ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಕಲರ್ಸ್ ವಾಹಿನಿ ಕಾವೇರಿ ಕಣ್ಣಾಮುಚ್ಚಾಲೆ ಆಟಕ್ಕೆ ತೆರೆ ಬೀಳುತ್ತಾ? ಎಂದು ಪ್ರಶ್ನಿಸಿದ್ರೆ, ವೀಕ್ಷಕರು ನೋ ವೇ ಚಾನ್ಸೇ ಇಲ್ಲ, ಓಹ್ ಭ್ರಮೆ ಎನ್ನುತ್ತಿದ್ದಾರೆ, ಅಷ್ಟೇ ಅಲ್ಲ ಇದು ಕಾವೇರಿಯ ದೊಡ್ಡ ಕನಸಾಗಿರಬೇಕು, ಅಥವಾ ಕಾವೇರಿ ಕೊನೆಗೆ ಎಲ್ಲಾ ಆರೋಪಗಳನ್ನು ಕೀರ್ತಿ ಮೇಲೆ ಹೊರೆಸಿ ತಾನು ಬಚಾವಾಗುತ್ತಾಳೆ ಎಂದಿದ್ದಾರೆ. ಜೊತೆಗೆ ಕಾವೇರಿಯ ನಾಟಕ ಬಯಲಾಗೋ ಚಾನ್ಸೇ ಇಲ್ಲ, ಹಾಗೇ ಆದ್ರೆ ಸೀರಿಯಲ್ ಮುಗಿದಂತೆ ಎಂದಿದ್ದಾರೆ.