ಆದರೆ ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಮನೆಯಿಂದ ಬೆಳಗ್ಗೆಯೇ ಹೊರ ಹೋಗಿದ್ದ ಲಕ್ಷ್ಮೀ, ಕಾರುಣ್ಯ ಜೊತೆಗೆ ಮನೆಗೆ ವಾಪಾಸ್ ಬಂದಿದ್ದಾಳೆ. ವಿರುದ್ಧ ಮಾತನಾಡಿದವರಿಗೆ ತಿರುಗೇಟು ನೀಡಿ, ಅತ್ತೆ ಬಳಿ ಇವತ್ತು ಎಲ್ಲಾ ಸತ್ಯಾನೂ ಬಯಲಾಗುತ್ತೆ. ಇದು ಕೀರ್ತಿ ಕ್ಯಾಮೆರಾ, ಕೀರ್ತಿ ಬೆಟ್ಟದ ಮೇಲೆ ಫಿಕ್ಸ್ ಮಾಡಿದ್ದ ಕ್ಯಾಮೆರಾ ಇದು. ಇದರಲ್ಲಿ ಎಲ್ಲಾ ರೀತಿಯ ಸತ್ಯಗಳೂ ಕೂಡ ಅಡಗಿದೆ ಎನ್ನುತ್ತಾಳೆ ಲಕ್ಷ್ಮೀ, ಆವಾಗ ಕಾವೇರಿ ಭಯದಿಂದ ತತ್ತರಿಸಿ ಹೋಗ್ತಾಳೆ.