ಎಷ್ಟು ಚಂದ ಅಲ್ವಾ ನಮ್ ಕೀರ್ತಿ…. ತನ್ವಿ ರಾವ್ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್!

Published : Nov 30, 2024, 10:05 PM ISTUpdated : Dec 02, 2024, 07:31 AM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ತನ್ವಿ ರಾವ್ ಇದೀಗ ತಮ್ಮ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ.   

PREV
17
ಎಷ್ಟು ಚಂದ ಅಲ್ವಾ ನಮ್ ಕೀರ್ತಿ…. ತನ್ವಿ ರಾವ್ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್!

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಕತೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಹಿಂದೆ ಸತ್ತಿದ್ದಾಳೆ ಎಂದಿದ್ದ ಕೀರ್ತಿ ಇದೀಗ ವಾಪಾಸ್ ಬಂದಿದ್ದಾಳೆ. ಕೀರ್ತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಜನರು ಈಗ ಕೀರ್ತಿಯ ಪಾತ್ರವೇ ಬದಲಾಗಿದೆ, ನಮಗೆ ಮೊದಲಿನ ಕೀರ್ತಿ ಬೇಕು ಎಂದು ಹೇಳ್ತಿದ್ದಾರೆ. 
 

27

ಕೀರ್ತಿ ಪಾತ್ರದಲ್ಲಿ ನಟಿ ತನ್ವಿ ರಾವ್ (Tanvi Rao) ಅಭಿನಯಿಸಿದ್ದು, ಇವರ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ನಾಯಕಿ ಲಕ್ಷ್ಮೀ ಪಾತ್ರಕ್ಕಿಂತ ಹೆಚ್ಚಾಗಿ ಜನ ಇನ್ನೊಂದು ಪಾತ್ರವನ್ನು ಹಚ್ಚಿಕೊಂಡಿದ್ದಾರೆ ಅಂದ್ರೆ ಅದು ಕೀರ್ತಿ ಪಾತ್ರವೇ ಇರಬೇಕು. 
 

37

ಕೀರ್ತಿಯ ಅಭಿನಯ ಕೋಪ, ಪ್ರೀತಿ, ಹುಚ್ಚು ಪ್ರೀತಿ, ಸ್ಯಾಡಿಸ್ಟ್ ಥರ ಆಡುವ ರೀತಿ ಎಲ್ಲವೂ ಜನರನ್ನ ಎಷ್ಟೊಂದು ಮೋಡಿ ಮಾಡಿತ್ತು ಅಂದ್ರೆ, ಆಕೆ ನೆಗೆಟಿವ್ ಶೇಡ್ (negative shade) ನಲ್ಲಿ ಕಾಣಿಸಿಕೊಂಡಿದ್ರೂ ಸಹ ಜನ ತುಂಬಾನೆ ಪ್ರೀತಿ ಕೊಟ್ಟಿದ್ದರು. ಅದಕ್ಕಾಗಿಯೇ ಇದೀಗ ಕೀರ್ತಿಯನ್ನು ವಾಪಾಸ್ ಕರೆಸಲಾಗಿದೆ. 
 

47

ಸೋಶಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಆಗಿರದ ತನ್ವಿ ರಾವ್, ಇದೀಗ ಕೀರ್ತಿ ಪಾತ್ರದ ಮೂಲಕ ಸಿಕ್ಕಂತಹ ಪ್ರೀತಿ, ಮೆಚ್ಚುಗೆಯಿಂದಾಗಿ ಇದೀಗ ತಮ್ಮ ಫ್ಯಾನ್ಸ್ ಜೊತೆ ಕನೆಕ್ಟ್ ಆಗೋದಕ್ಕೆ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 
 

57

ಅದ್ಭುತ ನೃತ್ಯಗಾರ್ತಿಯಾಗಿರುವ ತನ್ವಿ ರಾವ್ ತಮ್ಮ ನೃತ್ಯದ ವಿಡಿಯೋಗಳ ಮೂಲಕ, ತಮ್ಮ ಫೋಟೊ ಶೂಟ್ ಮೂಲಕ, ರೀಲ್ಸ್ ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಆ ಮೂಲಕ ಅಭಿಮಾನಿಗಳ ಪ್ರೀತಿ ಸ್ಪಂಧಿಸುತ್ತಲೇ ಇರುತ್ತಾರೆ ನಟಿ. 
 

67

ಇದೀಗ ತನ್ವಿ ರಾವ್ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಮುದ್ದಾದ ಫೋಟೊ  ಶೂಟ್ ಶೇರ್ ಮಾಡಿದ್ದು, ನೇರಳ ಬಣ್ಣದ ಲಂಗ ದಾವಣಿ ಹಾಗೂ ಜ್ಯುವೆಲ್ಲರಿಯಲ್ಲಿ ನಟಿ ಕನಸಿನ ಲೋಕದ ಅಪ್ಸರೆಯೇ ಧರಿಗಿಳಿದು ಬಂದಂತೆ, ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ. ನಟಿ ಅಂದಕ್ಕೆ ಅಭಿಮಾನಿಗಳು ಸಹ ಮನಸೋತಿದ್ದಾರೆ. 
 

77

ಕಾಮೆಂಟ್ ಪೂರ್ತಿ ಪ್ರೀತಿಯ ಸುರಿಮಳೆ ಸುರಿಸಿರುವ ಅಭಿಮಾನಿಗಳು ಸೌಂದರ್ಯದ ಗಣಿ, ಬ್ರ್ಯಾಂಡ್ ಆಫ್ ಬ್ಯೂಟಿ, ಸುಂದರಿ ಯುವರಾಣಿ, ಗಾರ್ಜಿಯಸ್, ಮುದ್ದು ಗೊಂಬೆ, ಅಪ್ಸರೆ, ದೇವತೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಿಮಗೇನು ಅನಿಸುತ್ತೆ, ನಿಜವಾಗ್ಲೂ ದೇವ ಲೋಕದ ಅಪ್ಸರೆ ಥರಾನೆ ಕಾಣಿಸ್ತಿದ್ದಾರಲ್ವಾ ತನ್ವಿ ರಾವ್. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories