ಚೊಚ್ಚಲ ಪ್ರಶಸ್ತಿ ಪಡೆದು ಭಾವುಕರಾದ ಚಂದನ ಅನಂತಕೃಷ್ಣ… ಚಿನ್ನುಮರಿಗೆ ಅಭಿನಂದನೆ ಸಲ್ಲಿಸಿದ ಫ್ಯಾನ್ಸ್

First Published | Oct 26, 2024, 12:23 PM IST

ಝೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಮೊದಲನೇ ದಿನ ಲಕ್ಷ್ಮೀ ನಿವಾಸದ ಜಾಹ್ನವಿ ಅಂದ್ರೆ ಚಂದನಾ ಅನಂತಕೃಷ್ಣ ಕೂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 
 

ಝೀ ಕನ್ನಡ ವಾಹಿನಿಯ ಅತಿ ದೊಡ್ಡ ಹಬ್ಬವಾದ ಝೀ ಕುಟುಂಬ ಅವಾರ್ಡ್ಸ್ (Zee Kutumba Awards) ಬಹಳ ಅದ್ಧೂರಿಯಾಗಿ ನಡೆದಿದ್ದು, ಮೊದಲ ದಿನದ ಪ್ರಶಸ್ತಿ ಸಮಾರಂಭದ ಟಿವಿಯಲ್ಲಿ ಪ್ರಸಾರವಾಗಿದೆ. ಸುಮಾರು 12 ಕೆಟಗರಿಗಳಲ್ಲಿ ಪ್ರಶಸ್ತಿ ನೀಡಲಾಗಿದ್ದು, ಲಕ್ಷ್ಮೀ ನಿವಾಸದ ಚಂದನ ಅನಂತಕೃಷ್ಣ ಸಹ ಪ್ರಶಸ್ತಿ ಪಡೆದಿದ್ದಾರೆ. 
 

ಹೌದು ಲಕ್ಷ್ಮೀ ನಿವಾಸ (Lakshmi Nivasa) ಧಾರವಾಹಿಯಲ್ಲಿ ಲಕ್ಷ್ಮೀ ಶ್ರೀನಿವಾಸರ ಕಿರಿಯ ಪುತ್ರಿ ಹಾಗೂ ಜಯಂತ್ ನ ಮುದ್ದಿನ ಚಿನ್ನುಮರಿ ಜಾಹ್ನವಿ ಪಾತ್ರದಲ್ಲಿ ಚಂದನ ಅನಂತಕೃಷ್ಣ ನಟಿಸುತ್ತಿದ್ದಾರೆ. ಇದೀಗ ಪ್ರಶಸ್ತಿ ಸಮಾರಂಭದಲ್ಲಿ ಝೀ ಕನ್ನಡ ಬೆಸ್ಟ್ ಫೈಂಡಿಂಗ್ ಪ್ರಶಸ್ತಿಯನ್ನು ಭಾವನಾ ಪಾತ್ರದಲ್ಲಿ ನಟಿಸುವ ದಿಶಾ ಮದನ್ ಜೊತೆಗೆ ಚಂದನ ಅನಂತಕೃಷ್ಣ ಕೂಡ ಪಡೆದಿದ್ದಾರೆ. 

Tap to resize

ನಿಜಕ್ಕೂ ಚಂದನ ಅನಂತಕೃಷ್ಣ (Chandana Ananthakrishna) ಝೀ ಕನ್ನಡಕ್ಕೆ ಸಿಕ್ಕಿದ ಅದ್ಭುತ ಪ್ರತಿಭೆಯೇ ಹೌದು. ಕಳೆದ ಐದು ವರ್ಷಗಳಿಂದ ಚಂದನ ನಟನೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ರಾಜಾ ರಾಣಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಚಂದನ, ಚುಕ್ಕಿಯಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 
 

ಬಳಿಕ ಹೂಮಳೆ ಸೀರಿಯಲ್ ನಲ್ಲೂ ನಟಿಸಿದ್ದರು, ಅಷ್ಟೇ ಅಲ್ಲ ಬಿಗ್ ಬಾಸ್ ಸೀಸನ್ 7 ರ ಕಂಟೆಸ್ಟಂಟ್ ಕೂಡ ಆಗಿದ್ದರು ಚಂದನ, ಜೊತೆಗೆ ಹಾಡು ಕರ್ನಾಟಕ ಹಾಡು ಕಾರ್ಯಕ್ರಮದ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದರು. ಜೊತೆಗೆ ವರ್ಧಿನಿ ಪರಿಣಯಂ ಎನ್ನುವ ತೆಲುಗು ಸೀರಿಯಲ್ ನಲ್ಲೂ ಚಂದನ ಮಿಂಚಿದ್ದರು. 
 

ಇಷ್ಟು ವರ್ಷಗಳಿಂದ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದೀಗ ಝೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಟನೆಗಾಗಿ ಮೊದಲ ಬಾರಿ ಚಂದನ ಪ್ರಶಸ್ತಿ ಪಡೆದುಕೊಂಡಿದ್ದು, ಪ್ರಶಸ್ತಿ ಪಡೆದುಕೊಂಡ ನಟಿ ಭಾವುಕರಾಗಿ, ತಮ್ಮ ಪ್ರಶಸ್ತಿಯನ್ನು ಅಮ್ಮನಿಗೆ, ಅಮ್ಮನ ರೂಪದಲ್ಲಿರುವ ಅಕ್ಕನಿಗೂ ಡೆಡಿಕೇಟ್ ಮಾಡಿದ್ದಾರೆ. 
 

ಅವಾರ್ಡ್ ಕೈಯಲ್ಲಿ ಹಿಡಿದು ಭಾವುಕರಾದ ಚಂದನ, ನನಗೆ ಈ ರೀತಿ ಅವಾರ್ಡ್ ಬರಬೇಕು ಎಂದು ನನಗಿಂತ ಹೆಚ್ಚು ಆಸೆ ಪಟ್ಟಿದ್ದು, ನನ್ನ ಅಮ್ಮ. ಎಲ್ಲಾರಿಗೂ ಬರುತ್ತೆ ಪ್ರಶಸ್ತಿ ನಿಂಗೆ ಯಾಕೆ ಬರ್ತಿಲ್ಲ ಅಂತಾನೂ ಕೇಳ್ತಿದ್ರು, ಈ ಸಲನಾದ್ರೂ ಅವಾರ್ಡ್ ಬರುತ್ತಲ್ಲ ಅಂತ ಅಮ್ಮ, ಅಕ್ಕ ಇಬ್ಬರೂ ಕೇಳಿದ್ರು, ನನ್ನ ಜೀವನದಲ್ಲಿ ನಂಗೆ ಇಬ್ಬರು ಅಮ್ಮಂದಿರುವ ಒಂದು ಅಮ್ಮ, ಮತ್ತೊಂದು ಅಕ್ಕ, ಅವರಿಬ್ಬರಿಗೆ ಈ ಪ್ರಶಸ್ತಿ ಡೆಡಿಕೇಟ್ ಮಾಡೋದಾಗಿ ಹೇಳಿದ್ದಾರೆ. 
 

ಪ್ರಶಸ್ತಿ ಗೆದ್ದ ಜಯಂತ್ ನ ಮುದ್ದಿನ ಚಿನ್ನುಮರಿಗೆ ಅಭಿಮಾನಿಗಳು ಕೂಡ ಶುಭ ಕೋರಿದ್ದು, ಒಳ್ಳೆಯ ಸಮಯ ಬರೋದಕ್ಕೆ ಸ್ವಲ್ಪ ಸಮಯ ಬೇಕಾಗುತ್ತೆ, ಆ ಸಮಯ ಈಗ ಬಂದಿದೆ, ಈವಾಗ ನಿಮಗೂ ನಿಮ್ಮ ಅಮ್ಮನಿಗೂ ಶುಭಾಶಯಗಳು ಎಂದು ಹಾರೈಸಿದ್ದಾರೆ. 
 

Latest Videos

click me!