ಕುತಂತ್ರಿಗಳ ತಂತ್ರ ಕೊನೆಗೂ ಅನಾವರಣ… ಅಂತಿಮ ಹಂತ ತಲುಪಿದ ಕೆಂಡಸಂಪಿಗೆ, ನಿಟ್ಟುಸಿರು ಬಿಟ್ಟ ವೀಕ್ಷಕರು

First Published | Aug 20, 2024, 3:31 PM IST

ಅಕ್ಟೋಬರ್ ಅಂತ್ಯಕ್ಕೆ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮೂರು ಧಾರಾವಾಹಿಗಳು ಮುಕ್ತಾಯಗೊಳ್ಳಲಿವೆ ಎನ್ನುವ ಸುದ್ದಿ ಕೇಳಿ ಬಂದಿತ್ತು ಇದೀಗ ಕೆಂಡ ಸಂಪಿಗೆ ಮುಕ್ತಾಯಗೊಳ್ಳಲಿದೆ. 
 

ವೀಕ್ಷಕರು ಅತಿ ಕಾತುರದಿಂದ ಕಾಯುತ್ತಿರುವ ಬಿಗ್ ಬಾಸ್ ಸೀಸನ್ 11 (Bigg Boss Season 11) ಅಕ್ಟೋಬರ್ ಕೊನೆಯ ವಾರದಲ್ಲಿ ಪ್ರಸಾರವಾಗೋದಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂರು ಸೀರಿಯಲ್ ಗಳು ಸಹ ಮುಕ್ತಾಯಗೊಳ್ಳಲಿದೆ ಎನ್ನುವ ಸುದ್ದಿ ಬಹಳ ಹಿಂದಿನಿಂದ ಕೇಳಿ ಬಂದಿತ್ತು. ಇದೀಗ ಕೆಂಡಸಂಪಿಗೆ ಕೊನೆಯಾಗುತ್ತಿದೆ. 
 

ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸುಮನಾ ಮತ್ತು ತೀರ್ಥಂಕರ್ ಕಥೆಯನ್ನು ಹೊಂದಿದ ಧಾರಾವಾಹಿ ಕೆಂಡಸಂಪಿಗೆ (Kendasampige) ಇದೀಗ ಕೊನೆಯ ಹಂತವನ್ನು ತಲುಪಿದ್ದು, ಕೊನೆಯ ಎಪಿಸೋಡ್ ಗಳ ಶೂಟಿಂಗ್ ನಡೆಯುತ್ತಿರೋದಾಗಿ ಸಾಧನಾ ಪಾತ್ರದಲ್ಲಿ ನಟಿಸುತ್ತಿರುವ ಅಮೃತಾ ರಾಮ ಮೂರ್ತಿ ವಿಡಿಯೋ ಮಾಡಿ ತಿಳಿಸಿದ್ದಾರೆ. 
 

Tap to resize

2022ರಲ್ಲಿ ಆರಂಭವಾಗಿ ಒಂದೇ ತೆರನಾದ ಕಥೆ ಎಳೆದುಕೊಂಡು ಹೋಗುತ್ತಿರುವ ಕೆಂಡಸಂಪಿಗೆ ಕಥೆ ಶುರುವಾಗಿದ್ದು ಹೇಗಂದ್ರೆ, ಸಾಮೂಹಿಕ ವಿವಾಹವನ್ನು ಮಾಡಿಸುತ್ತಿದ್ದ ಎಂಎಲ್’ಎ ತೀರ್ಥಂಕರ್, ತಮ್ಮ ಪ್ರಚಾರಕ್ಕಾಗಿ ಸುಮನಾ ಕತ್ತಿಗೆ ತಾಳಿ ಕಟ್ತಾನೆ. ನಂತ್ರ ಆಕೆಯಿಂದ ಡಿವೋರ್ಸ್ ತೆಗೆದುಕೊಳ್ಳುವ ಬಗ್ಗೆಯೂ ಯೋಚಿಸುತ್ತಾನೆ. 
 

ಕೊನೆಗೆ ಸುಮನಾಳ ಒಳ್ಳೆತನವನ್ನು ಅರ್ಥ ಮಾಡಿಕೊಂಡು ಆಕೆಯ ಪ್ರೀತಿಯಲ್ಲಿ ಬೀಳ್ತಾನೆ ತೀರ್ಥ. ತೀರ್ಥಂಕರ್ ಮನೆಯ ಹಿರಿಯ ಸೊಸೆ ಸಾಧನಾ. ಮನೆ, ಅಧಿಕಾರ, ಕಚೇರಿ ಎಲ್ಲವೂ ತನ್ನ ಕೈಕೆಳಗೆ ಇರಬೇಕೆಂದು ಬಯಸುವ ಸಾಧನಾ, ಮನೆಯವರ ಮುಂದೆ ಒಳ್ಳೆಯವಳಂತೆ ನಟಿಸಿ, ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡಿಸ್ತಾಳೆ.  
 

ಇದೆಲ್ಲದರ ನಡುವೆ ಸುಮನಾ ತಮ್ಮ ರಾಜೇಶ ಸಾವನ್ನಪ್ಪಿದ್ದು, ಅದನ್ನ ಯಾರು ಮಾಡಿಸಿದರು ಅನ್ನೋದನ್ನ ಹುಡುಕೋಕೆ ಸುಮನಾ ತನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡ್ತಾಳೆ. ಸುಮನಾ ಒಂದೊಂದೆ ಎಳೆಯನ್ನು ಬಿಡಿಸುತ್ತಾ ಹೋದಂತೆ, ಸಾಧನಾಳ ಒಂದೊಂದೇ ಕುತಂತ್ರ ತೆರೆದುಕೊಳ್ಳುತ್ತಾ ಹೋಗುತ್ತೆ. ತಾನೀಗ ಗೆದ್ದೆ ಎನ್ನುವ ಹಂತದಲ್ಲಿ ಪ್ರತಿಬಾರಿ ಸುಮನಾ ಸಾಧನಾ ಎದುರು ಸೋತು ಸುಣ್ಣವಾಗುತ್ತಿದ್ದಳು. 
 

ಸಾಧನಾಳ ಕುತಂತ್ರ ಬುದ್ದಿ, ಮನೆಹಾಳು ಮಾಡುವ ಯೋಚನೆ, ಪದೇ ಪದೇ ಸುಮನಾಳ ಸೋಲು ನೋಡಿ ನೋಡಿ ಸಾಕಾಗಿದ್ದ ಜನರು ದಯವಿಟ್ಟು ಸೀರಿಯಲ್(serial) ಮುಗಿಸಿ ಅಂತ ಬೇಡಿಕೆ ಕೂಡ ಇಟ್ಟಿದ್ದರು. ಒಳ್ಳೆಯವರಿಗೆ ಪದೇ ಪದೇ ಸೋಲಾಗೋದನ್ನು ನೋಡೊದಕ್ಕೆ ಸಾಧ್ಯ ಇಲ್ಲ ಎಂದು ಹೇಳುತ್ತಿದ್ದರು. ಕಳೆದಾ ಒಂದು ವರ್ಷದಿಂದ ಅದೇ ಗೋಳು ನೋಡಿ ನೋಡಿ ಸಾಕಾಗಿತ್ತು, ಸಾಧನಾ ಕುತಂತ್ರ ಎಲ್ಲರಿಗೂ ಗೊತ್ತಾಗೋವಂತೆ ಮಾಡಿ ಎಂದು ಹೇಳಿದ್ದರು ಜನ. 
 

ಇದೀಗ ಕೊನೆಗೂ ತೀರ್ಥಂಕರ್ ಪ್ರಸಾದ್ ಹಾಗೂ ಸುಮನಾ ಮಹಾ ಮಾಸ್ಟರ್ ಪ್ಲಾನ್ ಮಾಡಿದ್ದು, ಇದರಿಂದ ಶಂಕರೇಗೌಡ ತನ್ನ ಎಲ್ಲಾ ಪಾಪಕರ್ಮಗಳನ್ನು ಬಾಯಿ ಬಿಟ್ಟಿದ್ದಾನೆ, ಇದನ್ನ ಸುಮನಾ ರೆಕಾರ್ಡ್ ಮಾಡ್ತಿದ್ದಾಳೆ. ಇದೇ ಶಂಕರೇಗೌಡನ ಮಗಳು ಸಾಧನಾ ಅನ್ನೋದು ತಿಳಿದು ಬಂದಿದೆ. ಹಾಗಾಗಿ ಇವರಿಬ್ಬರನ್ನ ಜೈಲಿಗೆ ಕಳುಹಿಸುವ ಮೂಲಕ ಸೀರಿಯಲ್ ಕೊನೆಯಾಗಲಿದೆ. 
 

ಮಧುಮಿತಾ, ಆಕಾಶ್, ಅಮೃತಾ ರಾಮಮೂರ್ತಿ (Amrutha Rammoorthy), ದೊಡ್ಡಣ್ಣ, ಜ್ಯೋತಿ ರೈ ಬಂಟ್ವಾಳ, ಗಣೇಶ್ ರಾವ್ ಕೇಸರ್ಕರ್, ಗೀತಾ ಶರಣ್ ಮುಂತಾದವರು ಅಭಿನಯಿಸುತ್ತಿರುವ ಕೆಂಡಸಂಪಿಗೆ ಧಾರಾವಾಹಿ ಕೊನೆಗೂ ಅಂತಿಮ ಹಂತ ತಲುಪಿದ್ದನ್ನು ನೋಡಿ, ಸತ್ಯ ಅನಾವರಣವಾಗಿದ್ದನ್ನು ನೋಡಿ ವೀಕ್ಷಕರು ಖುಷಿ ಪಟ್ಟಿದ್ದಾರೆ.  
 

Latest Videos

click me!