ಕನ್ನಡ ಸಿನಿಮಾ ಹಾಗೂ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ಕೊಡಗಿನ ಸುಂದರಿ ತನಿಷಾ ಕುಪ್ಪಂಡ ಸದಾ ಸುದ್ದಿಯಲ್ಲಿ ಇರುವ ಸೆಲೆಬ್ರಿಟಿ.
ದಂಡುಪಾಳ್ಯ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಕ್ಕೆ ಅಷ್ಟಾಗಿ ಸುದ್ದಿ ಆಗಲಿಲ್ಲ ಆದರೆ ಬಿಗ್ ಬಾಸ್ ಮನೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದಕ್ಕೆ ಇಡೀ ಕರ್ನಾಟಕವೇ ಫ್ಯಾನ್ಸ್ ಆಗಿಬಿಟ್ಟಿದೆ.
ಇದೀಗ ತನಿಷಾ ಕುಪ್ಪಂಡ ಸೈಕಲ್ ಸವಾರಿ ಹೊರಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೇಲ್ ನೋಟಕ್ಕೆ ಇದು ಸಿನಿಮಾ ಶೂಟಿಂಗ್ ಸೆಟ್ ಎನ್ನಲಾಗಿದೆ ಆದರೆ ಹೆಸರು ರಿವೀಲ್ ಆಗಿಲ್ಲ.
ಕೆಂಪು ಬಣ್ಣದ ಬ್ಲೌಸ್‌ಗೆ ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಕೈ ತುಂಬಾ ಕೆಂಪು ಬಳೆ ಹಾಗೂ ಸೀರೆಗೆ ಧರಿಸುವಂತೆ ಆಭರಣಗಳಲ್ಲಿ ತನಿಷಾ ಮಿಂಚಿದ್ದಾರೆ.
ನಮ್ಮ ಬೆಂಕಿ ಯಾವತ್ತಿದ್ದರೂ ಸೂಪರ್, ನಮ್ಮ ಬೆಂಕಿಗೆ ಸರಿಯಾಗಿ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿಲ್ಲ, ನಮ್ಮ ಬೆಂಕಿಯನ್ನು ದೊಡ್ಡ ಮಟ್ಟಕ್ಕೆ ಬೆಳೆಸಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ತನಿಷಾ ಬ್ಯುಸಿನೆಸ್ ಮುಂದುವರೆಸಿದ್ದರು. ತಮ್ಮ ಹೋಟೆಲ್ ಜೊತೆ ಆಭರಣ ಅಂಗಡಿ ಓಪನ್ ಮಾಡಿದ್ದರು. ಇಲ್ಲಿ ಆರ್ಟಿಫಿಶಿಯಲ್ ಮತ್ತು ಬೆಳ್ಳಿ ಆಭರಣಗಳನ್ನು ಮಾರಾಟ ಮಾಡುತ್ತಾರೆ.
ಸಿಕ್ಕಾಪಟ್ಟೆ ಯಶಸ್ಸು ಕಾಣುತ್ತಿರುವ ತನಿಷಾ ಕುಪ್ಪಂಡ ಕೆಲವು ತಿಂಗಳ ಹಿಂದೆ ಐಷಾರಾಮಿ ಲ್ಯಾಂಡ್ ರೋವರ್ ಡಿಸ್ಕವರಿ ಕಾರನ್ನು ಖರೀದಿಸಿದ್ದರು. ಈ ಕಾರಿನ ಬೆಲೆ ಸುಮಾರು 97 ಲಕ್ಷದಿಂದ 1.43 ಕೋಟಿ ರೂಪಾಯಿವರೆಗೂ ಇದೆ.