ಹೆಚ್ಚಾಗ್ತಿದೆ ಲಾಯರ್ ಜಗದೀಶ್ ಜನಪ್ರಿಯತೆ… ಎಲಿಮಿನೇಟ್ ಮಾಡಿ ಅಂದೋರೆಲ್ಲ ಜಗ್ಗು ಇದ್ರೇನೆ ಬಿಗ್’ಬಾಸ್ ಗೆ ಕಳೆ ಅಂತಿದ್ದಾರೆ!

Published : Oct 09, 2024, 04:53 PM ISTUpdated : Oct 09, 2024, 05:04 PM IST

ಬಿಗ್ ಬಾಸ್ ಸೀಸನ್ 11 ಆರಂಭವಾದಾಗ ಲಾಯರ್ ಜಗದೀಶ್ ನಡವಳಿಕೆ ನೋಡಿ ಇವರನ್ನ ಈ ವಾರವೇ ಮನೆಯಿಂದ ಹೊರಗೆ ಕಳುಹಿಸಿ ಎಂದಿದ್ದ ಜನರು ಈಗ ಜಗ್ಗು ಇದ್ರೇನೆ ಬಿಗ್ ಬಾಸ್ ಗೆ ಕಳೆ ಅಂತಿದ್ದಾರೆ.   

PREV
17
ಹೆಚ್ಚಾಗ್ತಿದೆ ಲಾಯರ್ ಜಗದೀಶ್ ಜನಪ್ರಿಯತೆ… ಎಲಿಮಿನೇಟ್ ಮಾಡಿ ಅಂದೋರೆಲ್ಲ ಜಗ್ಗು ಇದ್ರೇನೆ ಬಿಗ್’ಬಾಸ್ ಗೆ ಕಳೆ ಅಂತಿದ್ದಾರೆ!

ಬಿಗ್ ಬಾಸ್ ಸೀಸನ್ 11 (Bigg Boss Season 11)ಆರಂಭವಾಗಿ ಆಗಲೇ ಒಂದು ವಾರ ಕಳೆದಿದ್ದು, ಮೊದಲನೇ ವಾರ ಜಗಳ, ಸಣ್ಣದೊಂದು ಲವ್ ಸ್ಟೋರಿ ಕೂಡ ಆರಂಭವಾಗಿದ್ದು, ಮೊದಲನೇ ಕ್ಯಾಪ್ಟನ್ ಆಗಿ ಹಂಸ ಆಯ್ಕೆಯಾಗಿದ್ದಾರೆ, ಅದೇ ರೀತಿ ಮೊದಲನೇ ವಾರದ ಎಲಿಮಿನೇಶನ್ ಕೂಡ ಆಗಿದ್ದು, ಯಮುನಾ ಸನ್ನಿಧಿ ಮನೆಯಿಂದ ಹೊರ ಬಂದಿದ್ದಾರೆ. ಮೊದಲನೇ ವಾರ ಹೆಚ್ಚು ಸದ್ದು ಮಾಡಿದೋರು ಲಾಯರ್ ಜಗದೀಶ್. 
 

27

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ದಿನವೇ ಮನೆಮಂದಿ ಜೊತೆ ಜಗಳಕ್ಕೆ ನಿಂತಿದ್ದ ಜಗದೀಶ್ (Jagadish), ನಂತರ ದಿನಗಳಲ್ಲಿ, ಬಿಗ್ ಬಾಸ್ ನ್ನೆ ಎಕ್ಸ್ ಪೋಸ್ ಮಾಡುವ, ಕಲರ್ಸ್ ಕನ್ನಡಕ್ಕೆ ಬೆದರಿಕೆ ಹಾಕುವ ಬಗ್ಗೆ ಮಾತನಾಡಿ ಭಾರಿ ಸುದ್ದಿಯಾಗಿದ್ದರು. ಕಿಚ್ಚನ ಪಂಚಾಯ್ತಿಯಲ್ಲೂ ಸಹ ಜಗದೀಶ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು ಆಯ್ತು. 
 

37

ಮೊದಲನೇ ವಾರದಲ್ಲಿ ಜಗದೀಶ್ ಜಗಳ, ಧನಿ ಎತ್ತರಿಸಿ ಮಾತನಾಡುತ್ತಾ, ಯಾವಾಗ್ಲೂ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದ ಜಗದೀಶ್ ಅವರನ್ನು ನೋಡಿ ಜನ ದಯವಿಟ್ಟು ಇವರನ್ನ ಬಿಗ್ ಬಾಸ್ ಮನೆಯಿಂದ ಹೊರಹಾಕಿ, ಇವರಿದ್ದರೆ ಬಿಗ್ ಬಾಸ್ ನೋಡೊದಕ್ಕೆ ಸಾಧ್ಯ ಆಗ್ತಿಲ್ಲ. ತುಂಬಾನೆ ಇರಿಟೇಟಿಂಗ್ ವ್ಯಕ್ತಿ ಎಂದೆಲ್ಲಾ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದರು ಜನ. 
 

47

ಜಗದೀಶ್ ವಿರುದ್ಧ ಲಾಯರ್ ನೋಟೀಸ್ ಕೂಡ ಹೊರಡಿಸಲಾಗಿತ್ತು, ಅವರನ್ನ ಲಾಯರ್ ಅಂತ ಕರಿಬಾರ್ದು ಅಂತಾನೂ ಹೇಳಲಾಗಿತ್ತು. ಇಂತವರನ್ನೆಲ್ಲಾ ಬಿಗ್ ಬಾಸ್ ಮನೆಯೊಳಗೆ ಸೇರಿಸಿಕೊಳ್ಳೊದಾದ್ರೂ ಯಾಕೆ, ಪಬ್ಲಿಸಿಟಿಗೋಸ್ಕರ ಇಂಥವರನ್ನ ಕರೆಸಿ, ಆಮೇಲೆ ತನಗೆ ತಾನೆ ಉಗಿಸಿಕೊಳ್ಳುತ್ತಿದೆ ಬಿಗ್ ಬಾಸ್ ಶೋ ಎಂದೆಲ್ಲಾ ಜನ ಹೇಳಿದ್ರು. 
 

57

ಆದ್ರೆ ದಿನಗಳು ಕಳೆಯುತ್ತಿದ್ದಂತೆ, ಲಾಯರ್ ಜಗದೀಶ್ ಜನಪ್ರಿಯತೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಬಿಗ್ ಬಾಸ್ ಶೋ ಬಿಡುಗಡೆ ಮಾಡುತ್ತಿರುವ ಪ್ರತಿಯೊಂದು ಪ್ರೊಮೋದಲ್ಲಿ ಹೆಚ್ಚಾಗಿ ಜಗದೀಶ್ ಅವರೇ ಹೈಲೈಟ್ ಆಗುತ್ತಿದ್ದು, ಸಿಕ್ಕಾಪಟ್ಟೆ ಎಂಟರ್ ಟೇನ್ ಮೆಂಟ್ ಕೂಡ ಕೊಡುತ್ತಿದ್ದಾರೆ, ಜಗಳಾನೂ ಮಾಡ್ತಾರೆ, ಗೇಮ್ ಕೂಡ ಆಡಿ ಎಲ್ಲಾ ಕಡೆ ಸದ್ದು ಮಾಡ್ತಿದ್ದಾರೆ ಜಗ್ಗು. 
 

67
bbk jagadish

ಜಗದೀಶ್ ಆಟ, ಮನರಂಜನೆ ನೋಡಿ ಜನರು ಈಗ ಜಗ್ಗಿ ಮಹಾನ್ ಕಲಾವಿದ, ಜಗದೀಶ್ ಕೊನೆವರೆಗೂ ಇರಬೇಕು, ಜಗದೀಶ್ ಇದ್ರೆನೆ ಬಿಗ್ ಬಾಸ್ ಗೊಂದು ಕಳೆ, ಇಲ್ಲಾಂದ್ರೆ ತುಂಬಾನೆ ಬೋರ್, ಜಗದೀಶ್ ಒಬ್ರೇನೆ ಮನರಂಜನೆ ನೀಡ್ತಿರೋದು, ಜಗದೀಶ್ ಮತ್ತು ಹಂಸ ಕೊನೆವರೆಗೂ ಇರಬೇಕು, ಜಗದೀಶ್ ಇದ್ರೇನೆ ಮಜಾ ಅಂತೆಲ್ಲಾ ಪ್ರೊಮೋ ನೋಡಿ ಕಾಮೆಂಟ್ ಮಾಡ್ತಿದ್ದಾರೆ. 
 

77

ಅಷ್ಟೇ ಅಲ್ಲ ಜಗ್ಗು ದಾದಾಗೆ ನಮ್ಮ ಬೆಂಬಲ, ಜಗ್ಗು ಆಟ ಬೆಂಕಿ, ನಾವು ಜಗ್ಗು ಅಭಿಮಾನಿಗಳು, ಜಗದೀಶ್ ಅಣ್ಣ ನೀವು ಏನ್ ಮಾಡಿದ್ರು ನಿಮ್ಮ ಬೆಂಬಲಕ್ಕೆ ನಾವಿದ್ದೀವಿ ಎನ್ನುತ್ತಿದ್ದಾರೆ ಜನ. ಒಟ್ಟಲ್ಲಿ ಜಗದೀಶ್ ಕಂಡ್ರೆ ಆಗದೆ ಇರೋ ಜನರು ಈಗ ಜಗದೀಶ್ ಇರ್ಬೇಕು ಅಂತಿದಾರೆ 
 

click me!

Recommended Stories