ಜನ ಮೆಚ್ಚಿದ ಮಂಥರೆ… ಕಾವೇರಿನ ಯಾರಿಗಾದ್ರೂ ಮೀರ್ಸೋದಕ್ಕೆ ಸಾಧ್ಯಾನ ಅಂತಿದ್ದಾರೆ ಜನ, ನೀವೇನಂತೀರಾ?

Published : Aug 20, 2024, 05:13 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿವಿಧ ಕೆಟಗರಿಯಲ್ಲಿ ನೆಚ್ಚಿನ ನಟ ನಟಿಯರನ್ನು ಆಯ್ಕೆ ಮಾಡೋದಕ್ಕೆ ಪೋಲಿಂಗ್ ಆರಂಭವಾಗಿದೆ. ಜನ ಮೆಚ್ಚಿದ ಮಂಥರೆ ವಿಭಾಗದಲ್ಲಿ ಕಾವೇರಿ ಹೆಸರು ಕೇಳಿ ಬರ್ತಿದೆ.   

PREV
18
ಜನ ಮೆಚ್ಚಿದ ಮಂಥರೆ… ಕಾವೇರಿನ ಯಾರಿಗಾದ್ರೂ ಮೀರ್ಸೋದಕ್ಕೆ ಸಾಧ್ಯಾನ ಅಂತಿದ್ದಾರೆ ಜನ, ನೀವೇನಂತೀರಾ?

ಮೊದಲು ಸಿನಿಮಾ ಜಗತ್ತಿನ ಭಾಗವಾಗಿದ್ದ ಅವಾರ್ಡ್ ಸಮಾರಂಭ ಇದೀಗ ಕಿರುತೆರೆಗೂ ಲಗ್ಗೆ ಇಟ್ಟಿದ್ದು, ಕಳೆದ 10 ವರ್ಷಗಳಿಂದ ಕಿರುತೆರೆಯಲ್ಲಿ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಕಲರ್ಸ್ ಕನ್ನಡ (Colors Kannada) ವಾಹಿನಿಯು ಅನುಬಂಧ ಅವಾರ್ಡ್ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಸುತ್ತಾ ಬಂದಿದೆ. 
 

28

ಈ ವರ್ಷ ಅನುಬಂಧ ಅವಾರ್ಡ್ಸ್ (Anubandha Awards) ಕಾರ್ಯಕ್ರಮಕ್ಕೆ 11ನೇ ವರ್ಷ ತುಂಬಿದ್ದು, ಈಗಾಗಲೇ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿವಿಧ ಧಾರಾವಾಹಿಗಳ, ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಸದ್ಯಕ್ಕೆ ನೆಚ್ಚಿನ ನಟ, ನಟಿಯರ ಆಯ್ಕೆ ನಡೆಯುತ್ತಿದೆ. ಇತ್ತೀಚೆಗೆ ವಾಹಿನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಜನ ಮೆಚ್ಚಿದ ಮಂಥರೆ ಅವಾರ್ಡ್ ಬಗ್ಗೆ ಪ್ರೋಮೊ ನೀಡಿದ್ದು. 
 

38

ಜನ ಮೆಚ್ಚಿನ ಮಂಥರೆ ವಿಭಾಗದಲ್ಲಿ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ಶ್ರೇಷ್ಠಾ, ಲಕ್ಷ್ಮೀ ಬಾರಮ್ಮದಿಂದ (Lakshmi Baramma) ಕಾವೇರಿ, ನಿನಗಾಗಿಯಿಂದ ವಜ್ರೇಶ್ವರಿ, ಶ್ರೀಗೌರಿಯಿಂದ ಅರ್ಚನಾ, ರಾಮಾಚಾರಿಯಿಂದ ವೈಶಾಖ, ಕರಿಮಣಿಯಿಂದ ನಳಿನಿ, ಅಂತರಪಟದಿಂದ ಅಮಲಾ, ಕೆಂಡಸಂಪಿಗೆಯಿಂದ ಸಾಧನಾ ಹೆಸರು ನಾಮಿನೇಟ್ ಆಗಿರುತ್ತೆ. 
 

48

ಇದನ್ನ ನೋಡಿ ವೀಕ್ಷಕರು ತಮ್ಮ ಅಭಿಪ್ರಾಯ ತಿಳಿಸಿದ್ದು, ಹೆಚ್ಚಿನ ಜನರು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕಾವೇರಿಗೆ ವೋಟ್ ಮಾಡಿದ್ದಾರೆ. ಕಾವೇರಿಗೆ ಮೊದ್ಲು ಅವಾರ್ಡ್ ಕೊಡಿ,  ಅವಮ್ಮ ಇಷ್ಟು ಅಗಲ ಕಣ್ಣು ಬಿಟ್ಟುಕೊಂಡು ಕಣ್ಣೇ ಬಿದ್ದೋಗುತ್ತೋ ಏನೋ ಅನ್ನೋ ಲೆವೆಲ್ ಗೆ ನಟಿಸಿದ್ದಾರೆ ಎಂದು ಒಬ್ಬ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. 
 

58

ಇನ್ನು ಹಲವಾರು ಜನರು ಕಾವೇರಿಯೇ (Kaveri) ಮೆಚ್ಚಿನ ಮಂಥರೆ ಅಂದಿದ್ದು, ಕಾವೇರಿಗಿಂತ ಮಂಥರೆ ಯಾರಿದ್ದಾರೆ? ಈ ಅವಾರ್ಡ್ ಕಾವೇರಿಗೆ ಬರಬೇಕು, ಕಾವೇರಿ ಯವರಿಗೆ ನಮ್ಮ ವೋಟ್. ಅವರು ಮಂಥರೆ ಪಾತ್ರಕ್ಕೆ ಸರಿ ಹೊದ್ದುತ್ತಾರೆ, ಕಾವೇರಿನ ಯಾರಾದ್ರೂ ಮೀರ್ಸೋದಕ್ಕೆ ಸಾಧ್ಯಾನಾ? ಅವರಿಗೇ ಪ್ರಶಸ್ತಿ ಕೊಡಬೇಕು ಎಂದಿದ್ದಾರೆ. 
 

68

ಈ ಪ್ರಶಸ್ತಿಗೆ ಒನ್ ಆಂಡ್ ಓನ್ಲಿ ಕಾವೇರಿ ಮಾತ್ರ ಅರ್ಹರು. ಧಾರಾವಾಹಿ ನೋಡ್ತಿರೋ ಪ್ರತಿಯೊಬ್ಬರೂ ಅವರಿಗೆ ಚೆನ್ನಾಗಿ ಬೈತಿದ್ದಾರೆ ಅಂದ್ರೆ, ಕಾವೇರಿ ಅಷ್ಟೊಂದು ಚೆನ್ನಾಗಿ ನಟಿಸುತ್ತಿದ್ದಾರೆ ಎಂದು ಅರ್ಥ. ಅವರು ಈಗಾಗ್ಲೇ ಗೆದ್ದಾಗಿದೆ ಎಂದು ಸಹ ಜನ ಹೇಳ್ತಿದ್ದಾರೆ. 
 

78

ಎಲ್ಲಾ ವಿಲನ್ ಗಳು ಒಂದೊಂದು ಮುತ್ತುಗಳು ಎಲ್ಲರಿಗೂ ಅವಾರ್ಡ್ ಕೊಟ್ರು ತಪ್ಪಿಲ್ಲ ಎನ್ನುತ್ತಿದ್ದಾರೆ ಜನ. ಇನ್ನು ರಾಮಾಚಾರಿ (Ramachari) ಧಾರಾವಾಹಿಯ ವೈಶಾಖಗೂ ಹೆಚ್ಚಿನ ಜನರು ವೋಟ್ ಮಾಡಿದ್ದಾರೆ. ಜನ ಮೆಚ್ಚಿದ ಮಂಥರೆ ವೈಶಾಖ, ವೈಶಾಖ ಪಾತ್ರ ಸೂಪರ್, ಅವರಿಗೆ ಅವಾರ್ಡ್ ಕೊಡಬೇಕು ಅಂತಾನೂ ಹೇಳ್ತಿದ್ದಾರೆ. 
 

88

ಇನ್ನೊಂದಷ್ಟು ಜನ ನಿನಗಾಗಿ ಧಾರಾವಾಹಿಯಲ್ಲಿ ರಚನಾ ತಾಯಿಯಾಗಿ ಖಡಕ್ ಆಗಿ ಅಭಿನಯಿಸುತ್ತಿರುವ ವಜ್ರೇಶ್ವರಿಗೆ ಈ ಪ್ರಶಸ್ತಿ ನೀಡಿ ಅಂದ್ರೆ, ಮತ್ತೆ ಕೆಲವರು ಶ್ರೀಗೌರಿಯ ಅರ್ಚನಾಗೆ ನೀಡಿ ಎಂದಿದ್ದಾರೆ, ಮತ್ತೊಂದಿಷ್ಟು ಜನ ಅಂತರಪಟ ಧಾರಾವಾಹಿಯ ಅಮಲಾಗೆ ನೀಡಿ ಅಂತಾನೂ ಹೇಳಿದ್ದಾರೆ. ನಿಮಗೇನು ಅನಿಸುತ್ತೆ? ಈ ಬಾರಿಯ ಜನ ಮೆಚ್ಚಿದ ಮಂಥರೆ ಅವಾರ್ಡ್ ಯಾರ ಪಾಲಾಗಬಹುದು ಹೇಳಿ?
 

Read more Photos on
click me!

Recommended Stories