ಸಾಮಾನ್ಯವಾಗಿ, ನಾನು ತುಂಬಾನೆ ನಾಚಿಕೆ ಸ್ವಭಾವದವಳು ಮತ್ತು ಸೆಲೆಬ್ರಿಟಿಗಳೊಂದಿಗೆ ಸೆಲ್ಫಿಗಳನ್ನು ಕೇಳುವ ಅಭ್ಯಾಸವೂ ಇಲ್ಲ, ಆದರೆ ಸೋನು ಸರ್ ಬಗ್ಗೆ ಏನೋ ಅಭಿಮಾನ. ಅವರು ಸೂಪರ್ಸ್ಟಾರ್ ಎಂಬ ಕಾರಣಕ್ಕಾಗಿ ಅಲ್ಲ, ಆದರೆ ಅವರೊಬ್ಬ ಅದ್ಭುತ ವ್ಯಕ್ತಿಯಾಗಿರೋದಕ್ಕೆ. ಕೋವಿಡ್ ಸಮಯದಲ್ಲಿ ಅವರು ಜನರಿಗೆ ಮಾಡಿದಂತಹ ಸಹಾಯಗಳು ನನಗೆ ಸ್ಫೂರ್ತಿ ನೀಡಿವೆ. ಜಗತ್ತಿನಲ್ಲಿ ಅಂತಹ ನಿಜವಾದ ಒಳ್ಳೆಯ ಹೃದಯದ ಜನರಿದ್ದಾರೆ ಎಂದು ನಂಬುವುದು ಕಷ್ಟ, ಆದರೆ ಸೋನು ಸೂದ್ ಸರ್ ಅವರಲ್ಲಿ ಒಬ್ಬರು ಎಂದು ಬರೆದುಕೊಂಡಿದ್ದಾರೆ.