ತಮ್ಮ ಫಿಟ್ನೆಸ್ ಮೂಲಕ ಮೋಡಿ ಮಾಡ್ತಿರೋ ಬಿಗ್ ಬಾಸ್ ಚೆಲುವೆ ಶ್ರುತಿ ಪ್ರಕಾಶ್ ಎಲ್ಲಿದ್ದಾರೆ ಈಗ?

Published : Nov 30, 2024, 11:01 PM ISTUpdated : Dec 02, 2024, 07:27 AM IST

ಬಿಗ್ ಬಾಸ್ ಕನ್ನಡ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಚೆಲುವೆ ಶ್ರುತಿ ಪ್ರಕಾಶ್, ಈವಾಗ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ.  

PREV
16
ತಮ್ಮ ಫಿಟ್ನೆಸ್ ಮೂಲಕ ಮೋಡಿ ಮಾಡ್ತಿರೋ ಬಿಗ್ ಬಾಸ್ ಚೆಲುವೆ ಶ್ರುತಿ ಪ್ರಕಾಶ್ ಎಲ್ಲಿದ್ದಾರೆ ಈಗ?

ನಮ್ಮ ಕನ್ನಡದ ಬೆಳಗಾವಿಯ ಹುಡುಗಿಯಾಗಿದ್ರೂ ನಟಿ ಶ್ರುತಿ ಪ್ರಕಾಶ್ ಜನಪ್ರಿಯತೆ ಪಡೆದದ್ದು, ಹಿಂದಿ ಸೀರಿಯಲ್ ಮೂಲಕ. ಹಲವು ಹಿಂದಿ ಸೀರಿಯಲ್ ಗಳಲ್ಲಿ ನಟಿಸಿದ್ದ ಇವರು ಕನ್ನಡ ಬಿಗ್ ಬಾಸ್ ಸೀಸನ್ 5ರ (Kannada Bigg Boss season 5) ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ನಟಿ ಇವರು. 
 

26

ನಂತರ ಲಂಡನ್ ನಲ್ಲಿ ಲಂಭೋದರ (Londoan Nalli Lambodhara) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು ಶ್ರುತಿ. ಇದಾದ ಬಳಿಕ ಇವರು ಕಡಲ ತೀರದ ಭಾರ್ಗವ, ಗ್ರೇ ಗೇಮ್ಸ್, ಆಡು ಆಟ ಆಡು ಹಾಗೂ ಫ್ರೈಡೇ ಎನ್ನುವ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದರ ಜೊತೆಗೆ ಹಿಂದಿಯಲ್ಲಿ ಆಲ್ಬಂ ಸಾಂಗ್ ಗಳಲ್ಲೂ ಶ್ರುತಿ ನಟಿಸಿದ್ದಾರೆ. 
 

36

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ರುತಿ ಪ್ರಕಾಶ್ (Shruthi Prakash)ಹೆಚ್ಚಾಗಿ ತಮ್ಮ ಫಿಟ್ನೆಸ್ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡುತ್ತಿರುತ್ತಾರೆ. ಶ್ರುತಿ ಪ್ರಕಾಶ್ ಇಷ್ಟೊಂದು ಫಿಟ್ ಆಗಿರೋದಕ್ಕೆ ಕಾರಣ ಆಕೆ ನಿಯಮಿತವಾಗಿ ಮಾಡುವ ಯೋಗಾ, ಜಿಮ್ ಇತ್ಯಾದಿ. ಶ್ರುತಿ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳೋದಕ್ಕೆ ಹಲವು ವರ್ಷಗಳಿಂದ ಯೋಗದ ಮೊರೆ ಹೋಗಿದ್ದಾರೆ. 
 

46

ಇನ್ನು ಶ್ರುತಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಫೋಟೊಗಳು, ಕೆಲವೊಂದು ಮನದ ಮಾತುಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ ಶ್ರುತಿ ಉತ್ತಮ ಗಾಯಕಿಯೂ ಆಗಿದ್ದು, ತಮ್ಮ ಸುಮಧುರ ಕಂಠದ ಮೂಲಕ ಹಾಡು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. 
 

56

ಶ್ರುತಿ ಪ್ರಕಾಶ್ ಬಾಲಿವುಡ್ (Bollywood) ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿಯೂ ಕೇಳಿ ಬಂದಿತ್ತು.  ವಿಕ್ರಮ್ ಭಟ್ ನಿರ್ದೇಶನದ ಹಾಂಟೆಡ್ 2 ಸಿನಿಮಾದ ಮೂಲಕ ಬಾಲಿವುಡ್ ಗೆ ಹಾರಲಿದ್ದಾರೆ ಎನ್ನಲಾಗಿತ್ತು. ‘ಹಾಂಟೆಡ್ 2’ ಚಿತ್ರದಲ್ಲಿ ಮಿಮೋಹ್ ಚಕ್ರವರ್ತಿಗೆ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದು, ಈ ಸಿನಿಮಾವನ್ನು ಆನಂದ್ ಪಂಡಿತ್ ನಿರ್ಮಾಣ ಮಾಡಲಿದ್ದಾರೆ. ಆದರೆ ಆ ಸಿನಿಮಾದ ಬಗ್ಗೆ ಮತ್ತೆ ಹೆಚ್ಚಿನ ಮಾಹಿತಿ ತಿಳಿದು ಬರಲೇ ಇಲ್ಲ. 
 

66

ನಟಿ ಈಗ ಏನ್ ಮಾಡ್ತಿದ್ದಾರೆ ಅಂತ ಕೇಳಿದ್ರೆ… ಈಗ ಆಕೆ ಕನ್ನಡ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಸದ್ಯಕ್ಕಂತೂ ಕನ್ನಡ ಸಿನಿಮಾಗಳಿಂದಲೂ ದೂರ ಉಳಿದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದುಕೊಂಡು, ಫ್ಯಾನ್ಸ್ ಜೊತೆಗೆ ತಮ್ಮ ವರ್ಕ್ ಔಟ್, ಟ್ಯಾಲೆಂಟ್ ಪ್ರದರ್ಶನ ಮಾಡ್ತಾನೆ ಇರ್ತಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories