

ಪ್ರಸಿದ್ಧ ಯೂಟ್ಯೂಬರ್ 'ಹೆಲೆನ್ ಆಫ್ ಸ್ಪಾರ್ಟಾ' ಅಲಿಯಾಸ್ ಎಸ್.ಆರ್. ಧನ್ಯ ಚಾಲನಾ ಪರವಾನಗಿಯನ್ನು ಮೋಟಾರು ವಾಹನ ಇಲಾಖೆ ಮೂರು ತಿಂಗಳ ಕಾಲ ಅಮಾನತುಗೊಳಿಸಿದೆ. ಕುಡಿದು ವಾಹನ ಚಲಾಯಿಸಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.

PREV
15

ಸೋಷಿಯಲ್ ಮೀಡಿಯಾದಲ್ಲಿ (Social Media) ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿರುವ ಪ್ರಸಿದ್ಧ ಯೂಟ್ಯೂಬರ್ (YouTuber) ಹಾಗೂ ಕಂಟೆಂಟ್ ಕ್ರಿಯೇಟರ್ 'ಹೆಲೆನ್ ಆಫ್ ಸ್ಪಾರ್ಟಾ' (Helen of Sparta) ಅಲಿಯಾಸ್ ಎಸ್.ಆರ್. ಧನ್ಯ ಅವರಿಗೆ ಮೋಟಾರು ವಾಹನ ಇಲಾಖೆ (Motor Vehicles Department - MVD) ದೊಡ್ಡ ಶಾಕ್ ನೀಡಿದೆ. ಕುಡಿದು ವಾಹನ ಚಲಾಯಿಸಿದ (Drunk and Drive) ಪ್ರಕರಣದಲ್ಲಿ ಅವರ ಚಾಲನಾ ಪರವಾನಗಿಯನ್ನು (Driving License) ಮೂರು ತಿಂಗಳ ಕಾಲ ಅಮಾನತು (Suspend) ಮಾಡಲಾಗಿದೆ.

25

ಕಳೆದ ಜುಲೈ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿತ್ತು. ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ (National Highway) ಅಣಂಗೂರು ಎಂಬಲ್ಲಿ ಧನ್ಯ ಅವರು ತಮ್ಮ ಕಾರನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರು. ಇದನ್ನು ಗಮನಿಸಿದ ಕರ್ತವ್ಯನಿರತ ಪೊಲೀಸರು ಪರಿಶೀಲನೆಗೆ (Inspection) ಮುಂದಾಗಿದ್ದರು. ಆದರೆ, ಪೊಲೀಸರು ಬರುತ್ತಿರುವುದನ್ನು ಕಂಡ ತಕ್ಷಣ ಧನ್ಯ ಕಾರನ್ನು ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು.

35

ಪೊಲೀಸರ ಹೈ-ಡ್ರಾಮಾ ಚೇಸಿಂಗ್:

ಪೊಲೀಸರ ಸೂಚನೆಗೆ ಕ್ಯಾರೇ ಎನ್ನದೆ ವೇಗವಾಗಿ ತೆರಳಿದ ಕಾರನ್ನು ಪೊಲೀಸರು ಬೆನ್ನಟ್ಟಿದ್ದರು. ಅಂತಿಮವಾಗಿ ಮಂಗಳಪಾಡಿ, ಬಂತಿಯೋಡು ಮತ್ತು ಭಗವತಿ ನಗರದ ಬಳಿ ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಲಾಯಿತು. ಈ ವೇಳೆ ಕಾರು ಚಲಾಯಿಸುತ್ತಿದ್ದ ಧನ್ಯ ಮದ್ಯಪಾನ ಮಾಡಿರುವುದು ಪತ್ತೆಯಾಗಿತ್ತು. ತಕ್ಷಣವೇ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ತಾನು ಬಿಯರ್ (Beer) ಕುಡಿದಿದ್ದಾಗಿ ಧನ್ಯ ಒಪ್ಪಿಕೊಂಡಿದ್ದರು.

45

ಲೈಸೆನ್ಸ್ ಸಸ್ಪೆಂಡ್ ಹಾಗೂ ಶಿಸ್ತು ಕ್ರಮ:

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೋಟಾರು ವಾಹನ ಇಲಾಖೆಯು (MVD) ಧನ್ಯ ಅವರ ಡ್ರೈವಿಂಗ್ ಲೈಸೆನ್ಸ್ ಅನ್ನು 3 ತಿಂಗಳ ಕಾಲ ಸಸ್ಪೆಂಡ್ ಮಾಡಿದೆ. ಅಷ್ಟೇ ಅಲ್ಲದೆ, ಇಲಾಖೆಯು ನಡೆಸುವ 3 ದಿನಗಳ ಕಾಲದ ವಿಶೇಷ ಶಿಸ್ತು ಮತ್ತು ಸುರಕ್ಷತಾ ತರಬೇತಿ ಶಿಬಿರಕ್ಕೂ (Special Training Program) ಅವರು ಕಡ್ಡಾಯವಾಗಿ ಹಾಜರಾಗಬೇಕಿದೆ.

55

ಯೂಟ್ಯೂಬರ್ ಧನ್ಯ ನೀಡಿದ ಸ್ಪಷ್ಟನೆ:

ಈ ಘಟನೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದ ಧನ್ಯ, "ನಾನು ಸಾರ್ವಜನಿಕವಾಗಿ ಫೇಮಸ್ ಆಗಿರುವುದರಿಂದ ಎಲ್ಲರೂ ನನ್ನನ್ನು ಗುರುತಿಸುತ್ತಾರೆ ಎಂಬ ಭಯದಿಂದ ಕಾರನ್ನು ರಸ್ತೆಯಲ್ಲಿ ನಿಲ್ಲಿಸಲಿಲ್ಲ. ನೇರವಾಗಿ ಮನೆ ಮುಂದೆ ಹೋಗಿ ನಿಲ್ಲಿಸಿದೆ" ಎಂದು ತಮ್ಮ ಸಫಾಯಿ ನೀಡಿದ್ದರು. ಅಲ್ಲದೆ ಪೊಲೀಸರು ತನಗೆ ದಂಡ (Fine) ವಿಧಿಸಿ, ಕುಡಿದು ವಾಹನ ಚಲಾಯಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ತಿಳಿಹೇಳಿದ್ದಾರೆ ಎಂದೂ ವಿವರಿಸಿದ್ದರು. ಸದ್ಯ ಈ ಪ್ರಕರಣ ಕಾಸರಗೋಡು ಹಾಗೂ ಕೇರಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories