ನಾತಿಚರಾಮಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಯಶವಂತ್ ಗೌಡ… ಅಭಿಮಾನಿಗಳು ಫುಲ್ ಖುಷ್!

Published : Oct 26, 2024, 04:07 PM ISTUpdated : Oct 27, 2024, 09:10 AM IST

ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಸೀರಿಯಲ್ ನಾತಿಚರಾಮಿ ಮೂಲಕ ಕನ್ಯಾಕುಮಾರಿ ಸೀರಿಯಲ್ ನಟ ಯಶವಂತ್ ಗೌಡ ಮತ್ತೆ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದಾರೆ.   

PREV
17
ನಾತಿಚರಾಮಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಯಶವಂತ್ ಗೌಡ… ಅಭಿಮಾನಿಗಳು ಫುಲ್ ಖುಷ್!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರಾವಾಹಿ (Kanya Kumari serial) ನೆನಪಿದ್ಯಾ? ಈ ಸೀರಿಯಲ್ ನಲ್ಲಿ ನಾಯಕ ಚರಣ್ ಪಾತ್ರದಲ್ಲಿ ನಟಿಸಿದ ನಟ ಯಶ್ವಂತ್ ಗೌಡ. ಮೊದಲ ಧಾರಾವಾಹಿಯ ನಟನೆಯಿಂದಲೇ ಚಾಕಲೇಟ್ ಹೀರೋ ಯಶ್ವಂತ್ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದರು. 
 

27

ಕನ್ಯಾಕುಮಾರಿ ಸೀರಿಯಲ್ ನಲ್ಲಿ ಯಶವಂತ್ ಗೆ (Yashwanth Gowda) ಜೋಡಿಯಾಗಿ ಆಸಿಯಾ ಫಿರ್ದೋಸೆ ನಟಿಸಿದ್ದರು. ಸದ್ಯ ಆಸಿಯಾ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಯಶವಂತ್ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಅವರು ಮತ್ತೆ ಕನ್ನಡಕ್ಕೆ ಬರಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದರು.. ಇದೀಗ ಅಭಿಮಾನಿಗಳ ಕನಸು ನನಸಾಗಿದೆ. ಹೊಸ ಧಾರಾವಾಹಿ ಮೂಲಕ ಯಶವಂತ್ ಮತ್ತೆ ಕನ್ನಡಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. 
 

37

ಝೀ ತೆಲುಗು ವಾಹಿನಿಯಲ್ಲಿ ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಜೊತೆ ಅಮ್ಮಾಯಿಗಾರು ಧಾರಾವಾಹಿಯಲ್ಲಿ ನಟಿಸುತ್ತಿರುವ ಯಶವಂತ್, ಇದೀಗ ಉದಯವಾಹಿನಿಯಲ್ಲಿ ಶೀಘ್ರದಲ್ಲೆ ಪ್ರಸಾರವಾಗಲಿರುವ ನಾತಿಚರಾಮಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಲಿದ್ದಾರೆ. 
 

47

ಯಶವಂತ್ ನಾತಿಚರಾಮಿ (Nathicharami)ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಗಸ್ತ್ರ ತಾಯಿ ಇಲ್ಲದ ಹುಡುಗ. ಎಲ್ಲಾ ಪ್ರಿತಿಯನ್ನು ಕೊಡುವ ತಾಯಿಯನ್ನೇ ತನ್ನಿಂದ ಕಿತ್ತಿಕೊಂಡಿರುವ ದೇವರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವ ನಾಯಕ ಅಗಸ್ತ್ಯ. 
 

57

ಆದರೆ ನಾಯಕಿಯ ಪಾತ್ರ ಅದಕ್ಕೆ ವಿರುದ್ಧವಾದುದು. ಆಕೆ ಸಂಪೂರ್ಣವಾಗಿ ದೈವ ಭಕ್ತೆ.  ತಾಯಿ ಬನಶಂಕರಮ್ಮನ ಭಕ್ತೆಯಾಗಿರುವ ಹುಡುಗಿ ಭಕ್ತಿ. ತಾನು ಏನೇ ಕೆಲಸ ಮಾಡೋದಾದರೂ ಅದರಲ್ಲೂ ಮದುವೆ ಆಗಬೇಕಾದರೂ ದೇವರು ಒಪ್ಪಬೇಕು ಎನ್ನುವ ಹುಡುಗಿ ಆಕೆ. 
 

67

ದೇವರಲ್ಲಿ ಅಪಾರ ಭಕ್ತಿಯನ್ನು ಹೊಂದಿರುವ ತನ್ನ ಜೀವನದಲ್ಲಿ ಏನೇ ನಡೆಯುವುದಾದರು ದೇವರನ್ನು ಕೇಳಿಯೇ ನಡೆಯುವ ಭಕ್ತಿಗೂ, ದೇವರ ಮೇಲೆ ಭಕ್ತಿ ಇಲ್ಲದೇ ಬರೀ ಕೋಪವೇ ಇರುವ ನಾಯಕ ಅಗಸ್ತ್ಯ ಹೇಗೆ ಒಂದಾಗಲಿದ್ದಾರೆ ಎನ್ನುವ ಕಥೆಯೇ ನಾತಿಚರಾಮಿ.
 

77

ಉದಯವಾಹಿನಿ (Udaya Tv) ನವೆಂಬರ್ 4 ರಿಂದ ಧಾರಾವಾಹಿ ಪ್ರಾರಂಭವಾಗುತ್ತಿದೆ. ಸಂಜೆ 6:30ಕ್ಕೆ ಸೀರಿಯಲ್ ಪ್ರಸಾರವಾಗಲಿದೆ. ಯಶವಂತ್ ಅವರು ನಾಯಕನಾಗಿ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಮಗೋಸ್ಕರನಾದ್ರೂ ಸೀರಿಯಲ್ ನೋಡ್ತೀವಿ ಎಂದಿದ್ದಾರೆ ಜನ.
 

click me!

Recommended Stories