ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಸಿದ್ದೇ ಗೌಡ್ರು ರಾಜಕೀಯ ಸಮಾವೇಶದಲ್ಲಿ ಎಲ್ಲರ ಸಮ್ಮುಖದಲ್ಲಿ ತನಗೆ ಈಗಾಗ್ಲೇ ಮದುವೆಯಾಗಿದೆ, ನಾನು ಮದುವೆಯಾಗಿದ್ದು, ಭಾವನಾರನ್ನು, ಅವಳಿಗೆ ತಾಳಿ ಕಟ್ಟಿದ್ದು ತಾನೆ ಎಂದು ಹೇಳಿ ಎಲ್ಲರಿಗೂ ದೊಡ್ಡ ಶಾಖ್ ಕೊಡ್ತಾರೆ.
ಇದೀಗ ಎರಡು ಮನೆಯಲ್ಲೂ ಕೋಲಾಹಲ ಎದ್ದಿದೆ. ಒಂದು ಕಡೆ ಸಿದ್ದು ಮನೆಯಲ್ಲಿ ತಂದೆ ಜವರೇ ಗೌಡರು ನನ್ನ ರಾಜಕೀಯ ಜೀವನ ಹಾಳಾಗಿ ಹೋಯ್ತು, ಜನರ ಮುಂದೆ ಮುಖ ಕೊಟ್ಟು ಓಡಾಡೊಕೆ ಸಾಧ್ಯ ಇಲ್ಲ ಅಂದ್ರೆ, ಅಕ್ಕ ಸಿಂಚನ ನಿಂಗೆ ಬೇರೆ ಯಾರೂ ಸಿಗ್ಲಿಲ್ವಾ? ಆ ಭಾವನಾ ಈ ಮನೆಗೆ ಬಂದ್ರೆ ಮನೆಯ ನೆಮ್ಮದಿ ಹಾಳಾಗಿ ಹೋಗುತ್ತೆ, ಅವಳು ನಿನ್ನ ಮನಸನ್ನು ಹೇಗಿ ಕೆಡ್ಸಿದ್ದಾರೆ ಎಂದೆಲ್ಲಾ ಹೇಳ್ತಾಳೆ.
ಇನ್ನೊಂದು ಕಡೆ ಭಾವನಾ ಮನೆಯಲ್ಲಿ ಸಂತೋಷ್ ಸಿದ್ಧುವನ್ನು ಮನೆಯೊಳಗೆ ಸೇರಿಸಿದ್ದಕ್ಕೆ, ಅವನ ಜೊತೆಗೆ ಭಾವನಾ ಸುತ್ತಾಡಿದ್ದಕ್ಕೆ ಮನೆಯವರೆಲ್ಲರಿಗೂ ಬೈದು, ಎಲ್ಲಾ ಆಗಿದ್ದು ಭಾವನಾಳಿಂದ ಎಂದು ಕೊಂಕು ನುಡಿಯುತ್ತಾನೆ. ಲಕ್ಷ್ಮೀ ಕೂಡ ತಾನು ಇಷ್ಟೊಂದು ನಂಬಿಕೆ ಇಟ್ಟ ಸಿದ್ಧುವೇ ನನಗೆ ಮೋಸ ಮಾಡಿದ್ನಲ್ಲ ಎಂದು ಕೊರಗುತ್ತಾಳೆ.
ಇನ್ನೊಂದು ಕಡೆ ಸಿದ್ದೇ ಗೌಡರನ್ನು ಮದುವೆಯಾಗಲು ತುದಿಕಾಲಲ್ಲಿ ನಿಂತಿದ್ದ ಪೂರ್ವಿ ಮನಸು ಮುರಿದು ಹೋಗಿದ್ದು, ನನಗೆ ಯಾಕೆ ಮೋಸ ಮಾಡಿದ್ರಿ, ನಾನು ನಿಮ್ಮನ್ನ ಇಷ್ಟೊಂದು ಪ್ರೀತಿಸಿ, ನಿಮ್ಮನ್ನ ಮದುವೆಯಾಗೋ ಕನಸು ಕಂಡಿದ್ದೆ ತಪ್ಪಾ? ಉತ್ತರ ಕೊಡಿ, ನನಗೆ ಮೋಸ ಯಾಕೆ ಮಾಡಿದ್ರಿ ಎಂದು ಕೊರಗ್ತಾಳೆ.
ಇಷ್ಟೇಲ್ಲಾ ನಡಿತಿದ್ರೆ ಸಿದ್ಧೇ ಗೌಡರು ಇದೀಗ ನೇರವಾಗಿ ಭಾವನಾ ಮನೆಗೆ ಬಂದು ತನ್ನ ಪ್ರಾಣ ಹೋದ್ರೂ ಸರಿ ಭಾವನಾಳ ಜೊತೆಗೇ ಮನೆಗೆ ಹೋಗೋದು ಅಂತಿದ್ದಾರೆ ಸಿದ್ದೇಗೌಡ್ರು. ಆದರೆ ಸಿದ್ಧು ಮುಖವನ್ನು ನೋಡೊದಕ್ಕೆ ಇಷ್ಟಪಡದ ಭಾವನಾ ಮನೆಯ ಎಲ್ಲಾ ಬಾಗಿಲುಗಳನ್ನು ಮುಚ್ಚುತ್ತಾಳೆ.
ನೀವು ಮನೆಯ ಎಲ್ಲಾ ಬಾಗಿಲುಗಳನ್ನು ಮುಚ್ಚಿದ್ರೂ ಕೂಡ, ನನ್ನ ಹೃದಯದ ಬಾಗಿಲು ನಿಮಗಾಗಿ ಯಾವಾಗ್ಲೂ ತೆರೆದೇ ಇರುತ್ತೆ ಎನ್ನುವ ಸಿದ್ಧು, ನಿಮ್ಮನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತೀನಿ ಮೇಡಂಅ ಅವರೇ ನಿಮ್ಮನ್ನು ಬಿಟ್ಟು ಬದುಕೋ ಶಕ್ತಿ ಈ ಸಿದ್ಧೇ ಗೌಡ್ರಿಗೆ ಇಲ್ಲ ಎಂದು ನೀವು ನನ್ನ ಒಪ್ಪಿಕೊಳ್ಳೋವರೆಗೂ ನಾನು ಈ ಜಾಗ ಬಿಟ್ಟು ಎಲ್ಲೂ ಹೋಗೋದಿಲ್ಲ ಎಂದು ಸತ್ಯಾಗ್ರಹಕ್ಕೆ ಕೂತಿದ್ದಾರೆ ಸಿದ್ದೇ ಗೌಡ್ರು.
ರಾತ್ರಿಯಾಗಿ ಜೋರು ಮಳೆ ಸುರಿತಿದ್ರೂ ಸಿದ್ಧು ನಿಂತ ಜಾಗದಿಂದ ಅಲ್ಲಾಡದಿರೋದನ್ನ ನೋಡಿ, ಶ್ರೀನಿವಾಸ್ ಬಂದು ಸಿದ್ಧು ಮನೆಗೆ ಹೋಗು ಅಂತಾರೆ, ಆದರೆ ಇದಕ್ಕೆ ಒಪ್ಪದ ಸಿದ್ಧು ನಾನು ಇಲ್ಲಿಂದ ಹೋಗ್ಲೇಬೇಕಾದ್ರೆ ಒಂದು ನನ್ನ ಹೆಣ ಹೋಗ್ಬೇಕು, ಇಲ್ಲಾಂದ್ರೆ ಭಾವನಾ ಮೇಡಂ ಜೊತೆಗೆ ನಾನು ಹೋಗೋದು ಎಂದು ಮತ್ತೆ ಕೂತ್ಕೋತ್ತಾರೆ ಗೌಡರು. ಇಷ್ಟೆಲ್ಲಾ ಆದ್ಮೇಲೆ ಭಾವನಾ ಸಿದ್ದೇ ಗೌಡ್ರ ಪ್ರೀತಿನಾ ಒಪ್ಕೋತ್ತಾಳಾ? ಸಿದ್ದು ಜೊತೆ ಅವರ ಮನೆಗೆ ಹೋಗೋದಕ್ಕೆ ರೆಡಿಯಾಗ್ತಾಳ ಕಾದು ನೋಡಬೇಕು.