Published : Oct 18, 2021, 11:11 PM ISTUpdated : Oct 18, 2021, 11:42 PM IST
ಬೆಂಗಳೂರು(ಅ. 18) ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021(Anubandha Awards) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರು ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸಿದರು. ಹಾಗಾದರೆ ಯಾರಿಗೆಲ್ಲ ಗೌರವ ಸಿಕ್ಕಿತು?
ಜನ ಮೆಚ್ಚಿದ ಹೊಸ ಪರಿಚಯ - ನಾನ್ ಫಿಕ್ಷನ್; ಎದೆ ತುಂಬಿ ಹಾಡುವೆನು ಶೋ ನಲ್ಲಿ ರವಿಚಂದ್ರನ್ ಅಭಿನಯತದ ಶ್ರೀರಾಮಚಂದ್ರ ಸಿನಿಮಾದ ಗೀತೆ ಮೂಲಕ ಅಪಾರ ಮೆಚ್ಚುಗೆ ಗಳಿಸಿಕೊಂಡಿದ್ದ ಸಂದೇಶ್ ನೀರ್ ಮಾರ್ಗ ಪುರಸ್ಕಾರ ತಮ್ಮದಾಗಿಸಿಕೊಂಡರು.
222
ಜನ ಮೆಚ್ಚಿದ ಹೊಸ ಪರಿಚಯ - ಧಾರಾವಾಹಿ; ಕನ್ಯಾಕುಮಾರಿ ಧಾರಾವಾಹಿಯ ಚರಣ್ ಜನ ಮೆಚ್ಚಿದ ಹೊಸ ಪರಿಚಯ ಧಾರಾವಾಹಿ ಪುರಸ್ಕಾರ ತಮ್ಮದಾಗಿಸಿಕೊಂಡರು.
322
ಮನೆ ಮೆಚ್ಚಿದ ಸಹೋದರಿ; ಗಿಣಿರಾಮ ಧಾರಾವಾಹಿಯ ಸೀಮಾ ಮನೆ ಮೆಚ್ಚಿದ ಸಹೋದರಿಯಾದರು. ಗಿಣಿರಾಮ ಧಾರಾವಾಹಿ ಉತ್ತರ ಕರ್ನಾಟಕ ಭಾಗದಲ್ಲಿ ಸಿಕ್ಕಾಪಟ್ಟೆ ಫೇಮಸ್.
422
ಉತ್ತಮ ಸಂಕಲನ; ನನ್ನರಸಿ ರಾಧೆ ಧಾರಾವಾಹಿಯ ರಾಜು ಆರ್ಯನ್ ಉತ್ತಮ ಸಂಕಲನ ತಮ್ಮದಾಗಿರಿಸಿಕೊಂಡರು. ಅತ್ಯುತ್ತಮ ರೇಟಿಂಗ್ ಹೊಂದಿರುವ ಸೀರಿಯಲ್ ಇದು.
522
ಮನೆ ಮೆಚ್ಚಿದ ಸೊಸೆ; ಮಂಗಳಗೌರಿ ಮದುವೆ ಧಾರಾವಾಹಿಯ ನಾಯಕಿ ಮಂಗಳಾ ಈ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೋಶಿಯಲ್ ಮೀಡಿಯಾದಲ್ಲಿಯೂ ಪ್ರತಿಕ್ರಿಯೆಗಳು ಬಂದವು.
622
Winners List 2021 colors kannada Kannada Anubandha Awards
ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021(Anubandha Awards) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರು ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸಿದರು. ಹಾಗಾದರೆ ಯಾರಿಗೆಲ್ಲ ಗೌರವ ಸಿಕ್ಕಿತು?
722
ಮನೆ ಮೆಚ್ಚಿದ ದಂಪತಿ; ನನ್ನರಸಿ ರಾಧೆ ಧಾರಾವಾಹಿಯ ಇಂಚರಾ ಮತ್ತು ಅಗಸ್ತ್ಯ ಮನೆ ಮೆಚ್ಚಿದ ದಂಪತಿಯಾದರು. ಎರಡು ಜೋಡಿಗಳು ಪ್ರಶಸ್ತಿಗೆ ಪಾತ್ರವಾದರು.
822
Winners List 2021 colors kannada Kannada Anubandha Awards
ಮನೆ ಮೆಚ್ಚಿದ ದಂಪತಿ; ಮಿಥುನ ರಾಶಿ ಧಾರಾವಾಹಿಯ ಮಿಥುನ್ ಮತ್ತು ರಾಶಿ ಮನೆ ಮೆಚ್ಚಿದ ದಂಪತಿಯಾದರು. ಬಾಂಧವ್ಯಗಳನ್ನು ಬೆಸೆಯುವ ಧಾರಾವಾಹಿ ಇದು.
922
ಮನೆ ಮೆಚ್ಚಿದ ಮಗ; ಗಿಣಿರಾಮ ಧಾರಾವಾಹೊಯ ಬಯಲುಸೀಮೆ ಹುಡುಗ ಶಿವರಾಮ್ ಈ ಪ್ರಶಸ್ತಿಗೆ ಪಾತ್ರವಾದರು. ಏಯ್ ಮಾಸ್ತರ್ ಮಗಳ ಡೈಲ್ಆಗ್ ನಲ್ಲಿಯೇ ಮನಗೆದ್ದವರು.
1022
ಜನ ಮೆಚ್ಚಿದ ಜೋಡಿ; ಕನ್ನಡತಿ ಧಾರಾವಾಹಿಯ ಹರ್ಷ ಮತ್ತು ಕನ್ನಡತಿ ಭುವಿ ಈ ಪುರಸ್ಕಾರಕ್ಕೆ ಪಾತ್ರವಾದರು. ಈ ಸೀರಿಯಲ್ ಎಲ್ಲ ವರ್ಗದವರ ಅಭಿಮಾನಕ್ಕೆ ಪಾತ್ರವಾಗಿದೆ.
1122
ಜನ ಮೆಚ್ಚಿದ ಯೂತ್ ಐಕಾನ್: ಬಿಗ್ ಬಾಸ್ ಕನ್ನಡದ ರನ್ನರ್ ಅಪ್, ಬೈಕರ್ ಅರವಿಂದ್ ಕೆಪಿ ಈ ಪುರಸ್ಕಾರ ಪಡೆದುಕೊಂಡರು. ದಿವ್ಯಾ ಉರುಡಗ ಸಹ ಹಾಜರಿದ್ದರು.
1222
ಮನೆ ಮೆಚ್ಚಿದ ಸಹೋದರ; ನಮ್ಮನೆ ಯುವರಾಣಿ ಕಲಾವಿದ ಸಾಕೇತ್ ಮನೆ ಮೆಚ್ಚಿದ ಸಹೋದರರಾದರು. ಯುವರಾಣಿ ಮೀರಾಗೆ ಅಭಿಮಾನಿ ಬಳಗವೇ ಇದೆ.
1322
Winners List 2021 colors kannada Kannada Anubandha Awards
ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021(Anubandha Awards) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರು ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸಿದರು. ಹಾಗಾದರೆ ಯಾರಿಗೆಲ್ಲ ಗೌರವ ಸಿಕ್ಕಿತು?
1422
ಜನ ಮೆಚ್ಚಿದ ಸ್ಟೈಲ್ ಐಕಾನ್; ಲಕ್ಷಣ ಧಾರಾವಾಹಿಯ ಶ್ವೇತಾ ಅವರಿಗೆ ಈ ಪುರಸ್ಕಾರ ಒಲಿದು ಬಂತು. ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
1522
ಜನ ಮೆಚ್ಚಿದ ಸ್ಟೈಲ್ ಐಕಾನ್ ಗೆ ಲಕ್ಷಣ ಧಾರಾವಾಹಿಯ ಶ್ವೇತಾ ಪಾತ್ರವಾದರು. ಈ ಧಾರಾವಾಹಿ ಸಹ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾಗಿದೆ.
1622
ಹೆಮ್ಮೆಯ ಸಂಬಂಧ; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ ತಾರಾ ಅನುರಾಧಾ ಅವರಿಗೆ ಹೆಮ್ಮೆಯ ಸಂಬಂಧ ಪುಸರಸ್ಕಾರ ನೀಡಿ ಗೌರವಿಸಲಾಯಿತು.
1722
ಮನೆ ಮೆಚ್ಚಿದ ಅಳಿಯ: ಮಂಗಳಗೌರಿ ಮದುವೆಯ ರಾಜೀವ್ ಸಹ ಮನೆ ಮೆಚ್ಚಿದ ಅಳಿಯನಾದರು. ಮಹಿಯರಿಂದ ಈ ಸೀರಿಯಲ್ ಬಹಳಷ್ಟು ಮೆಚ್ಚುಗೆ ಪಡೆದುಕೊಂಡಿದೆ.
1822
ಜನ ಮೆಚ್ಚಿದ Entertainer; ಈ ಪುರಸ್ಕಾರಕ್ಕೆ ಮುರುಗ (ರಾಜ ರಾಣಿ) ಪಾತ್ರವಾದರು. ನೃತ್ಯದ ಮೂಲಕವೇ ಹೆಸರು ಮಾಡಿದ ಕಲಾವಿದ.
1922
ಮನೆ ಮೆಚ್ಚಿದ ಮಗಳು; ನಮ್ಮನೆ ಯುವರಾಣಿ ಧಾರಾವಾಹಿ ನಾಯಕಿ ಮೀರಾ ಅಂದರೆ ಅಂಕಿತಾ ಈ ಪ್ರಶಸ್ತಿ ತಮ್ಮದಾಗಿರಿಸಿಕೊಂಡರು. ನಟನೆ ಜತೆಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಣೆಯಲ್ಲಿಯೂ ಇವರು ಛಾಪು ಮೂಡಿಸಿದ್ದಾರೆ.
2022
ಜನ ಮೆಚ್ಚಿದ ನಾಯಕ; ಕನ್ನಡತಿ ಧಾರಾವಾಹಿಯ ಹರ್ಷ ಜನ ಮೆಚ್ಚಿದ ನಾಯಕ ಪುರಸ್ಕಾರಕ್ಕೆ ಪಾತ್ರವಾದರು. ಕನ್ನಡತಿ ಧಾರಾವಾಹಿ ಮನರಂಜನೆ ಜತೆ ಮಾಹಿತಿ ನೀಡುತ್ತಿದೆ.
2122
ಜನ ಮೆಚ್ಚಿದ ನಾಯಕಿ; ಕನ್ನಡತಿ ಧಾರಾವಾಹಿಯ ರಂಜನಿ ರಾಘವನ್ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಜನ ಮೆಚ್ಚಿದ ನಾಯಕಿಯಾಗಿ ಹೊರಹೊಮ್ಮಿದರು.
2222
ಜನ ಮೆಚ್ಚಿದ ಸಂಸಾರ; ನನ್ನರಸಿ ರಾಧೆ ಧಾರಾವಾಹಿ ಜನ ಮೆಚ್ಚಿದ ಸಂಸಾರ ಪುಸ್ಕಾರ ತನ್ನದಾಗಿಸಿಕೊಂಡಿತು. ಎಲ್ಲ ವರ್ಗದ ಅಭಿಮಾನಿಗಳನ್ನು ಇದು ಹೊಂದಿದೆ.