ಬಾಯ್‌ಫ್ರೆಂಡ್ ಏನ್ ಗಿಫ್ಟ್ ಕೊಟ್ರೆ ಖುಷಿಯಾಗುತ್ತೆ ? ಸಾರಾ ಹೇಳಿದ್ದಿಷ್ಟು

First Published | Oct 16, 2021, 12:55 PM IST
  • ಬಾಯ್‌ಫ್ರೆಂಡ್ ಬಗ್ಗೆ ಮಾತನಾಡಿದ ಕನ್ನಡತಿ ನಟಿ
  • ಯಾವ ಗಿಫ್ಟ್ ಕೊಟ್ರೆ ಹುಡುಗೀರು ಖುಷಿಯಾಗ್ತಾರೆ ?
  • ಸಾರಾ ಅಣ್ಣಯ್ಯ ಕೊಟ್ರು ಸೂಪರ್ ಟಿಪ್ಸ್

ಕನ್ನಡತಿ ಧಾರವಾಹಿಯಲ್ಲಿ ವರುಧಿನಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ ಈ ಬಾರಿ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಳೆದ ವರ್ಷ ನಟಿ ಅವಾರ್ಡ್ಸ್ ಫಂಕ್ಷನ್‌ನಲ್ಲಿ ಭಾಗವಹಿಸಿರಲಿಲ್ಲ.

ಈ ಬಾರಿ ಕನ್ನಡತಿ(Kannadati) ತಂಡದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರಾ ಅಣ್ಣಯ್ಯ(Sara Annaiah) ಅವರಲ್ಲಿ ನಿರೂಪಕರು ಬಾಯ್‌ಫ್ರೆಂಡ್ ಏನ್ ಗಿಫ್ಟ್(Gift) ಕೊಟ್ರೆ ಹುಡುಗೀರಿಗೆ ಇಷ್ಟ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ

Tap to resize

ಇದಕ್ಕೆ ಉತ್ತರಿಸಿದ ಸಾರಾ ನನ್ನಂತ ಇಂಡಿಪೆಂಡೆಂಟ್ ಹುಡುಗಿ ಆಗಿದ್ರೆ ಟೈಂ ಮತ್ತು ಎಟೆನ್ಶನ್ ಕೊಟ್ರೆ ಸಾಕು ಎಂದಿದ್ದಾರೆ. ಇದಕ್ಕೆ ನಿರೂಪಕ ಟೈಂ ಎಂದರೆ ಎಷ್ಟು ಹೊತ್ತು ? 24 ಗಂಟೆ ಸಮಯ ಕೊಡ್ಬೇಕಾ ಎಂದು ಕೇಳಿದ್ದಾರೆ.

24 ಗಂಟೆ ಸಮಯ ಕೊಟ್ಟರೆ ಅಸಹ್ಯ ಆಗೋಗುತ್ತೆ ಎಂದಿದ್ದಾರೆ ವರುಧಿನಿ. ನಂತರ ದಿನದಲ್ಲಿ 5 ಗಂಟೆ ಸಮಯ ಕೊಟ್ಟರೆ ಸಾಕು ಎಂದಿದ್ದಾರೆ. ಇದಕ್ಕೆ ಮತ್ತೊಂದು ಮರು ಪ್ರಶ್ನೆ ಹಾಕಿದ್ದಾರೆ ನಿರೂಪಕ

ದಿನಕ್ಕೆ 5 ಗಂಟೆ ಸಮಯ ಕೊಟ್ಟರೆ ಸಾಕು. ಬೆಳಗ್ಗೆ ಮತ್ತು ರಾತ್ರಿ ಒಂದು ಕಾಲ್. ಭೇಟಿಯಾದ್ರೆ 5 ಗಂಟೆ ಮಾತು, ಇಷ್ಟಿದ್ದರೆ ಸಾಕು ಎಂದಿದ್ದಾರೆ ಸಾರಾ ಅಣ್ಣಯ್ಯ. ಇದು ಸ್ವಲ್ಪ ಸಿಂಪಲ್ & ಈಝೀ ಗಿಫ್ಟ್ ಅನಿಸುತ್ತೆ ಅಲ್ವಾ

ಸೀರಿಯಲ್‌ನಲ್ಲಿ ಇಂಡಿಪೆಂಡೆಂಟ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳೋ ಸಾರಾ ಅಣ್ಣಯ್ಯ ನಿಜ ಜೀವನದಲ್ಲಿಯೂ ಸ್ವಾವಲಂಬಿ. ಮಾಡೆಲ್ ಆಗಿ ಮಿಂಚಿದ ಸಾರಾ ಈ ಹಿಂದೆ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರು.

ಇದೇ ಸಂದರ್ಭ ಕನ್ನಡತಿಯಲ್ಲಿ ಅವಕಾಶ ಸಿಕ್ಕಿ ಕನ್ನಡ ಧಾರವಾಹಿಗೆ ಶಿಫ್ಟ್ ಆಗಿದ್ದಾರೆ ನಟಿ. ಇವರು ಮೂಲತಃ ಕೊಡಗಿನವರಾಗಿದ್ದು ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ

Latest Videos

click me!