ಪತಿ ಮುರುಗಾ ಮಾಸ್ಟರ್ ಜೊತೆಗಿನ ಫೋಟೊ ಯಾಕ್ ಹಾಕಲ್ಲ? ಅಮೃತಾಧಾರೆ ನಟಿಗೆ ಫ್ಯಾನ್ಸ್ ಪ್ರಶ್ನೆ

Published : Feb 18, 2025, 06:30 PM ISTUpdated : Feb 19, 2025, 08:31 AM IST

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರಕ್ಕೆ ಸದ್ಯ ಬಣ್ಣ ಹಚ್ಚುತ್ತಿರುವ ನಟಿ ಇಶಿತಾ ವರ್ಷ, ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಗಂಡನ ಜೊತೆಗಿನ ಫೋಟೊ ಯಾಕೆ ಹಾಕ್ತಿಲ್ಲ ಅನ್ನೋದು ಅಭಿಮಾನಿಗಳಿಗೆ ಕಾಡುತ್ತಿರೋ ಪ್ರಶ್ನೆಯಾಗಿದೆ.   

PREV
17
ಪತಿ ಮುರುಗಾ ಮಾಸ್ಟರ್ ಜೊತೆಗಿನ ಫೋಟೊ ಯಾಕ್ ಹಾಕಲ್ಲ? ಅಮೃತಾಧಾರೆ ನಟಿಗೆ ಫ್ಯಾನ್ಸ್ ಪ್ರಶ್ನೆ

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ನಿರ್ವಹಿಸುತ್ತಿದ್ದ ಮಹಿಮಾ ಪಾತ್ರವನ್ನು ಸದ್ಯ ನಿರ್ವಹಿಸುತ್ತಿರೋದು ನಟಿ ಇಶಿತಾ ವರ್ಷ (Ishitha Varsha). ಇವರು ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ. 
 

27

ಇಶಿತಾ ವರ್ಷ ಕೃಷ್ಣ ರುಕ್ಮಿಣಿ, ಹೊಸ ಬಾಳಿಗೆ ನೀ ಜೊತೆಯಾದೆ, ತಂಗಾಳಿ, ಅಸಂಭವ ಹಾಗೂ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದರು. ಅಗ್ನಿಸಾಕ್ಷಿಯ ಮಾಯಾ ಪಾತ್ರ ಇವರಿಗೆ ನೇಮು ಫೇಮ್ ತಂದುಕೊಟ್ಟಿತ್ತು. ಅದಾದ ನಂತರ ಒಂದೆರಡು ಸೀರಿಯಲ್ ಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಇಶಿತಾ, ಆಮೇಲೆ ಪೂರ್ಣಪ್ರಮಾಣದಲ್ಲಿ ನಟಿಸಿದ್ದು, ಅಮೃತಧಾರೆ ಸೀರಿಯಲ್ ನಲ್ಲಿ. 
 

37

ಇಶಿತಾ ಪತಿ ಯಾರೆಂದು ಎಲ್ಲರಿಗೂ ಗೊತ್ತೆ ಇದೆ. ಇವರು ಮದುವೆಯಾಗಿರೋದು ಡ್ಯಾನ್ಸ್ ಮಾಸ್ಟರ್ ಮುರುಗಾನಂದ (Dance Master Murugananda) ಅವರನ್ನು. 2019ರಲ್ಲೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರು ಜೋಡಿಯಾಗಿ ರಾಜಾ ರಾಣಿ ಎನ್ನುವ ಕಪಲ್ ಶೋನಲ್ಲೂ ಕಾಣಿಸಿಕೊಂಡು ರನ್ನರ್ ಅಪ್ ಕಿರೀಟವನ್ನು ಸಹ ತೊಟ್ಟಿದ್ದರು. 
 

47

ಮುರುಗಾನಂದ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹೆಚ್ಚಾಗಿ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇನ್ನು ಇಶಿತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ತಮ್ಮ ಫೊಟೊ ಶೂಟ್, ಗೆಟ್ ರೆಡಿ ವಿತ್ ಮಿ ವಿಡಿಯೋ ಹಾಗೂ ತಮ್ಮ ಟ್ರಾವೆಲ್ ಹಾಗೂ ಫೋಟೋಗ್ರಾಫಿಯ ವಿಡಿಯೋ ಹಾಗೂ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. 
 

57

ಮುರುಗಾನಂದ ಆಗೋಮ್ಮೆ ಈಗೊಮ್ಮೆ ತಮ್ಮ ಪತ್ನಿಯ ಜೊತೆಗಿನ ಫೋಟೊ ಹಂಚಿಕೊಂಡು ಅಥವಾ ಸ್ಟೋರಿ ಶೇರ್ ಮಾಡಿ, ವಿಶೇಷ ದಿನಗಳಂದು ಪತ್ನಿಗೆ ವಿಶ್ ಮಾಡೋದನ್ನು ಕಾಣಬಹುದು. ಆದರೆ ಇಶಿತಾ ಮಾತ್ರ ಸೋಶಿಯಲ್ ಮೀಡೀಯಾದಲ್ಲಿ ಗಂಡನ ಜೊತೆಗಿನ ಫೋಟೊ ಹಂಚಿಕೊಂಡಿದ್ದೇ ಕಡಿಮೆ. 
 

67

ಎರಡು ವರ್ಷದ ಹಿಂದೆ ಮುರುಗಾನಂದ ಹುಟ್ಟುಹಬ್ಬದ ಇಶಿತಾ ಕಪಲ್ಸ್ ಫೊಟೋ ಶೇರ್ ಮಾಡಿದ್ದು, ಬಿಟ್ಟರೆ, ನಂತ್ರ ಯಾವತ್ತೂ ಜೊತೆಗಿನ ಫೋಟೊ ಹಂಚಿಕೊಂಡಿಲ್ಲ. ಹಾಗಾಗಿ ಇಶಿತಾ ಯಾವುದೇ ಫೊಟೊ ಶೇರ್ ಮಾಡಿದ್ರೂ ಕೂಡ ಜನ ಮುರುಗಾನಂದ ಜೊತೆ ಫೋಟೊ ಶೇರ್ ಮಾಡಿ, ಗಂಡನ ಜೊತೆಗಿನ ಫೋಟೊ ಯಾಕೆ ಹಾಕ್ತಿಲ್ಲ, ಇಬ್ಬರ ನಡುವೆ ಏನೋ ಇದೆ, ಏನೂ ಸರಿ ಇಲ್ಲ ಅನಿಸುತ್ತೆ ಎಂದೆಲ್ಲಾ ಕಾಮೆಂಟ್ ಗಳೇ ತುಂಬಿರುತ್ತೆ. 
 

77

ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಜೋಡಿಯಾಗಿರುವ ಫೋಟೊ ಶೇರ್ ಮಾಡೋದು ಬಿಡೋದು ಅವರವರ ಪರ್ಸನಲ್ ವಿಷ್ಯ. ಅವರಿಗೆ ತಮ್ಮ ಪರ್ಸನಲ್ ವಿಷ್ಯವನ್ನು ಹೊರಗಡೆ ತೋರಿಸಿಕೊಳ್ಳೊದಕ್ಕೆ ಇಷ್ಟ ಇಲ್ಲದೇ ಇರಬಹುದು. ಹಾಗಾಗಿ ಜೋಡಿ ಫೋಟೊಗಳಿಂದ ದೂರ ಉಳಿದಿರಬಹುದು. ಜೊತೆಗಿರುವ ಫೋಟೊ ಹಾಕ್ತಿಲ್ಲ ಎಂದ ಮಾತ್ರಕ್ಕೆ ಜೋಡಿನೇ ಸರಿ ಇಲ್ಲ ಅನ್ನೋದು ಸರೀನಾ? 
 

click me!

Recommended Stories