ತುಳಸಿ ಮಗು ಹೆತ್ತು, ಪೂರ್ಣಿಗೆ ಕೊಟ್ಟು ಸಾಯ್ತಾಳಾ? ಶ್ರೀರಸ್ತು ಶುಭಮಸ್ತು ಕೊನೆಯಾಗೋದು ಹೀಗೆ!

First Published | Oct 9, 2024, 5:38 PM IST

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತಾಯಿಯಾಗುವ ಹಂಬಲದಲ್ಲಿರೋ ಹೆಣ್ಣಿನ ಭಾವನೆಯ ಎರಡು ಮುಖಗಳನ್ನು ಅನಾವರಣ ಮಾಡಿದ್ದು, ಒಂದೆಡೆ ಮಗುವಿಗಾಗಿ ಹಂಬಲಿಸೋ ಪೂರ್ಣಿ ಇದ್ರೆ, ಇನ್ನೊಂದೆಡೆ ಗರ್ಭಿಣಿ ತುಳಸಿ… ಮುಂದೆ ಕಥೆ ಏನಾಗುತ್ತೆ? 
 

ಶ್ರೀರಸ್ತು ಶುಭಮಸ್ತು (Srirastu Subhamastu) ಧಾರಾವಾಹಿಯಲ್ಲಿ 50ರ ನಂತರ ಗರ್ಭಿಣಿಯಾದಾಗ ಮಹಿಳೆ ಏನೆಲ್ಲಾ ಸನ್ನಿವೇಶಗಳನ್ನ ಎದುರಿಸಬಹುದು ಅನ್ನುವಂತಹ ಕಥಾಹಂದರವನ್ನು ಇಟ್ಟುಕೊಂಡು ಕಥೆ ಸಾಗುತ್ತಿದೆ. ವೀಕ್ಷಕರು ತುಳಸಿಯನ್ನು ಗರ್ಭಿಣಿ ಮಾಡಿರೋದನ್ನು ವಿರೋಧಿಸುತ್ತಿದ್ದರೂ, ಕಥೆ ಮುಂದೆ ಯಾವ ರೀತಿ ಸಾಗಲಿದೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. 
 

ತಾಯಿಯಾಗುವ ಹಂಬಲದಲ್ಲಿರೋ ಮಹಿಳೆಯ ಮನಸ್ಸಿನ ತುಮುಲಗಳನ್ನ ಈ ಧಾರಾವಾಹಿಯಲ್ಲಿ ಸೂಕ್ಷ್ಮವಾಗಿ ಹೇಳ್ತಿದ್ದಾರೆ ಅಂದ್ರೆ ತಪ್ಪಲ್ಲ. ಯಾಕಂದ್ರೆ ಒಂದು ಕಡೆ ಎರಡು ಸಲ ಗರ್ಭಪಾತವಾಗಿ ಮಕ್ಕಳಾಗದೆ ನೋವಿನಲ್ಲಿ ಒದ್ದಾಡುತ್ತಿರೋ ಪೂರ್ಣಿ ಇದ್ರೆ, ಇನ್ನೊಂದೆಡೆ ವಯಸ್ಸಲ್ಲದ ವಯಸಲ್ಲಿ ಗರ್ಭಿಣಿಯಾಗಿ ಮಗುವನ್ನು ತೆಗಿಸಬೇಕೋ, ಬೇಡ್ವೋ ಎನ್ನುವ ಸಂಕಟದಲ್ಲಿ ತುಳಸಿ ನರಳಾಡ್ತಾ ಇದ್ದಾರೆ. 
 

Tap to resize

ಮಗುವಿಗಾಗಿ ಹಂಬಲಿಸುತ್ತಿರೋ ಪೂರ್ಣಿಗೆ ಈಗಾಗಲೇ ದೀಪಿಕಾ ತನ್ನ ಚುಚ್ಚು ಮಾತುಗಳಿಂದ ನೋವು ನೀಡಿದ್ದು, ಪೂರ್ಣಿಗೆ ಮತ್ತೆ ತಾಯಿಯಾಗುವ ಆಸೆ ಕೊರೆಯುತ್ತಾ ಇದೆ. ಇದನ್ನ ಗಂಡನ ಬಳಿ ಪೂರ್ಣಿ ಹೇಳಿರೋದನ್ನ ತುಳಸಿ ಕೇಳಿಸಿಕೊಂಡಿರ್ತಾಳೆ. ನಾನು ಅನುಭವಿಸ್ತಿರೋ ಭಾವನೆಯನ್ನ ನನ್ನ ಮಗುವಿಗೂ ಕೊಡ್ಬೇಕು, ತಂದೆ ತಾಯಿಯ ಪ್ರೀತಿಯಲ್ಲಿ ಮಗು ಮುಳ್ಗೋಗಿರೋದನ್ನ ನೋಡಿ ನನ್ನನ್ನ ನಾನು ಮರೆತು ಹೋಗ್ಬೇಕು. ಇದಿಷ್ಟು ಆದ್ರೆ ನನ್ನ ಜೀವನ ಸಾರ್ಥಕ ಆಗುತ್ತೆ, ಇದು ಬಿಟ್ರೆ ನನ್ನ ಜೀವನದಲ್ಲಿ ಬೇರೆ ಯಾವ ಆಸೆಯೂ ಇಲ್ಲ ಎನ್ನುತ್ತಾಳೆ ಪೂರ್ಣಿ. 
 

ಪೂರ್ಣಿಯ ಮಾತುಗಳನ್ನು ನೆನಪಿಸಿಕೊಂಡು ಕಣ್ಣೀರಿಡೋ ತುಳಸಿ, ಪೂರ್ಣಿ ಮಗುವಿಗಾಗಿ ಒದ್ದಾಡ್ತಾ ಇದ್ದಾಳೆ, ಆದ್ರೆ ಅವಳು ಬೇಡ್ಕೊಂಡಿರೋದನ್ನ ದೇವರು ಅವಳಿಗೆ ಕರುಣಿಸ್ತಾ ಇಲ್ಲ, ಆದ್ರೆ ನಂಗೆ ಕರುಣಿಸಿರೋದನ್ನ ಉಳಿಸಿಕೊಳ್ಳೋಕೆ ನಮ್ಮಿಂದ ಆಗ್ತಾ ಇಲ್ಲ ಏನು ಮಾಡ್ಲೀ ಅಂತ ಯೋಚನೆ ಮಾಡ್ತಾಳೆ ತುಳಸಿ. 
 

ಅಷ್ಟೇ ಅಲ್ಲ ಸೃಷ್ಟಿ ದೇವರ ನಿಯಮ ಅಂತಾರೆ. ನಾನು ಆ ದೇವರ ನಿಯಮದ ವಿರುದ್ಧ ಹೋದ್ರೆ ದೇವರು ನನ್ನನ್ನ ಕ್ಷಮಿಸ್ತಾನ? ಅಂತ ಯೋಚನೆ ಮಾಡ್ತಾಳೆ ತುಳಸಿ. 50ರ ನಂತರ ಗರ್ಭ ಧರಿಸಿರೋದ್ರಿಂದ ಅದನ್ನ ಉಳಿಸಿಕೊಂಡ್ರೆ, ತಾಯಿಗೆ ಅಥವಾ ಮಗುವಿಗೆ ಅಥವಾ ಇಬ್ಬರಿಗೂ ಅಪಾಯ ಉಂಟಾಗೋ ಸಾಧ್ಯತೆ ಅನ್ನೋದನ್ನ ವೈದ್ಯರು ಹೇಳಿರ್ತಾರೆ. ಮಗುವನ್ನ ತೆಗೆಸೋದೆ ಒಳ್ಳೆದು ಅಂತಾನೂ ವೈದ್ಯರು ಸಲಹೆ ಕೊಟ್ಟಿರ್ತಾರೆ. 
 

ಆದರೆ ಈಗ ಪೂರ್ಣಿಯ ಸ್ಥಿತಿ ನೋಡಿ, ಒಂದು ಕಡೆ ಬೇಡ್ಕೊಂಡ್ರೂ ಸಿಗದ ವರ, ಇನ್ನೊಂದು ಕಡೆ ಬೇಡದೇ ಸಿಕ್ಕಿದೆ. ಹಾಗಾಗಿ ತುಳಸಿ ತನ್ನ ಜೀವಕ್ಕೆ ಅಪಾಯ ಆದ್ರೂ ಪರ್ವಾಗಿಲ್ಲ ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಪ್ರಯತ್ನ ಮಾಡೋ ಚಾನ್ಸಸ್ ಕಾಣಿಸ್ತಿದೆ. ಅಂದ್ರೆ ಕಥೆ ಮುಂದೆ ಈ ರೀತಿಯಾಗಿ ಮುಂದುವರೆಯಬಹುದು ಅಂತಾನೂ ಅನಿಸ್ತಿದೆ. 
 

ಕಷ್ಟ ಆದ್ರೂ ಪರ್ವಾಗಿಲ್ಲ, ತನಗಾಗಿ ಅಲ್ಲಾಂದ್ರೂ ಪೂರ್ಣಿಗಾಗಿ ಮಗುವನ್ನು ಉಳಿಸಿಕೊಳ್ಳುವ ತುಳಸಿ, ಕೊನೆಗೆ ಮಗುವನ್ನು ಹೆತ್ತು ಅದನ್ನ ಪೂರ್ಣಿ ಕೈಗೆ ಕೊಡಬಹುದೇನೋ? ಹಾಗೆಯೇ ತುಳಸಿ ಜೀವವೂ ಹೋಗಬಹುದೇನೋ? ಅಥವಾ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು, ತುಳಸಿ ತನ್ನ ಮಗುವನ್ನು ಪೂರ್ಣಿಯ ಮಡಿಲಲ್ಲಿ ಹಾಕೋ ಮೂಲಕ ಸೀರಿಯಲ್ ಮುಗಿಸೋ ಸಾಧ್ಯತೆ ಇದೆ ಏನೋ? ಅನಿಸುತ್ತೆ. ಏನಾಗಬಹುದು ಅನ್ನೋದನ್ನ ಮುಂದಿನ ಎಪಿಸೋಡ್ ನಲ್ಲಿ ನೋಡೋದಕ್ಕೆ ಕಾಯಬೇಕು. 
 

Latest Videos

click me!