ವಿದೇಶದಲ್ಲಿರೋ 2 ಮಕ್ಕಳ ತಂದೆಯನ್ನ ಮದುವೆಯಾಗಲು ಹೋಗಿ 400 ಗ್ರಾಂ ಚಿನ್ನ ಕಳ್ಕೊಂಡ ಸೀರಿಯಲ್ ನಟಿ

First Published | Oct 26, 2024, 9:42 AM IST

ವಿದೇಶದಲ್ಲಿರುವ ವ್ಯಕ್ತಿಯನ್ನು ಮದುವೆಯಾಗಲು ಹೋಗಿದ್ದ ಕಿರುತೆರೆ ನಟಿ ಮೋಸಕ್ಕೆ ಒಳಗಾಗಿದ್ದಾರೆ. ಎರಡು ಮಕ್ಕಳ ತಂದೆಯನ್ನು ಮದುವೆಯಾಗಲು ನಟಿ ಮುಂದಾಗಿದ್ದರು. ಮದುವೆಗೂ ಮುನ್ನ ವಿದೇಶಕ್ಕೆ ತೆರಳಿದ ಸಂದರ್ಭದಲ್ಲಿ ಆತನ ಅಸಲಿ ಮುಖ ಗೊತ್ತಾಗಿ ಭಾರತಕ್ಕೆ ಹಿಂದಿರುಗಿದ್ದಾರೆ.

ಜೆನಿ ಪ್ರಿಯಾ ಸಿನಿ ಜೀವನ

ನಟಿ ಜೆನಿ ಪ್ರಿಯಾ 'ವಾಣಿ ರಾಣಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಫೇಮಸ್ ಆದ ಕಲಾವಿದೆ. ಸನ್ ಟಿವಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ನಿರೂಪಕಿಯಾಗಿಯೂ ಗುರುತಿಸಿಕೊಂಡರು. ಜೆನಿ ಪ್ರಿಯಾ ಮೇಕಪ್ ಕಲಾವಿದೆಯಾಗಿಯೂ ಕೆಲಸ ಮಾಡಿದ್ದಾರೆ. ಅದೇ ರೀತಿ ‘ರಾಜಮನ್ನಾರ್ ವುಪಯಾರ’ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಸಿಕೊಳ್ಳುವ ಮೂಲಕ ತಮಿಳುನಾಡಿನ ಜನತೆಗೆ ಚಿರಪರಿಚಿತರಾಗಿದ್ದಾರೆ. ಸಿ.ಎಸ್.ಅಮುತನ್ ನಿರ್ದೇಶನದ, ಶಿವಾ ಅಭಿನಯದ ತಮಿಳಿನ 2 ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದರು.

ವೃತ್ತಿಜೀವನದಲ್ಲಿ ಉತ್ತುಂಗದ ಸ್ಥಾನದಲ್ಲಿರುವಾಗಲೇ ಜೆನ್ನಿ ಅವರಿಗೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಇದಕ್ಕಾಗಿ ಮ್ಯಾಟ್ರಿಮೋನಿಯಲ್ಲಿ ವಿದೇಶದಲ್ಲಿರುವ ವರನಿಗಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಜೆನಿ ಪ್ರಿಯಾ ಅವರಿಗೆ ಪರಿಚಯವಾಗಿದ್ದು, ಎರಡು ಮಕ್ಕಳ ತಂದೆ ಪೈಲಟ್ ಥುಣೇಶನ್. ಡಿವೋರ್ಸ್ ಪಡೆದುಕೊಂಡಿದ್ದರಿಂದ ಥುಣೇಶನ್ ಅವರನ್ನು ಮದುವೆಯಾಗಲು ಜೆನ್ನಿ ನಿರ್ಧರಿಸಿದ್ದಾರೆ.

Tap to resize

ಜೆನಿ ಪ್ರಿಯಾ ಮತ್ತು ಥುಣೇಶನ್ ಪರಸ್ಪರ ಪ್ರೀತಿಸುತ್ತಿದ್ದಾರೆ. ಹಾಗಾಗಿ ನಾವು ಅವರಿಬ್ಬರ ಮದುವೆಯನ್ನು ಮಾಡುತ್ತಿದ್ದೇವೆ ಎಂದು ಜೆನ್ನಿ ಪೋಷಕರು ಹೇಳಿದ್ದಾರೆ. ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು,  ನವೆಂಬರ್ 8 ಮತ್ತು 11 ರಂದು ಮದುವೆ ನಡೆಯಲಿದೆ ಎಂದು ವರದಿಯಾಗಿತ್ತು. 

ಆದರೆ ಇಲ್ಲೇ ಇರೋದು ಟ್ವಿಸ್ಟ್. ಮದುವೆ ಸಂದರ್ಭದಲ್ಲಿ 200 ಸವರನ್ ಚಿನ್ನ (1 ಸವರಣ್=8 ಗ್ರಾಂ) ನೀಡಬೇಕೆಂದು ಥುನೇಸನ್ ಪೋಷಕರು ಡಿಮ್ಯಾಂಡ್ ಮಾಡಿದ್ದಾರೆ. ಮದುವೆ ಬಳಿಕ ಇಷ್ಟೊಂದು ಚಿನ್ನವನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಹಾಗಾಗಿ ಮೊದಲು 100 ಸವರಣ್ ಚಿನ್ನ ನೀಡುವಂತೆ ಕೇಳಿದ್ದಾರೆ. ಇದನ್ನು ನಂಬಿದ ಜೆನಿ ಪೋಷಕರು ಮೊದಲ ಹಂತದಲ್ಲಿ 50 ಸವರಣ್ ಚಿನ್ನವನ್ನು ವರನಿಗೆ ನೀಡಿದ್ದಾರೆ.

jeni priya

50 ಸವರಣ್ ಚಿನ್ನ ಸಿಗುತ್ತಿದ್ದಂತೆ ಪ್ರಿ ವೆಡ್ಡಿಂಗ್ ಫೋಟೋಶೂಟ್‌ಗಾಗಿ ಥುಣೇಶನ್ ಇರೋ ಸಿಂಗಾಪುರಕ್ಕೆ ಜೆನಿ ತೆರಳಿದ್ದಾರೆ. ಈ ವೇಳೆ ಥುಣೇಶನ್ ತನ್ನ ಸಂಬಂಧಿಕರನ್ನು ಜೆನಿಗೆ ಪರಿಚಯ ಮಾಡಿಸಿದ್ದಾನೆ. ಥುಣೇಶನ್ ಕುಟುಂಬದವರೇ ಮೊದಲ ಪತ್ನಿಯನ್ನು ಮನೆಯಿಂದ ಓಡಿಸಿರುವ ವಿಚಾರ ತಿಳಿದು ಬಂದಿದೆ. ಇಷ್ಟು ಮಾತ್ರವಲ್ಲದೇ ಥುಣೇಶನ್ ಹಿರಿಯ ಮಗನ ನಡವಳಿಕೆಯೂ ಚೆನ್ನಾಗಿರಲಿಲ್ಲವಂತೆ. ಈ ಬಗ್ಗೆ ಕೇಳಿದಾಗ ಆತ ಮೊಬೈಲ್ ಗೇಮ್‌ಗಳಿಗೆ ಅಡಿಕ್ಟ್ ಆಗಿದ್ದಾನೆ ಎಂದು ಥುಣೇಶನ್ ಹೇಳಿದ್ದಾನೆ. 

ಇದೆಲ್ಲವನ್ನು ಗಮನಿಸಿದಾಗ ಜೆನಿ ಪ್ರಿಯಾರಿಗೆ ಅನುಮಾನ ಬಂದಿದೆ. ಮೊದಲ ಹೆಂಡತಿಯ ಬಗ್ಗೆ ಕೇಳಿದಾಗ ಥುಣೇಶನ್ ಉತ್ತರ ನೀಡದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮೊದಲ ಪತ್ನಿಯ ಕುರಿತು ಕೇಳಲು ಆರಂಭಿಸುತ್ತಿದ್ದಂತೆ ಥುಣೇಶನ್ ಕಾಲ್ ರಿಸೀವ್ ಸಹ ಮಾಡೋದನ್ನು ನಿಲ್ಲಿಸಿದ್ದಾನೆ. ಈಗ ಮದುವೆ ಬೇಡ ಎಂದು ಸ್ನೇಹಿತರ ಮೂಲಕ ಹೇಳಿಸುತ್ತಿದ್ದಾನೆ. 

jeni priya

ಜೆನಿ ಪ್ರಿಯಾ ಕುಟುಂಬಸ್ಥರು ಆಭರಣ ಮತ್ತು ವಸ್ತುಗಳನ್ನು ಪಡೆಯಲು ಹೋದಾಗ ಅವರಿಗೆ ಬಟ್ಟೆ ಮತ್ತು ಕೆಲವು ವಸ್ತುಗಳನ್ನು ಮಾತ್ರ ನೀಡಲಾಯಿತು. ಚಿನ್ನಾಭರಣ ಕೊಡಿ ಎಂದು ಕೇಳಿದಾಗ ನೀವು ಎಲ್ಲ ಚಿನ್ನಾಭರಣ ನೀಡಿಲ್ಲ ಎಂದು ಹೇಳಿ ಶಾಕ್ ನೀಡಿದ್ದಾನೆ.  ಈ ಸಮಯದಲ್ಲಿ ತನ್ನ ಸಹಾಯಕ್ಕೆ ಯಾರು ಇಲ್ಲದ ಕಾರಣ ಏನು ಮಾಡಲು ಸಾಧ್ಯವಾಗಲಿಲ್ಲ ಎಂದು ನಟಿ ಹೇಳಿಕೆ ನೀಡಿದ್ದಾರೆ.

ಸಿಂಗಾಪುರನಿಂದ ಚೆನ್ನೈಗೆ ಬಂದ ಬಳಿಕ ಸಿಂಗಾಪುರ್ ಏರ್‌ಲೈನ್ಸ್‌ಗೆ ವಕೀಲರ ಮೂಲಕ ದೂರು ನೀಡಿದ್ದಾರೆ. ಆಭರಣಗಳ ವಿಡಿಯೋ, ಫೋಟೋ ಹಾಗೂ ಇಬ್ಬರ ನಡುವಿನ ವಾಟ್ಸಪ್ ಚಾಟ್ ಸಾಕ್ಷ್ಯ ನೀಡಿದ್ದಾರೆ. ಒಟ್ಟು 50 ಸವರಣ್ ಆಭರಣ ಕಳೆದುಕೊಂಡಿರುವ ನಟಿ, ಮದುವೆ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 

Latest Videos

click me!