ಕಿರುತೆರೆ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಮಿಂಚುತ್ತಿರುವ ಸ್ಟಾರ್ ನಟ, ನಟಿಯರಿವರು!

First Published Oct 10, 2021, 12:47 PM IST

ಕಿರುತೆರೆ ಮೂಲಕ ವೀಕ್ಷಕರ ಮನಸ್ಸಿಗೆ ಸುಲಭವಾಗಿ ಹತ್ತಿರವಾಗಬಹುದು. ಅದರಲ್ಲೂ ರಿಯಾಲಿಟಿ ಶೋಗಳಲ್ಲಿ ಸಿನಿಮಾ ತಾರೆಯರು ಕಾಣಿಸಿಕೊಂಡು ಅವರ ಬಗ್ಗೆ ಇದ್ದ ಇಮೇಜ್‌ನ ಬದಲಾಯಿಸಿಕೊಂಡಿದ್ದಾರೆ. ನಮ್ಮ ಮನೆಯವರೇ ಇವರು ಎನ್ನುವ ಭಾವನೆ ನೀಡುತ್ತಿದ್ದಾರೆ. ಬೆಳ್ಳಿ ತೆರೆಯಿಂದ ಕಿರುತೆರೆಗೆ ತೀರ್ಪುಗಾರರಾಗಿ ಬಂದಿರುವ ಸ್ಟಾರ್‌ಗಳಿವರು.... 
 

ರಕ್ಷಿತಾ ಪ್ರೇಮ್: ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್ ರಕ್ಷಿತಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿಯಾಗಿದ್ದಾರೆ. ಅನೇಕ ಮಹಾಸಂಗಮಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ವಿಜಯ್ ರಾಘವೇಂದ್ರ: ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಮತ್ತು ಡ್ರಾಮಾ ಜ್ಯೂನಿಯರ್ಸ್‌ ಶೋ ತೀರ್ಪು ಮಾಡುತ್ತಾರೆ. 
 

ಹರಿಪ್ರಿಯಾ: ಮೊದಲ ಬಾರಿ ನಟಿ ಹರಿಪ್ರಿಯಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್‌ ಡ್ಯಾನ್ಸ್‌ ರಿಯಾಲಿಟಿ ಶೋ ಮೂಲಕ. ಕೆಲವೊಂದು ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ, ಗೆಸ್ಟ್‌ ಆಗಿ ಮಿಂಚಿದ್ದಾರೆ. 

ಪ್ರಜ್ವಲ್ ದೇವರಾಜ್: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ ಕೂಡ ಇದೇ ಮೊದಲ ಬಾರಿ ತೀರ್ಪುಗಾರರಾಗಿ ಕಾಣಿಸಿಕೊಂಡಿರುವುದು. ನಟಿ ಹರಿಪ್ರಿಯಾ ಜೊತೆ ಡ್ಯಾನ್ಸ್ ಡ್ಯಾನ್ಸ್‌ ಶೋ ಜಡ್ಜ್ ಮಾಡುತ್ತಿದ್ದಾರೆ. 

ತಾರಾ ಅನುರಾಧ: ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ ಅನುರಾಧ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಜ ರಾಣಿ ರಿಯಾಲಿಟಿ ಶೋ ತೀರ್ಪುಗಾರ್ತಿ. ತುಂಬಾನೇ ಡಿಫರೆಂಟ್‌ ಲುಕ್‌ಗಳಲ್ಲಿ ತಾರಾ ಅವರು ಕಾಣಿಸಿಕೊಂಡಿದ್ದಾರೆ. 

ರಚಿತಾ ರಾಮ್: ವೃತ್ತಿ ಜೀವನ ಆರಂಭದಲ್ಲಿಯೇ ರಚಿತಾ ರಾಮ್ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರ್ತಿ ಆಗಿದ್ದರು. ಆನಂತರ ಮಜಾಭಾರತ, ಕಿಕ್ ಸೇರಿದಂತೆ ಅನೇಕ ಶೋಗಳಲ್ಲಿ ಜಡ್ಜ್‌ ಆಗಿದ್ದಾರೆ.
 

ಜಗ್ಗೇಶ್: ಕಾಮಿಡಿ ಕಿಂಗ್, ನವರಸ ನಾಯಕ ಜಗ್ಗೇಶ್ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದರು. ಜಗ್ಗೇಶ್ ಅವರು ರಿಯಾಲಿಟಿ ಶೋಗಳಲ್ಲಿ ಪಾಸಿಟಿವಿಟಿ ತುಂಬುತ್ತಾರೆ ಎಂದು ಅನೇಕರು ಹೇಳಿದ್ದಾರೆ. 

ಸೃಜನ್ ಲೋಕೇಶ್: ನಟ ಸೃಜನ್ ಲೋಕೇಶ್‌ ಕಿರುತೆರೆ ಲೋಕದ ಟಾಕಿಂಗ್ ಟಾಮ್ ಎಂದೇ ಹೆಸರು ಪಡೆದುಕೊಂಡಿದ್ದಾರೆ. ಪುಟ್ಟ ಮಕ್ಕಳ ಶೋನಿಂದ ಮಜಾ ಟಾಕೀಸ್‌ವರೆಗೂ ನಡೆಸಿಕೊಂಡು ಬಂದು ಸದ್ಯ ತಾರಾ ಅನುರಾಧ ಅವರ ಜೊತೆ ರಾಜಾ ರಾಣಿಯಲ್ಲಿದ್ದಾರೆ. 
 

click me!