ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಟ್ವಿಸ್ಟ್… ಬದಲಾದ ಲಕ್ಷ್ಮೀ, ಈವಾಗಲಾದ್ರೂ ಕಾವೇರಿ ಆಟಕ್ಕೆ ಬೀಳುತ್ತಾ ಬ್ರೇಕ್!

First Published | Oct 29, 2024, 6:29 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು, ಅತ್ತೆ ಕಾವೇರಿಗೆ ಲಕ್ಷ್ಮೀ ಕ್ಲಾಸ್ ತೆಗೆದುಕೊಳ್ಳುತ್ತಿದ್ದು, ಕಾವೇರಿ ಆಟಕ್ಕೆ ಈಗಲಾದ್ರೂ  ಬ್ರೇಕ್ ಬೀಳುತ್ತಾ ಅನ್ನೋದನ್ನ ಕಾದು ನೋಡಬೇಕು. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಲಕ್ಷ್ಮೀಗೆ ಹುಚ್ಚಿ ಪಟ್ಟ ಕಟ್ಟಿ ಮನೆಯಿಂದ ಆಚೆ ಹಾಕಬೇಕು ಎಂದು ಪ್ಲ್ಯಾನ್ ಮಾಡಿ, ಮಾನಸಿಕ ಆರೋಗ್ಯ ಕೇಂದ್ರಕ್ಕೂ ಬಂದು ಸೇರಿಸಿರುವ ಕಾವೇರಿಗೆ ಈಗ ಲಕ್ಷ್ಮೀ ತಿರುಗೇಟು ನೀಡುತ್ತಿದ್ದಾಳೆ. ಲಕ್ಷ್ಮೀ ವರಸೆ ನೋಡಿ ಕಾವೇರಿ ಭಯ ಬಿದ್ದಿದಾಳೆ. 
 

ಅಷ್ಟಕ್ಕೂ ಧಾರಾವಾಹಿಯಲ್ಲಿ ಆಗ್ತಿರೋದು ಏನು ಅಂದ್ರೆ, ಲಕ್ಷ್ಮೀಯನ್ನು ಮಾನಸಿಕ ಕೇಂದ್ರಕ್ಕೆ ಕಾವೇರಿ, ಕೃಷ್ಣ ಮತ್ತು ವೈಷ್ಣವ್ ಬಿಡೋದಕ್ಕೆ ಬಂದಿದ್ದಾರೆ. ಅಲ್ಲಿ ಲಕ್ಷ್ಮೀಯನ್ನು ಬಿಟ್ಟು ಆಕೆಯನ್ನು ನಿಜವಾಗಿಯೂ ಹುಚ್ಚಿಯನ್ನಾಗಿ ಮಾಡುವ ಪ್ಲ್ಯಾನ್ ಕೂಡ ಮಾಡಿದ್ಲು ಕಾವೇರಿ. 
 

Tap to resize

ಈಗ ಜೂನಿಯರ್ ಡಾಕ್ಟರ್ ಗೆ ಹಣ ಕೊಟ್ಟು ಲಕ್ಷ್ಮೀಯನ್ನು ಆಸ್ಪತ್ರೆಗೆ ಸೇರಿಸುವಂತೆ ಮಾಡಿದ್ದಾರೆ. ಆದ್ರೆ ಹಿರಿಯ ವೈದ್ಯರು ಮಾತ್ರ ಅದಕ್ಕೆ ಒಪ್ಪುತ್ತಲೇ ಇಲ್ಲ. ಈಗಾಗಲೇ ಲಕ್ಷ್ಮೀ ಜೊತೆ ಮಾತನಾಡಿದ ವೈದ್ಯರಿಗೆ ಲಕ್ಷ್ಮೀಗೆ ಯಾವುದೇ ಸಮಸ್ಯೆ ಇಲ್ಲ ಅನ್ನೋದು ಗೊತ್ತಾಗಿದೆ. ಆದರೆ ಕಾವೇರಿ ಮಾತ್ರ ಅವಳು ತುಂಬಾನೆ ಕೋಪ ಮಾಡ್ತಾಳೆ, ಚಾಕು ಕೈ ತೆಗೋತಾಳೆ ಅಂತೆಲ್ಲಾ ಹೇಳಿ, ಅವಳನ್ನ ಆಸ್ಪತ್ರೆಗೆ ಸೇರಿಸಿ ಅಂತಾಳೆ. 
 

ಆದರೆ ವೈದ್ಯರು ಮಾತ್ರ, ಹಾಗೆ ಸುಮ್ ಸುಮ್ನೆ ಕೋಪ ಮಾಡಿದೋರನ್ನೆಲ್ಲಾ ಆಸ್ಪತ್ರೆಗೆ ಸೇರಿಸೋಕೆ ಹೋದ್ರೆ ಆಸ್ಪತ್ರೆ ಪೂರ್ತಿ ಜನ ಇರಬಹುದು ಎನ್ನುತ್ತಾರೆ. ಅಷ್ಟೇ ಅಲ್ಲದೇ ಯಾವ ವೈದ್ಯರ ಬಳಿಯೂ ಮಾತನಾಡದೆ ಲಕ್ಷ್ಮಿಗೆ ಹುಚ್ಚಿ ಅನ್ನೋ ಸರ್ಟಿಫಿಕೇಟ್ ನೀಡುತ್ತಿರುವ ಕಾವೇರಿ ಮೇಲೆ ವೈದ್ಯರು ಕಿಡಿಕಾರಿದ್ದಾರೆ. ಕಾವೇರಿ ವೈದ್ಯರಿಗೂ ಮೋಸ ಮಾಡೋದಕ್ಕೆ ಬಂದ್ಲು ಆದ್ರೆ ಅದು ಸಾಧ್ಯ ಆಗಲೇ ಇಲ್ಲ.. ಆವಾಗ್ಲೇ ಲಕ್ಷ್ಮೀ ಅಡ್ಡ ಬಂದು ಏನೇ ಹೇಳೋದಾದ್ರೂ ಇಲ್ಲೇ ಹೇಳಿ ಅಂತಾಳೆ 
 

ಇದನ್ನೆಲ್ಲಾ ನೋಡ್ತಿದ್ರೆ, ಇಲ್ಲೇ ಕಾವೇರಿಯ ಸತ್ಯಗಳೆಲ್ಲಾ ಬಯಲಾಗುತ್ತಾ? ಅಥವಾ ಲಕ್ಷ್ಮೀ ಬದಲು ಕಾವೇರಿಯನ್ನೇ ವೈದ್ಯರು ಆಸ್ಪತ್ರೆಗೆ ದಾಖಲು ಮಾಡ್ತಾರ ಅನಿಸ್ತಿದೆ. ಈವಾಗಲಾದ್ರೂ ಕಾವೇರಿಯ ನಾಟಕಕ್ಕೆ ತೆರೆ ಬೀಳುತ್ತಾ? ಈವಾಗ್ಲಾದ್ರೂ ಲಕ್ಷ್ಮೀಗೆ ಗೆಲುವಾಗುತ್ತ ಅಂತ ಕಾಯ್ತಿದ್ದಾರೆ ಜನ. 
 

ಪ್ರೊಮೋ ನೋಡಿ ಕಾಮೆಂಟ್ ಮಾಡಿರುವ ಜನ. ದಯವಿಟ್ಟು ಮಹಾಲಕ್ಷ್ಮೀ ನ ಆಸ್ಪತ್ರೆಗೆ ಸೇರಿಸಬೇಡಿ, ಬೇಕಿದ್ರೆ ಆ ಕಾವೇರೀನ ಅವಳ‌ ಗಂಡ ಮಗನನ್ನೂ ಸೇರಿಸಿ ಎಂದಿದ್ದಾರೆ. ಅಷ್ಟೇ ಅಲ್ಲ ಲಕ್ಷ್ಮೀ ಸ್ಟ್ರಾಂಗ್ ಆದ್ರೆನೇ ಚೆಂದ...ನೋಡೋಕೆ. ಕಾವೇರಿ ಸೊಕ್ಕು ಮುರಿಯೋಕೆ ನೀನು ಸ್ಟ್ರಾಂಗ್ ಆಗಲೇಬೇಕು. ಲಕ್ಷ್ಮೀ ಅಂತಾನೂ ಹೇಳಿದ್ದಾರೆ. ಜೊತೆಗೆ ಆದಷ್ಟು ಬೇಗ ಕೀರ್ತಿನ ಕರೆಯಿರಿ. ಲಕ್ಷ್ಮೀ ಬಾರಮ್ಮ ಸಾಕು, ಕೀರ್ತಿ ಬರಬೇಕು ಎಂದಿದ್ದಾರೆ. 
 

Latest Videos

click me!